ಕೇಂದ್ರದ ಕಾಜಿ ನ್ಯಾಯ: 6/12 ಸಿಲಿಂಡರ್ ಹೊರೆ ಇಳಿಕೆ

ಇದರ ಲೆಕ್ಕಾಚಾರದ ಹೀಗಿದೆ: ಸಬ್ಸಿಡಿಯಿರುವ ಸಿಲಿಂಡರುಗಳು ವರ್ಷಕ್ಕೆ ಆರು. ಆ ಮಿತಿ ದಾಟಿ ಇನ್ನೂ ಒಂದೆರಡು ಸಿಲಿಂಡರ್ ಬೇಕು ಅನ್ನುವವರು ಸಬ್ಸಿಡಿಯಿಲ್ಲದ ಸಿಲಿಂಡರುಗಳನ್ನು ಮುಕ್ತ ಮಾರುಕಟ್ಟೆ ದರದಲ್ಲಿ ಖರೀದಿಸಬೇಕಿತ್ತು. ಅಂದರೆ ಬೆಂಗಳೂರಿನಲ್ಲಿ ಈ ಸಿಲಿಂಡರಿನ ದರ ಅಂದಾಜು 816 ರೂಪಾಯಿಯಾಗಬಹುದು. ಈಗ ಕಾಜಿ ನ್ಯಾಯದ ಬಳಿಕ ಒಟ್ಟು ಶೇ 13ರಷ್ಟು ಸುಂಕಗಳನ್ನು (ಶೇ 8ರಷ್ಟು ಕಸ್ಟಮ್ಸ್ ಮತ್ತು ಶೇ. 5ರಷ್ಟು ಎಕ್ಸೈಜ್ ಸುಂಕ) ತೆಗೆದುಹಾಕಿರುವುದರಿಂದ ಇದರ ಬೆಲೆ ತಲಾ 111 ರೂಪಾಯಿ ಕಮ್ಮಿಯಾಗಲಿದೆ. ಅಲ್ಲಿಗೆ ಹೆಚ್ಚು-ಕಮ್ಮಿ ತೀರಾ ಹೊರೆಯೇನೂ ಆಗದು. ಅದರಲ್ಲೂ 6ರಲ್ಲೇ ಅಡ್ಜಸ್ಟ್ ಮಾಡಿಕೊಳ್ಳುತ್ತೇವೆ ಎನ್ನುವವರಿಗೆ No Problem!
ಹೋಟೆಲ್ ಮಾಲೀಕರೇ ಗಮನಿಸಿ: ಸಬ್ಸಿಡಿ ರಹಿತ ವಾಣಿಜ್ಯ ಬಳಕೆಯ ಸಿಲಿಂಡರ್‌ಗೆ ಈ ತೆರಿಗೆ ರದ್ದು ಅನ್ವಯವಾಗುವುದಿಲ್ಲ. ಅದರ ಮೇಲಿನ ಶೇ. 8ರಷ್ಟು ಕಸ್ಟಮ್ಸ ಮತ್ತು ಶೇ. 5ರಷ್ಟು ಎಕ್ಸೈಜ್ ಸುಂಕ ಮುಂದುವರಿಯಲಿದೆ ಎಂದು ಸರಕಾರ ಸ್ಪಷ್ಟಪಡಿಸಿದೆ.
ಸಿಲಿಂಡರ್ ರಾಜಕೀಯ: ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳು ಸಬ್ಸಿಡಿ ಸಹಿತದ ಸಿಲಿಂಡರ್ ಮಿತಿಯನ್ನು 6ರಿಂದ 9ಕ್ಕೆ (ಅಂದರೆ 6/12 ನಿಂದ 9/12) ಏರಿಸಿದೆ. ಇತರೆ ರಾಜ್ಯ ಸರ್ಕಾರಗಳೂ ಅಂದರೆ ಕಾಂಗ್ರೆಸ್ಸೇತರ ಆಡಳಿತವಿರುವ ರಾಜ್ಯಗಳು ಇದೇ ಕ್ರಮವನ್ನು ಅನುಸರಿಸಬೇಕು. ಕೇಂದ್ರ ಸರ್ಕಾರ ಇಂಧನಕ್ಕೆ ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿ ನೀಡುತ್ತಿದೆ. ರಾಜ್ಯ ಸರ್ಕಾರಗಳೂ ಸ್ವಲ್ಪ ಭಾರವನ್ನು ಹೊರಬೇಕು ಎಂಬುದು ಕೇಂದ್ರದ ಪುಕ್ಕಟೆ ಸಲಹೆ.
ಮತ್ತೊಮ್ಮೆ ಹೇಳುವುದಾದರೆ...
ಸಬ್ಸಿಡಿಯಲ್ಲಿ ವಿತರಿಸುವ ವಾರ್ಷಿಕ ಆರು ಎಲ್‌ಪಿಜಿ (6/12) ಸಿಲಿಂಡರುಗಳ ನಂತರ ವಿತರಿಸಲಾಗುವ ಅಡುಗೆ ಅನಿಲದ ಸಿಲಿಂಡರುಗಳ ಮೇಲಿನ ಆಮದು ಸುಂಕ ಹಾಗೂ ಅಬಕಾರಿ ಸುಂಕ ರದ್ದು. ಇದೀಗ ಕೇಂದ್ರ ಸರಕಾರವು 6ಕ್ಕಿಂತ ಹೆಚ್ಚಿನ ಎಲ್‌ಪಿಜಿ ಸಿಲಿಂಡರುಗಳ ಮೇಲಿನ ಶೇ. 5 ಕಸ್ಟಮ್ಸ್ ಸುಂಕ ಹಾಗೂ ಶೇ. 8 ಅಬಕಾರಿ ಸುಂಕವನ್ನು ರದ್ದುಪಡಿಸಿರುವುದರಿಂದ ಅವುಗಳ ಬೆಲೆ ಬೆಂಗಳೂರಿನಲ್ಲಿ ಅಂದಾಜು 700 ರೂ. ಆಗಲಿದೆ.












Click it and Unblock the Notifications