ಇಸ್ರೋ ವಿಜ್ಞಾನಿ ಪುತ್ರ ಸೈಬರ್ ಕ್ರಿಮಿನಲ್ ನಂ.1

ISRO Scientist Son Fraud Case
ಅಹಮದಾಬಾದ್, ಅ.1: ನಮ್ಮಲ್ಲಿ ಇದ್ದಂತೆ ಅಹಮದಾಬಾದಿನಲ್ಲೂ ಒಂದು ಸೈಬರ್ ಕ್ರೈಂ ಸೆಲ್ ಇದೆ. Detection of Crime Branch (DCB) ಅಡಿಯಲ್ಲಿರುವ ಸೈಬರ್ ಪೊಲೀಸ್ ಪಡೆ ಭಾನುವಾರ ಐನಾತಿ ತಂಡವೊಂದನ್ನು ತನ್ನ ಬಲೆಗೆ ಕೆಡವಿಕೊಂಡಿದೆ. ಕ್ರೆಡಿಟ್ ಕಾರ್ಡ್ ಕ್ಲೋನಿಂಗ್ ನಲ್ಲಿ ನಿಪುಣರಾಗಿದ್ದ ಈ ಕಳ್ಳರು ಪೊಲೀಸರಿಗೆ ಸಕತ್ ಚಳ್ಳೆಹಣ್ಣು ತಿನ್ನಿಸುತ್ತಿದ್ದರು.

ಸೆರೆಸಿಕ್ಕ ಮೂವರಲ್ಲಿ ಇಬ್ಬರು ಕಾಲ್ ಸೆಂಟರ್ ನಡೆಸುತ್ತಿದ್ದಾರೆ. ಮತ್ತೊಬ್ಬ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಂಸ್ಥೆ ಖ್ಯಾತ ವಿಜ್ಞಾನಿಯೊಬ್ಬರ ಮಗ ಎಂಬುದು ತಿಳಿದು ಬಂದಿದೆ.

ಪಲ್ಡಿ ಪ್ರದೇಶದಲ್ಲಿರುವ ಅಂಜಲಿ ಸಿನಿಮಾ ಮಂದಿರ ಬಳಿ ಪೊಲೀಸರು ಮಫ್ತಿಯಲ್ಲಿ ಹೊಂಚು ಹಾಕಿ ಕುಳಿತ್ತಿದ್ದರು. ಸ್ವಿಫ್ಟ್ ಕಾರಿನಲ್ಲಿ ಬಂದ ಮೂವರು ಯುವಕರನ್ನು ಗುರುತಿಸಿ ತೆರೆಯಿಂದ ಹೊರ ಬಂದ ಪೊಲೀಸರು ಮೂವರು ಯುವಕರನ್ನು ಹಿಡಿದಿದ್ದಾರೆ.

ಬಂಧಿತರನ್ನು ಜುಹಾಪುರದ ಜಫರ್ ಅಪಾರ್ಟ್ಮೆಂರ್ಟ್ ನಿವಾಸಿ 23 ವರ್ಷದ ಅಂಕಿತ್ ಮರ್ಚೆಂಟ್, ಜೋಧ್ ಪುರ ಕ್ರಾಸ್ ರೋಡ್ ಬಳಿ ಪ್ರಮುಖ್ ರೆಸಿಡೆನ್ಸಿ ನಿವಾಸಿ 22 ವರ್ಷದ ಭಾವಿಕ್ ಅಲಿಯಾಸ್ ರಾಹುಲ್ ಖಾತ್ ಸೂರ್ಯ ಹಾಗೂ ರಾಜಸ್ಥಾನ ಮೂಲದ 27 ವರ್ಷದ ಅಮಿತ್ ಮಾಲಿ ಅಲಿಯಾಸ್ ಶಾಂತಿಲಾಲ್ ಎಂದು ಗುರುತಿಸಲಾಗಿದೆ. ಭಾವಿಕ್ ಅವರ ತಂದೆ ಇಸ್ರೋದಲ್ಲಿ ಎ ಗ್ರೇಡ್ ವಿಜ್ಞಾನಿ ಎಂದು ಪೊಲೀಸರು ಹೇಳಿದ್ದಾರೆ.

ನಕಲಿ ಸಾರ್ ನಕಲಿ : ಮೂವರ ಬಳಿ ಇದ್ದ ವಿವಿಧ ಬ್ಯಾಂಕುಗಳಿಗೆ ಸೇರಿದ ಸುಮಾರು 33 ನಕಲಿ ಕ್ರೆಡಿಟ್ ಕಾರ್ಡ್ ಗಳನ್ನು ಜಪ್ತಿ ಮಾಡಿದ ಪೊಲೀಸರು ದಂಗಾಗಿದ್ದಾರೆ. ಅಸಲಿ ಕ್ರೆಡಿಟ್ ಕಾರ್ಡ್ ತಲೆ ಮೇಲೆ ಹೊಡೆದಂತೆ ನಕಲಿ ಕಾರ್ಡ್ ರೂಪಿಸಿರುವ ಈ ತಂಡದಿಂದ ಇನ್ನಷ್ಟು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2 ಖಾಲಿ ಕ್ರೆಡಿಟ್ ಕಾರ್ಡ್ಸ್, 7 ಲ್ಯಾಪ್ ಟಾಪ್, 10 ಮೊಬೈಲ್ ಹಾಗೂ 2 ದುಬಾರಿ ಕೈ ಗಡಿಯಾರಗಳಿ ಇದರಲ್ಲಿ ಸೇರಿದೆ.

ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿ ಹಣ ತೆಗೆದುಕೊಂಡು ಶಾಪಿಂಗ್ ಮಾಡುವುದು ಈ ಮೂವರ ಖಯಾಲಿಯಾಗಿತ್ತು ಎಂದು ತಿಳಿದು ಬಂದಿದೆ. ನಕಲಿ ಮಾಡಿದ ಎಲ್ಲಾ ಕಾರ್ಡ್ ಗಳನ್ನು ವಿದೇಶಿ ಪ್ರಜೆಗಳಿಂದ ಕದ್ದು ಕ್ಲೋನ್ ಮಾಡಿದ್ದು ಎಂದು ವಿಚಾರಣೆ ವೇಳೆ ಮೂವರು ಒಪ್ಪಿಕೊಂಡಿದ್ದಾರೆ.

ಇಸ್ರೋ ವಿಜ್ಞಾನಿ ಮಗನಿಗೆ ಕ್ರೆಡಿಟ್ ಕಾರ್ಡ್ ಕ್ಲೋನಿಂಗ್ ಬಗ್ಗೆ ಒಂದಿಷ್ಟು ಮಾಹಿತಿ ಗೊತ್ತಿತ್ತು ಅದರೆ, ಪ್ರಾಕ್ಟಿಕಲ್ ಆಗಿ ಅದನ್ನು ಎಂದೂ ಪ್ರಯೋಗಿಸಿ ಪರೀಕ್ಷಿಸಿರಲಿಲ್ಲ. ಹಕಂ ಸಿಂಗ್ ರಾವ್ ಎನ್ನುವ ರಾಜಸ್ಥಾನಿ ಮೂಲದ ನಕಲಿ ಕಾರ್ಡ್ ನಿಪುಣನ ಬಳಿ ಇರುವ ಕಾರ್ಡ್ ಕ್ಲೋನಿಂಗ್ ಓನಾಮ ಕಲಿತ್ತಿದ್ದಾರೆ.

ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಮೇಲಿನ ಸಾಫ್ಟ್ ಡಾಟಾ ಹೊರತೆಗೆಯುವುದು ಹೇಗೆ ಎಂಬುದನ್ನು ಎರಡು ತಿಂಗಳು ಅಭ್ಯಸಿಸಿದ ರಾವ್ ಹಾಗೂ ಮಾಲಿ ಅಹಮದಾಬಾದಿಗೆ ಬಂದು ಸ್ಟಾರ್ ಹೋಟೆಲ್ ನಲ್ಲಿ ತಂಗಿದ್ದಾರೆ.

ಮರ್ಚೆಂಟ್ ಹಾಗೂ ಭಾವುಕ್ ಇಬ್ಬರು ಕಾಲ್ ಸೆಂಟರ್ ನಡೆಸುತ್ತಿದ್ದು, ಈ ಕಾರ್ಡ್ ಗಳನ್ನು ಬಳಸಿ ವಿವಿಧ ಮಾಲ್ ಗಳಿಂದ ಅನೇಕ ಬಾರಿ ಖರೀದಿಸಿ ಪರೀಕ್ಷಿಸಿದ್ದಾರೆ. ನಂತರ ಇದೇ ಖಯಾಲಿ ಮುಂದುವರೆಸಿ ಮಜಾ ಉಡಾಯಿಸಿದ್ದಾರೆ ಸುಮಾರು 33 ಕ್ರೆಡಿಟ್ ಕಾರ್ಡ್ ಬಳಸಿ ಅದೆಷ್ಟು ದುಡ್ಡು ಕಬಳಿಸಿದ್ದಾರೋ ಇನ್ನೂ ಮಾಹಿತಿ ಸಿಕ್ಕಿಲ್ಲ. ರಾವ್ ಈ ಹಿಂದೆ ಎರಡು ತಿಂಗಳು ಜೈಲುವಾಸ ಅನುಭವಿಸಿ ಹೊರಬಿದ್ದಿದ್ದ. ಮಾಲಿ 2009ರ ನಕಲಿ ನೋಟು ಪ್ರಕರಣದ ಆರೋಪಿಯಾಗಿದ್ದಾನೆ. ಮಾಲಿ ಸಹವಾಸಕ್ಕೆ ಬಿದ್ದು ಭಾವಿಕ್ ಹಾಗೂ ಅಂಕಿತ್ ಕಂಬಿ ಎಣಿಸುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+