ಗಿನ್ನಿಸ್ ದಾಖಲೆಗೆ ವಿಂಡೋಸ್ ಆಪ್ ಮ್ಯಾರಥಾನ್

Microsoft Appfest in Bangalore sets Guinness Record
ಬೆಂಗಳೂರು, ಸೆ.23: ಮೈಕ್ರೋಸಾಫ್ಟ್ ಆಯೋಜಿಸಿದ್ದ ಸಾಫ್ಟ್ ವೇರ್ ಅಭಿವೃದ್ಧಿ ಕಾರ್ಯಾಗಾರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ತಂತ್ರಜ್ಞರು ಪಾಲ್ಗೊಂಡು ಹೊಸ ಗಿನ್ನಿಸ್ ದಾಖಲೆ ಬರೆದಿದ್ದಾರೆ.

ವಿಂಡೋಸ್ 8 ಅಪ್ಲಿಕೇಷನ್ ಹಬ್ಬ (app fest) ಮ್ಯಾರಾಥಾನ್ ನಲ್ಲಿ ಸುಮಾರು 2567 ಜನ ಪಾಲ್ಗೊಂಡಿದ್ದರು. ಒಂದೇ ಸ್ಥಳದಲ್ಲಿ ಏಕಕಾಲಕ್ಕೆ ಇಷ್ಟೊಂದು ಮಂದಿ ಸಾಫ್ಟ್ ವೇರ್ ಡೆವಲಪ್ಮೆಂಟ್ ನಲ್ಲಿ ತೊಡಗಿದ್ದು ಐತಿಹಾಸಿಕ ದಾಖಲೆಯಾಗಿದೆ.

ವಿಂಡೋಸ್ ಮೊಬೈಲ್ ಅಪ್ಲಿಕೇಷನ್ (ಅನ್ವಯ ತಂತ್ರಾಂಶ)ಗಳನ್ನು ಅಭಿವೃದ್ಧಿಪಡಿಸಿ, ಪರೀಕ್ಷಿಸಿ, ಪ್ರಾತ್ಯಕ್ಷಿಕೆ ನೀಡುವುದಕ್ಕೆ ಉತ್ತೇಜಿಸಲು ಈ ಮ್ಯಾರಾಥನ್ ಹಮ್ಮಿಕೊಳ್ಳಲಾಗಿತ್ತು.

ಶುಕ್ರವಾರ ಮಧ್ಯಾಹ್ನ ಆರಂಭವಾದ ಈ ಮ್ಯಾರಾಥನ್ ಸತತವಾಗಿ 18 ಗಂಟೆಗಳ ತಂತ್ರಜ್ಞರು, ಟೆಕ್ಕಿಗಳು ಕೋಡಿಂಗ್ ಮಾಡುವ ಮೂಲಕ ಹೊಸ ಆಪ್ಸ್ ಅಭಿವೃದ್ಧಿಯಲ್ಲಿ ತೊಡಗಿದ್ದರು.

ಮೈಕ್ರೋಸಾಫ್ಟ್ ಡೆವಲ್ ಪ್ಮೆಂಟ್ ವಿಭಾಗದ ಉಪಾಧ್ಯಕ್ಷ ಜಾನ್ ಡೆವಾನ್ ಅವರಿಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಉಪಾಧ್ಯಕ್ಷ ಪಾಲ್ ಓನೀಲ್ ಅವರು ದಾಖಲೆ ಪ್ರಮಾಣವನ್ನು ನೀಡಿದ್ದಾರೆ.

ಸಾವಿರಾರು ಉತ್ಸಾಹಿಗಳು ಒಂದೆಡೆ ಸೇರಿ ನೂರಾರು ವಿಂಡೋಸ್ ಅಪ್ಲಿಕೇಷನ್ ಗಳನ್ನು ಏಕಕಾಲಕ್ಕೆ ಅಭಿವೃದ್ಧಿ ಪಡಿಸಿರುವುದು ಸಂತಸ ತಂದಿದೆ ಎಂದು ಮೈಕ್ರೋಸಾಫ್ಟ್ ಕಾರ್ಪೋರೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಚೇರ್ಮನ್ ಭಾಸ್ಕರ್ ಪ್ರಾಮಾಣಿಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮೈಕ್ರೋಸಾಫ್ಟ್ ಕೇಂದ್ರ: ಸಾಫ್ಟ್ ವೇರ್ ದಿಗ್ಗಜ ಮೈಕ್ರೋಸಾಫ್ಟ್ ಸಂಸ್ಥೆ ಕೊನೆಗೂ ಭಾರತದ 'ಐಟಿ ಹಬ್' ಬೆಂಗಳೂರಿನಲ್ಲಿ ತನ್ನ ಅಧಿಕೃತ ಕೇಂದ್ರವನ್ನು ಕಳೆದ ಡಿಸೆಂಬರ್ ನಲ್ಲಿ ಆರಂಭಿಸಿತ್ತು.

ವಿಶ್ವದಾದ್ಯಂತ ಇರುವ ಗ್ರಾಹಕರಿಗೆ ಕನ್ಸಲ್ಟೆನ್ಸಿ ಹಾಗೂ ಎಂಟರ್ ಪ್ರೈಸ್ ಸಂಬಂಧಿತ ಸೇವೆ ನೀಡಲು ಈ ಕೇಂದ್ರ ಬಳಕೆಯಾಗುತ್ತಿದೆ.

2005ರಲ್ಲೇ ಹೈದರಾಬಾದಿನಲ್ಲಿ ಕೇಂದ್ರ ಆರಂಭಿಸಿದ್ದ ಮೈಕ್ರೋಸಾಫ್ಟ್, ಬೆಂಗಳೂರಿನಲ್ಲಿ ಈ ರೀತಿ ಸೌಲಭ್ಯವಿರುವ ಕಚೇರಿ ಆರಂಭಿಸಲು ಕೊನೆಗೂ ಮನಸ್ಸು ಮಾಡಿತ್ತು. 65ಕ್ಕೂ ಅಧಿಕ ದೇಶಗಳಲ್ಲಿನ ತನ್ನ ಕಚೇರಿಗಳೊಡನೆ ಈ ಕಚೇರಿ ನಿರಂತರ ಸಂಪರ್ಕದಲ್ಲಿರುತ್ತದೆ.

ಉನ್ನತ ತಂತ್ರಜ್ಞಾನ, ಆಫೀಸ್ 365 ಮತ್ತು ಬಹುಬೇಡಿಕೆಯ ವಿಂಡೋಸ್ 7 ಅಳವಡಿಕೆ, ದೂರುಗಳು, ಸುಧಾರಣೆ ಬಗ್ಗೆ ಸ್ಥಳೀಯ ತಂಡ ಹೆಚ್ಚಿನ ಮಹತ್ವ ನೀಡಿ ಕಾರ್ಯ ನಿರ್ವಹಿಸಲಿದೆ ಎಂದು ಗ್ಲೋಬಲ್ ಡೆಲಿವರಿ ಪ್ರಧಾನ ವ್ಯವಸ್ಥಾಪಕ ಅಮಿತ್ ಸಿರ್ಕಾರ್ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+