ಜನ ಯಾವಾಗ ಖುಷಿಯಾಗಿರುತ್ತಾರೆ ಗೊತ್ತಾ!?

people-are-happiest-at-age-9-68-london-study
ಬೆಂಗಳೂರು, ಸೆ.28: ಹೌದು, ಜನ ಯಾವಾಗ ಖುಷಿಯಾಗಿರ್ತಾರೆ ಗೊತ್ತಾ!? ಹೀಗಂತ ಕೇಳಿದ್ದೇ ತಡ ತಲೆಗೊಂದು ಉತ್ತರ, ಥರಹೇವಾರಿ ಉತ್ತರಗಳು ಸಿಗುವುದು ಗ್ಯಾರೆಂಟಿ. ಹಾಗಂತಲೇ, ಇದನ್ನು ವಯಸ್ಸಿಗನುಗುಣವಾಗಿ ವರ್ಗೀಕರಿಸಲಾಗಿದೆ. ಅಂದಹಾಗೆ, ಲಂಡನ್ನಿನ Juicy Drop Prop ಎಂಬ ಕಂಪನಿ ಈ ಬಗ್ಗೆ ಸಮೀಕ್ಷೆ ನಡೆಸಿ, ಜನ ಹೀಗ್ಹೀಗೆ ಎಂದು ಹೇಳಿದೆ.

ಈ ಸಮೀಕ್ಷೆಯ ಪ್ರಕಾರ 9 ವರ್ಷದ ಮತ್ತು 68 ವರ್ಷ ಆಸುಪಾಸಿನಲ್ಲಿ ಜನ ನಿಜಕ್ಕೂ ತುಂಬಾ ಖುಷಿಯಾಗಿರುತ್ತಾರಂತೆ. ಹಾಗಂತ ಹೇಳಿದ್ದೇ ತಡ, ಮನುಷ್ಯ ಯಾವಾಗ ಸಖತ್ ದುಃಖದಲ್ಲಿರುತ್ತಾನೆ ಹೇಳು ಶಿವಾ ಎಂದೂ ಕೇಳುವವರಿರುತ್ತಾರೆ.

9 ವರ್ಷದ ಮಕ್ಕಳು ಯಾಕೆ ಖುಷಿಯಾಗಿರುತ್ತಾರೆ ಅಂದರೆ ಆ ವಯಸ್ಸಿನಲ್ಲಿ ಹಣಕಾಸು, ಜೀವನ ಸಂಬಂಧಗಳು, ಮುಂದೆ ಭವಿಷ್ಯ ಹೇಗಪ್ಪಾ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವಂತಿಲ್ಲ. ಅಸಲಿಗೆ ಅದರ ಬಗ್ಗೆ ಕಲ್ಪನೆಯೇ ಇರುವುದಿಲ್ಲ. ಬಿಂದಾಸಾಗಿ ತಮ್ಮದೇ ಲೋಕದಲ್ಲಿ ಸ್ವಚ್ಚಂದವಾಗಿ ವಿಹರಿಸಬಹುದು ಎಂಬುದು ಮಕ್ಕಳ ಲೆಕ್ಕಾಚಾರವಾಗಿರುತ್ತದೆ.

ಇನ್ನು 68 ವರ್ಷ ಆಸುಪಾಸಿನವರಿಗೆ ಜವಾಬ್ದಾರಿಗಳೆಲ್ಲ ಮುಗಿದು, ಆರಾಮಾಗಿ ಕಾಲ ಕಳೆಯುವ ಸಮಯ. ಹಾಗಾಗಿ, ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಉಳಿದುಬಿಡುವ ಮನೋಸ್ಥಿತಿಯಲ್ಲಿರುವುದರಿಂದ ಈ ವಯಸ್ಸಿನವರು ಖುಷಿಯಾಗಿರುತ್ತಾರಂತೆ!

ಹಾಗಾಗಿಯೇ 9/68 ಮಂದಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಮತ್ತು ಒಬ್ಬರನ್ನೊಬ್ಬರು ಅವಲಂಬಿಸುವುದು. ಕೆಲಸದ ಒತ್ತಡದಲ್ಲಿರುವ ಅಪ್ಪ-ಅಮ್ಮನಿಂದ ಸುರಕ್ಷಿತ ದೂರದಲ್ಲಿರಲು ಇವರು ಬಯಸುತ್ತಾರೆ. ಇನ್ನು ಹಿರಿಯರೂ ಅಷ್ಟೇ ಕೆಲಸದ ಒತ್ತಡದಲ್ಲಿರುವವರನ್ನು ಡಿಸ್ಟರ್ಬ್ ಮಾಡದೆ, ಮಕ್ಕಳೊಂದಿಗೆ ಮಕ್ಕಳಾಗಿದ್ದುಬಿಡಲು ಬಯಸುತ್ತಾರೆ.

ಅದೇ 20-40 ವರ್ಷದವರು ಅಷ್ಟೊಂದು ಡೇರಿಂಗ್ ಆಗಲು ಬಯಸುವುದಿಲ್ಲ. ಸಾಹಸ ಮಾಡುವುದಕ್ಕೆ ಹಾತೊರೆಯುತ್ತಾರಾದರೂ ಜವಾಬ್ದಾರಿಗಳು ಅವರನ್ನು ಜಗ್ಗಿ ಹಿಡಿಯುತ್ತವೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರ ಸ್ಪಷ್ಟ ಅನಿಸಿಕೆ/ಅಭಿಪ್ರಾಯಗಳು. ಸಾಲಸೋಲಗಳಿಂದ ಮುಕ್ತಿ ಬಯಸುವುದು ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳುವುದು ಇವರ ಆದ್ಯತೆಯ ವಿಷಯಗಳಾಗಿರುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+