ಬಾಡಿಗೆ ಮನೆ ಗಲಾಟೆ, ಬೆಂಗಳೂರಿನಲ್ಲಿ ಶೂಟೌಟ್

Bangalore Shootout Hebbal
ಬೆಂಗಳೂರು, ಸೆ.25: 'ಎಷ್ಟು ಹೇಳಿದರೂ ಬಾಡಿಗೆ ಮನೆ ಬಿಡಲು ಒಪ್ಪದಿದ್ದ ಬಾಡಿಗೆದಾರನ ಮೇಲೆ ಮನೆ ಮಾಲೀಕನೊಬ್ಬ ಸಿಟ್ಟಿಗೆದ್ದು ಕೂಗಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಬಾಡಿಗೆದಾರ ಮನೆ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಸಂಗ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ (ಸೆ.25) ಮಧ್ಯಾಹ್ನ ನಡೆದಿದೆ.

ಬಾಡಿಗೆದಾರ ಪ್ರಕಾಶ್ ಗೌಡ ಸುಮಾರು 5 ಸುತ್ತು ಗುಂಡು ಹಾರಿಸಿದ್ದಾರೆ. ಮನೆ ಮಾಲೀಕ ಮಧು ಅವರ ಮೇಲೆ ಹಾರಿಸಿದ ಗುಂಡು ಮನೆ ಕೆಲಸಗಾರ ಸಿಬಿನ್ ಮ್ಯಾಥ್ಯೂ ಅವರ ಕಾಲಿಗೆ ಬಡಿದಿದೆ. ತೀವ್ರವಾಗಿ ಗಾಯಗೊಂಡ ಮ್ಯಾಥ್ಯೂ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಸೇರಿಸಲಾಗಿದೆ.

ಭುವನೇಶ್ವರಿ ನಗರದಲ್ಲಿ ವಾಸವಿರುವ ಗ್ರಾನೈಟ್ ಉದ್ಯಮಿ ಪ್ರಕಾಶ್ ಗೌಡ ಅವರಿಗೆ ಮನೆ ಖಾಲಿ ಮಾಡುವಂತೆ ಕಳೆದ ಡಿಸೆಂಬರ್ ನಲ್ಲಿ ಮನೆ ಮಾಲೀಕ ಮಧು ಹೇಳಿದ್ದರು. ಅದರೆ, ಜುಲೈ ತಿಂಗಳ ಕೊನೆ ತನಕ ಅವಧಿ ವಿಸ್ತರಿಸುವಂತೆ ಪ್ರಕಾಶ್ ಕೇಳಿಕೊಂಡಿದ್ದರು.

ಇದಕ್ಕೆ ಮನೆ ಮಾಲೀಕ ಮಧು ಒಪ್ಪಿಕೊಂಡರೂ ಬಾಡಿಗೆದಾರನ ಮನೆಯವರಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

'ಮೊದಲು ಮನೆ ಕರೆಂಟ್ ತೆಗೆದರು. ಇವತ್ತು ನೀರು ನಿಲ್ಲಿಸಲು ಪ್ಲಂಬರ್ ಕರೆದುಕೊಂಡು ಬಂದಿದ್ದರು. ನಮ್ಮ ಮನೆಯವರು ಆತ್ಮ ರಕ್ಷಣೆ ಗಾಗಿ ಗುಂಡು ಹಾರಿಸಿದರು, ನಾವು ನಮ್ಮ ರಕ್ಷಣೆಗಾಗಿ ಮನೆಗೆ ಸಿಸಿಟಿವಿ ಅಳವಡಿಸಿಕೊಂಡಿದ್ದಕ್ಕೆ ಮನೆ ಮಾಲೀಕ ಮಧು ಆಕ್ಷೇಪ ವ್ಯಕ್ತಪಡಿಸಿದ್ದರು' ಎಂದು ಪ್ರಕಾಶ್ ಗೌಡ ಅವರ ಪತ್ನಿ ಲಕ್ಷ್ಮಿ ಖಾಸಗಿ ಸುದ್ದಿ ವಾಹಿನಿಯೊಂದಿಗೆ ತಮ್ಮ ಗೋಳು ತೋಡಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಆಗಮಿಸಿದ್ದು, ಶೂಟೌಟ್ ಮಾಡಿದ ಪ್ರಕಾಶ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಶೂಟೌಟ್ ಸಂಸ್ಕೃತಿ: ಬೆಂಗಳೂರಿನಲ್ಲಿ ಬಹುತೇಕ ವಿರಳ ಎನ್ನಬಹುದಾದ ಈ ಕೆಟ್ಟ ಸಂಸ್ಕೃತಿಗೆ ಮತ್ತೆ ಜೀವ ಸಿಕ್ಕಿದೆ. ಬೆಂಗಳೂರು ವಿಶ್ವವಿದ್ಯಾಲಯ ಸಮೀಪ ಮುತ್ತೂಟ್ ಮಿನಿ ಫೈನಾನ್ಸ್ ಮ್ಯಾನೇಜರ್ ಮೇಲೆ ಕಳೆದ ಆಗಸ್ಟ್ ನಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದು ಬಿಟ್ಟರೆ ಈ ರೀತಿಯ ಯಾವುದೇ ಘಟನೆ ದಾಖಲಾಗಿಲ್ಲ.

ಪೊಲೀಸ್ ಶೂಟೌಟ್, ಬೆಮೆಲ್ ಕೃಷ್ಣಪ್ಪ ಹತ್ಯೆ ಪ್ರಕರಣಗಳು ಬಿಟ್ಟರೆ ಬೆಂಗಳೂರಿನಲ್ಲಿ ಗುಂಡಿನ ಸದ್ದು ಕೇಳಿಸಿರಲಿಲ್ಲ. ಆದರೆ, ಮನೆ ಮಾಲೀಕರನ್ನು ಹೆದರಿಸಲು ಬಾಡಿಗೆದಾರರು ಈ ರೀತಿ ಶೂಟೌಟ್ ಗೆ ಇಳಿದಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಸದ್ಯ ಆರೋಪಿ ಪ್ರಕಾಶ್ ಗೌಡ ಅವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+