ಶಾಮನೂರಿಗೆ ಪತ್ರ: ಲಿಂಗಾಯತರ ಕೆಣಕಿದ ಪರಮೇಶ್ವರ
ಬೆಂಗಳೂರು,
ಸೆ. 24: ಸಣ್ಣ ಪ್ರಮಾಣದಲ್ಲಿ ಹೊಗೆಯಾಡುತ್ತಿದ್ದ ಭಿನ್ನಮತ ಎಂಬುದು ಚುನಾವಣೆಯ ಮುನ್ನಾ ಕಾಲದಲ್ಲಿ ಕಾಡ್ಗಿಚ್ಚಿನಂತೆ ಹಬ್ಬುವ ಲಕ್ಷಣಗಳು ದಟ್ಟವಾಗಿವೆ. id="toptextpromo"> id='are-slot-1' class='oiad oi-axt oiadv'>ಪಕ್ಷದ
ಯಾವುದೇ ಸಭೆಗಳಲ್ಲಿ ತಾವು ಕಾಣಿಸಿಕೊಳ್ಳುತ್ತಿಲ್ಲ. ಹಿರಿಯರಾದ ನೀವು ಹೀಗೆ ಮಾಡಿದರೆ ಹೇಗೆ? ಮುಂದಿನ ದಿನಗಳಲ್ಲಿ ಸಂಘಟನಾತ್ಮಕ ಸಭೆಯಲ್ಲಿ ತಪ್ಪದೆ ಪಾಲ್ಗೊಳ್ಳಿ' ಎಂಬ ಒಕ್ಕಣೆಯ ಕಾಗದಪತ್ರವನ್ನು ದಾವಣಗೆರೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರಿನಿಂದ ರವಾನಿಸಿದ್ದಾರೆ.id='are-slot-2' class='oiad oi-axt oiadv'>

ಪರಮೇಶ್ವರರ ಪತ್ರದ ಸಾರವೇನು?
ಆಗಸ್ಟ್ 27ರಂದು ನಡೆಯಲಿರುವ ಕೆಪಿಸಿಸಿ ಸಭೆಗೆ ಬರುವಂತೆ ಕೆಪಿಸಿಸಿ ಖಜಾಂಚಿ ಶಾಮನೂರು ಶಿವಶಂಕರಪ್ಪ ಅವರಿಗೆ ಪರಮೇಶ್ವರ್ ಪತ್ರ ಬರೆದಿದ್ದರಂತೆ. ಆದರೆ ಶಾಮನೂರು ಆ ಸಭೆಯಲ್ಲಿ ಪಾಲ್ಗೊಂಡಿಲ್ಲ. ಇದರಿಂದ ಅಸಮಾಧಾನಗೊಂಡ ಡಾ. ಪರಮೇಶ್ವರ್ ಅವರು ಸೆ. 7ರಂದು ಮತ್ತೊಂದು ಪತ್ರ ಬರೆದು 'ಯಾಕೆ ಬರಲಿಲ್ಲ. ಇದು ಚುನಾವಣೆಯ ವರ್ಷ. ಹೀಗೆಲ್ಲ ಮಾಡಿದರೆ ಹೇಗೆ?. ನೀವು ಗೈರು ಹಾಜರಾಗಿದ್ದನ್ನು ಗಂಭೀರವಾಗಿ ಪರಿಗಣಿಸಲಾಗುವುದು' ಎಂದು ಶಿವಶಂಕರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಪತ್ರ ವಿವಾದಕ್ಕೀಡಾಗಿದ್ದು, ಲಿಂಗಾಯತ ಸಮುದಾಯದವರನ್ನು ಕೆರಳಿಸಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ/ ಆ ಸ್ಥಾನಕ್ಕೆ ಶಾಮನೂರು ಶಿವಶಂಕರಪ್ಪ ಅವರು ತಮ್ಮನ್ನು ಪ್ರತಿಷ್ಠಾಪಿಸಿ ಎಂದು ಅಲವತ್ತುಕೊಂಡಿರುವಾಗ ಪಕ್ಷದಲ್ಲಿನ ಸಂಘರ್ಷ ಈಗ ತಾರಕಕ್ಕೇರಿದೆ.
ಡಾ. ಜಿ. ಪರಮೇಶ್ವರ್ ಬರೆದ ಪತ್ರದ ಬಗ್ಗೆ ಬಹಿರಂಗವಾಗಿ ಕಿಡಿಕಾರಿರುವ ಮೇಲ್ಮನೆ ಮಾಜಿ ಸದಸ್ಯ ಕೆ.ಸಿ. ಕೊಂಡಯ್ಯ ಅವರು 'ಪರಮೇಶ್ವರ್ ವಿರುದ್ಧ ಪಕ್ಷದ ಹೈಕಮಾಂಡ್‌ಗೆ ದೂರು ನೀಡಲಾಗುವುದು' ಎಂದು ಬಳ್ಳಾರಿಯಲ್ಲಿ ಎಚ್ಚರಿಸಿದ್ದಾರೆ.

ನಾನೇನು ಹಾರಿಕೊಂಡು ಹೋಗೋಕಾಗುತ್ತದಾ?
ಇನ್ನೇನು ಸಭೆ ಆರಂಭಗೊಳ್ಳಲು ಕೆಲವೇ ಗಂಟೆಗಳು ಇರುವಾಗ ನನ್ನನ್ನು ಕರೆದರೆ ನಾನೇನು ಹಾರಿಕೊಂಡು ಹೋಗಲಾಗುತ್ತದಾ?. ಇಂದು ಬೆಂಗಳೂರಿನಲ್ಲಿ ಡಾ ಜಿ ಪರಮೇಶ್ವರ್ ಅವರನ್ನು ಹೀಗೇ ಕೇಳುತ್ತೇನೆ ಎಂದು ಕೆಪಿಸಿಸಿ ಖಜಾಂಚಿ ಶಾಮನೂರು ಶಿವಶಂಕರಪ್ಪ ಅವರು ಪ್ರತಿಕ್ರಯಿಸಿದ್ದಾರೆ.
ಹಿಂದೆಂದೂ ಯಾವುದೇ ಸಭೆಗೆ ಗೈರು ಹಾಜರಾದವನಲ್ಲ. ಬೆಂಗಳೂರಿನಲ್ಲಿದ್ದಾಗಲೆಲ್ಲ ತಪ್ಪದೇ ಪಕ್ಷದ ಸಭೆಯಲ್ಲಿ ಹಾಜರಾಗುತ್ತೇನೆ. ಆದರೆ ಸಭೆಯ ಬಗ್ಗೆ ಮುಂಚೆಯೇ ಮಾಹಿತಿಯನ್ನೂ ನೀಡದೆ, ಕೊನೆ ಘಳಿಗೆಯಲ್ಲಿ ಸಭೆಗೆ ಬರುವಂರತೆ ಆಹ್ವಾನಿಸಿದರೆ ದಾವಣಗೆರೆಯಿಂದ ನಾನೇನು ಹಾರಿಕೊಮಡು ಹೋಗಲಿಕ್ಕೆ ಆಗುತ್ತದಾ? ಎಂಬುದು ಶಾಮನೂರರ ಪ್ರಶ್ನೆ.
ಈ ಮಧ್ಯೆ ಪಕ್ಷದಲ್ಲಿನ ಭಿನ್ನಮತಕ್ಕೆ ಸಾಥ್ ನೀಡಿರುವ ರಾಣಿ ಸತೀಶ್ ಅವರು ಪಕ್ಷದಲ್ಲಿನ ಪರಿಸ್ಥಿತಿಯ ಬಗ್ಗೆ ದೆಹಲಿಯಲ್ಲಿ ಅಹಮದ್ ಪಟೇಲ್‌ಗೆ ಕಳೆದ ವಾರ ಮನವರಿಕೆ ಮಾಡಿಕೊಟ್ಟಿದ್ದಾರೆ. ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಮುಂದಿನ ವಾರದಲ್ಲಿ ಮತ್ತೂಮ್ಮೆ ನಿಯೋಗ ಹೊರಡಲಿದೆ ಎಂದು ಮೂಲಗಳು ಹೇಳಿವೆ.


Click it and Unblock the Notifications
