ಕೈಕೊಟ್ಟ IFS ಅಧಿಕಾರಿ: ಪದವೀಧರೆಯಿಂದ ದೂರು

ಹೀಗೆ ವಂಚನೆಯ ದೂರು ನೀಡಿರುವ ನವ ವಧು ಹೋಟೆಲ್ ಮ್ಯಾನೇಜ್ ಮೆಂಟ್ ಪದವೀಧರೆ. ಬುಧವಾರ ನಮ್ಮಿಬ್ಬರ ಮದುವೆಯಾದ ಎರಡು ಗಂಟೆಗಳಲ್ಲೇ ಆತ ಪರಾರಿಯಾಗಿದ್ದಾನೆ ಎಂದು ಬಾಧಿತ ಮಹಿಳೆ ಗುರುವಾರ ಪೊಲೀಸರಿಗೆ ದೂರು ನೀಡಿದ್ದಾರೆ.
ವರ IRS ಅಧಿಕಾರಿಯ ಮನೆಯವರು ಮದುವೆಗೆ ಮುಂಚೆ ಸಾಕಷ್ಟು ಚಿನ್ನಾಭರಣ ಮತ್ತು 7 ಲಕ್ಷ ರೂ. ವರದಕ್ಷಿಣೆ ಪಡೆದಿದ್ದರು. ಆದರೆ, ವಿಮಾನ ಟಿಕೆಟ್‌ಗೆ ಮತ್ತೆ 4 ಲಕ್ಷ ರೂ. ನೀಡಬೇಕೆಂದು ಮದುವೆ ಮನೆಯಲ್ಲೇ ಬೇಡಿಕೆಯಿಟ್ಟರು. ಇದನ್ನು ತನ್ನ ಕುಟುಂಬ ತಿರಸ್ಕರಿಸಿದಾಗ ವರನ ಕುಟುಂಬದವರು ಮದುವೆ ಮನೆಯಿಂದ ಹೊರನಡೆದರು ಎಂದು ಆಕೆ ದೂರಿನಲ್ಲಿ ಆರೋಪಿಸಿದ್ದಾರೆ.
ಮ್ಯಾರೇಜ್ ಬ್ಯೂರೋ ವೆಬ್ ಸೈಟ್ ಮೂಲಕ ಐಎಫ್‌ಎಸ್ ಅಧಿಕಾರಿಯ ತಂದೆ ನಮ್ಮನ್ನು ಸಂಪರ್ಕಿಸಿದ್ದರು. ತನ್ನ ಮಗ ಭಾರತೀಯ ರಾಯಭಾರ ಕಚೇರಿಯೊಂದರಲ್ಲಿ ಅಧಿಕಾರಿಯಾಗಿದ್ದಾನೆ ಎಂದೂ ಹೇಳಿಕೊಂಡಿದ್ದರು ಎಂದು ವಧು ದೂರಿನಲ್ಲಿ ತಿಳಿಸಿದ್ದಾರೆ.
ಇವರಿಬ್ಬರ ಮದುವೆ ನಿಶ್ಚಿತಾರ್ಥ ಜೂನ್ 12ರಂದು ನಡೆದಿತ್ತು. ಆದರೆ ಮದುವೆ ವಿಜೃಂಭಣೆಯಿಂದ ನಡೆಯಬೇಕೆಂದು ವರ IFS ಅಧಿಕಾರಿಯ ಮನೆಯವರು ಬೇಡಿಕೆಯಿಟ್ಟರು. ತಕ್ಷಣ ವಧುವಿನ ಅಪ್ಪ-ಅಮ್ಮ ಮದುವೆಯನ್ನು ರದ್ದುಪಡಿಸಿದರು. ಬಳಿಕ, ಆಕೆಯ ಮದುವೆಯನ್ನು ಒಬ್ಬ ವೈದ್ಯರೊಂದಿಗೆ ನಿಗದಿಪಡಿಸಿದರು. ಆದರೆ, ಐಎಫ್‌ಎಸ್ ಅಧಿಕಾರಿಯ ಮನೆಯವರು ಸದರಿ ವೈದ್ಯನ ಕುಟುಂಬಸ್ಥರಿಗೆ ಅನಾಮಿಕ ಕರೆಗಳನ್ನು ಮಾಡಿ ಆ ಮದುವೆಯನ್ನು ರದ್ದುಪಡಿಸುವಂತೆ ಮಾಡಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
'ಮತ್ತೆ, ಐಎಫ್‌ಎಸ್ ಅಧಿಕಾರಿಯ ತಂದೆ ನನ್ನನ್ನು ಸಂಪರ್ಕಿಸಿದರು. ಮಾತುಕತೆ ಬಳಿಕ ಮದುವೆ ಬುಧವಾರ ನಿಗದಿಪಡಿಸಲಾಯಿತು' ಎಂದು ಹುಡುಗಿಯ ತಂದೆ ಹೇಳಿದ್ದಾರೆ.












Click it and Unblock the Notifications