ಹೀನಾ-ಬಿಲಾವಲ್ ಎಕ್ಸಟರ್ನಲ್ ಅಫೇರ್ಸ್ ವಿರುದ್ಧ ಫತ್ವಾ?

ಹೀನಾ-ಬಿಲಾವಲ್ ನಡುವೆ ವರದಿಯಾಗಿರುವಂತೆ ಯಾವುದೇ ಸಂಬಂಧವಿದ್ದರೆ ಅದರ ವಿರುದ್ಧ ಫತ್ವಾ ಹೊರಡಿಸಲು ಇಸ್ಲಾಮಿಕ್ ಸಂಘಟನೆಗಳು ಆಲೋಚಿಸುತ್ತಿವೆ ಎನ್ನಲಾಗಿದೆ. ಪಾಕಿಸ್ತಾನದ ಧಾರ್ಮಿಕ ಕಾನೂನಿನಲ್ಲಿ ವ್ಯಭಿಚಾರ, ಪ್ರಣಯದಂತಹ ಅಕ್ರಮ ಸಂಬಂಧಗಳಿಗೆ ಉಗ್ರ ಶಿಕ್ಷೆ ವಿಧಿಸುವ ಸಂಪ್ರದಾಯ ಇದೆ.
ಹೀನಾ-ಬಿಲಾವಲ್ ಪ್ರಣಯದಾಟ ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಫತ್ವಾ ಆದೇಶ ಹೊರಬೀಳುವ ಸಾಧ್ಯತೆಯಿದೆ ಎಂದು ಬಾಂಗ್ಲಾ ವಾರಪತ್ರಿಕೆ Blitz ವರದಿ ಉಲ್ಲೇಖಿಸಿ, ಪಾಕ್ ದೈನಿಕವೊಂದು (The Daily Ittefaq) ವರದಿ ಮಾಡಿದೆ.
35 ವರ್ಷದ ಹೀನಾ ರಬ್ಬಾನಿ ಮತ್ತು 24 ವರ್ಷದ ಬಿಲಾವಲ್ ಭುಟ್ಟೋ ನಡುವೆ ಬಹುಕಾಲದಿಂದ ಪ್ರೇಮವಿದೆ ಇಬ್ಬರೂ ಮದುವೆಯಾಗಲು ಸಿದ್ಧರಿದ್ದಾರೆ ಎಂದು ಇದೇ ಪತ್ರಿಕೆ ಸೆ. 23ರಂದು ಸವಿಸ್ತಾರ ವರದಿ ಪ್ರಕಟಿಸಿತ್ತು. ಅದಾದ ನಂತರ ಇಡೀ ಜಗತ್ತಿನಾದ್ಯಂತ ಅಂತರ್ಜಾಲ ಮತ್ತು ಮಾಧ್ಯಮಗಳಲ್ಲಿ ಈ external affairs ಕಾಡ್ಗಿಚ್ಚಿನಂತೆ ಹಬ್ಬಿತು.
ಈ ಮಧ್ಯೆ, 'ಅಯ್ಯೋ ಅದೆಲ್ಲಾ ಸುಳ್ಳೇ ಸುಳ್ಳು. 'ಅವರಿಬ್ಬರ' ಮಧ್ಯೆ ಬಿಲ್ಕುಲ್ ಅಂಥದ್ದೇನೂ ಇಲ್ಲ. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ನಮ್ಮ ಸಂಸಾರದಲ್ಲಿ ಹುಳಿ ಹಿಂಡಬೇಡಿ' ಎಂದು ಸುರಸುಂದರಿ ಹೀನಾಳ ಪತಿ ಫಿರೋಜ್ ಗುಲ್ಜಾರ್ ಅಲವತ್ತುಕೊಂಡಿದ್ದಾರೆ.
ಪ್ರಸ್ತುತ ವಿಶ್ವಸಂಸ್ಥೆಯ ಸಭೆಗೆ ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯ ನೇತೃತ್ವದ ನಿಯೋಗದೊಂದಿಗೆ ಅಮೆರಿಕಕ್ಕೆ ಬಂದಿಳಿದಿರುವ ಸಚಿವೆ ಹೀನಾ ರಬ್ಬಾನಿ ಅವರು ಹೇಳಿಕೆ ನೀಡಿದ್ದಾರೆ. ತಮ್ಮ ಮತ್ತು ಬಿಲಾವಲ್ ಭುಟ್ಟೋ ಬಗೆಗಿನ ವರದಿಗಳು ಬೇಜವಾಬ್ದಾರಿ ಹಾಗೂ ಖಂಡನಾರ್ಹ ಎಂದು ಗುಡುಗಿದ್ದಾರೆ.












Click it and Unblock the Notifications