ಅ.1 ರಿಂದ ಪಾಸ್ ಪೋರ್ಟ್ ಅರ್ಜಿ ಶುಲ್ಕ ಹೆಚ್ಚಳ

ಸಾಮಾನ್ಯ ವಿಭಾಗದಲ್ಲಿ 1000 ರೂ.ಗಳಿಂದ 1500.ರೂ. ಗೆ ಹಾಗೂ ತತ್ಕಾಲ್ ವಿಭಾಗದಲ್ಲಿ 2500ರೂ. ಗಳಿಂದ 3500ರೂ.ಗೆ ಬೆಲೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಅನಿವಾಸಿ ಭಾರತೀಯರು ಇನ್ಮುಂದೆ 75 ಡಾಲರ್( ಯುರೋ 48 ರಿಂದ 60ಕ್ಕೆ ಹೆಚ್ಚಳ) ಪಾವತಿಸಬೇಕಾಗುತ್ತದೆ ಎಂದು Ministry for External Affairs (MEA) ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
1993ರಲ್ಲಿ ಪಾಸ್ ಪೋರ್ಟ್ ಶುಲ್ಕ ನಿಗದಿಮಾಡಲಾಗಿತ್ತು. ನಂತರ ಮಾರ್ಚ್ 29 2002 ರಂದು ಪಾಸ್‌ಪೋರ್ಟ್ ಹಾಗೂ ಅದಕ್ಕೆ ಸಂಬಂಧಿಸಿದ ಸೇವೆಗಳ ಬೆಲೆ ನವೀಕರಿಸಲಾಗಿತ್ತು. ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಸಾಮಾನ್ಯ ವಿಭಾಗದಲ್ಲಿ ನವೀಕರಿಸಿದ ದರ 40 ರಿಂದ 75 ಡಾಲರ್‌ಗೆ ಹಾಗೂ 48 ರಿಂದ 60 ಯೂರೋಗಳಿಗೆ ಏರಿಕೆಯಾಗುತ್ತದೆ.
ಭಾರತೀಯ ಅಂಚೆ ವೆಚ್ಚ, ಪಾಸ್‌ಪೋರ್ಟ್ ಪುಸ್ತಕ ಮುದ್ರಣ, ಐಟಿ ವೆಚ್ಚ, ಉಪಕರಣಗಳ ವೆಚ್ಚ ಹಾಗೂ ಇತರೆ ವೆಚ್ಚಗಳಲ್ಲಿ ಕಳೆದ ಹತ್ತು ವರ್ಷಗಳಿಂದ ಏರಿಕೆಯಾಗಿಲ್ಲದ ಕಾರಣ ಪಾಸ್‌ಪೋರ್ಟ್ ದರ ಏರಿಕೆ
ಅನಿವಾರ್ಯವಾಗಿತ್ತು. ಪಾಸ್ ಪೋರ್ಟ್ ಸೇವಾ ಯೋಜನೆಯಡಿಯಲ್ಲಿ ಸುಮಾರು 77 ಪಾಸ್ ಪೋರ್ಟ್ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಸಚಿವಾಲಯ ಹೇಳಿದೆ,












Click it and Unblock the Notifications