ಕಠ್ಮಂಡು ಭೀಕರ ವಿಮಾನ ಅಪಘಾತ: 19 ಮಂದಿ ಸಾವು

nepal-katmandu-sita-air-plane-crash-19-killed
ಕಠ್ಮಂಡು, ಸೆ.28: ಪ್ರವಾಸಿಗರ ಸ್ವರ್ಗ ಎನಿಸಿರುವ ನೇಪಾಳದಲ್ಲಿ ಮತ್ತೊಂದು ವಿಮಾನ ಅಪಘಾತವಾಗಿದೆ. 19 ಮಂದಿ ಪ್ರಯಾಣಿಕರಿದ್ದ ಸೀತಾ ಏರ್ ಲೈನ್ಸ್ ಜೆಟ್ ವಿಮಾನವೊಂದು ಬೆಟ್ಟಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ವಿಮಾನದಲ್ಲಿದ್ದ ಅಷ್ಟೂ ಮಂದಿ ಸುಟ್ಟು ಕರಕಲಾಗಿದೆ. ಮೃತರ ವಿವರ ಸದ್ಯಕ್ಕೆ ತಿಳಿದುಬಂದಿಲ್ಲ. ಸೀತಾ ಏರ್ ಲೈನ್ಸ್ ಜೆಟ್ ವಿಮಾನವು ಮೌಂಟ್ ಎವರೆಸ್ಟ್ ಪ್ರವಾಸಿತಾಣದ ಹೆಬ್ಬಾಗಿಲಾದ ಲುಕ್ಲಾದತ್ತ (Lukla) ಹೊರಟಿದ್ದಾಗ ಮನೋಹರ ನದಿ ಸಮೀಪ ಇಂದು ಮುಂಜಾನೆ 6.30ರಲ್ಲಿ ಈ ಅಪಘಾತ ಸಂಭವಿಸಿದೆ.

ಕಠ್ಮಂಡು ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಸಮೀಪದಲ್ಲೇ ವಿಮಾನ ಅಪಘಾತಕ್ಕೀಡಾಗಿ ಸಂಪೂರ್ಣ ಭಸ್ಮವಾಗಿದೆ. ಇಟಲಿಯ 16 ಪ್ರವಾಸಿಗರು 3 ಮಂದಿ ಸಿಬ್ಬಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. (PTI)

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+