ಹೈ ಪ್ರೊಫೈಲ್ ರೇಪ್ ಪ್ರಕರಣ: ಐಎಎಸ್ ಅಧಿಕಾರಿ ಸೆರೆ

ಹೌದು, ಶಶಿ ಭೂಷಣ್ ಎಂಬ ಉತ್ತರ ಪ್ರದೇಶ ಐಎಎಸ್ ಅಧಿಕಾರಿಯನ್ನು ಮಾನಭಂಗ ಆರೋಪದ ಮೇಲೆ ಪೊಲೀಸರು ಲಖ್ನೋದಲ್ಲಿ ಸೋಮವಾರ ಬಂಧಿಸಿದ್ದಾರೆ.
ಶಶಿ ಭೂಷಣ್ ಪ್ರಸ್ತುತ ಉತ್ತರ ಪ್ರದೇಶ ಸರಕಾರದ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ವಿರುದ್ಧ ಗಂಭೀರ ಆರೋಪ ಮಾಡಿರುವುದು ಗೂಗಲ್ ಸಂಸ್ಥೆಯ ಭಾರತೀಯ ಉದ್ಯೋಗಿ (Google India executive). ಈಕೆಯ ಮಾನಭಂಗ ಮಾಡಿದ ಆರೋಪದ ಮೇಲೆ ರೈಲ್ವೆ ಪೊಲೀಸರು ಶಶಿ ಭೂಷಣರನ್ನು ಬಂಧಿಸಿದ್ದಾರೆ.
ಭಾನುವಾರ ರಾತ್ರಿ ಲಖ್ನೋ ಮೇಲ್ ಗಾಡಿಯಲ್ಲಿ ಈ ಮಾನಭಂಗ ಪ್ರಕರಣ ನಡೆದಿದೆ ಎಂದು ಮೂಲಗಳು ತಿಳಿಸಿವೆ. ತನಿಖೆ ಮುಂದುವರಿದಿದ್ದು, ಬಂಧಿತ ಆರೋಪಿ ಶಶಿ ಭೂಷಣರನ್ನು ಇಂದು ಸಂಜೆ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಭಾನುವಾರ ರಾತ್ರಿ ಲಖ್ನೋ ಮೇಲ್ ಗಾಡಿಯಲ್ಲಿ ಅತ್ತೆಯ ಜತೆ ಬರುತ್ತಿದ್ದ ಸದರಿ Google India ಉದ್ಯೋಗಿ ಮತ್ತು ಆರೋಪಿ ಶಶಿ ಭೂಷಣ ನಡುವೆ ಈ ರಾದ್ಧಾಂತ ನಡೆದಿದೆ ಎಂದು ರೈಲ್ವೆ ಸುರಕ್ಷಾ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications