ಹೆಣ್ಣಿನ ಬಾಳಿನ ಜೊತೆ ಆಟವಾಡಿದ ವರದಕ್ಷಿಣೆ ಪಿಶಾಚಿ

Husband ditches wifes hours after marriage
ಚೆನ್ನೈ, ಸೆ. 21 : ತಾಳಿ ಕಟ್ಟಿ ಕೆಲವೇ ಗಂಟೆಗಳಲ್ಲಿ ವರದಕ್ಷಿಣೆಗಾಗಿ ಮಡದಿಯನ್ನೇ ಕೈಬಿಟ್ಟು, ಬೀಗತನವನ್ನು ಮುರಿದುಕೊಂಡು ವರಮಹಾಶಯನೊಬ್ಬ ಮಂಟಪದಿಂದ ಹೊರನಡೆದ ಘಟನೆ ಚೆನ್ನೈನಲ್ಲಿ ಬುಧವಾರ ನಡೆದಿದೆ. ವರದಕ್ಷಿಣೆ ಕೋರಿದ ಆರೋಪದ ಮೇಲೆ ಗಂಡಿನ ಮೇಲೆ ವಧು ಗುರುವಾರ ಪೊಲೀಸರಿಗೆ ದೂರು ನೀಡಿದ್ದಾಳೆ.

ಭಾರತೀಯ ವಿದೇಶಾಂಗ ಸೇವೆ ಅಧಿಕಾರಿಯಾಗಿರುವ 'ವರದಕ್ಷಿಣೆ ಪಿಶಾಚಿ' ಗಂಡ, ಮದುವೆಯ ಒಪ್ಪಂದದಲ್ಲಿ 50 ಸವರನ್ (1 ಸವರನ್ ಅಂದ್ರೆ 8 ಗ್ರಾಂ) ಚಿನ್ನದ ಆಭರಣ, 7 ಲಕ್ಷ ರು. ನಗದನ್ನು ಹೋಟೆಲ್ ಮ್ಯಾನೇಜ್ಮೆಂಟ್ ಪದವೀಧರೆಯಾಗಿರುವ ಹೆಂಡತಿಯ ಕುಟುಂಬದಿಂದ ಮದುವೆಗೆ ಮೊದಲು ಪಡೆದಿದ್ದ.

ಮದುವೆ ಶಾಸ್ತ್ರ ಮುಗಿದು ಹೆಣ್ಣಿನ ಕುಟುಂಬದವರ ಗಂಟಲಲ್ಲಿ ಒಂದು ತುತ್ತು ಕೂಡ ಇಳಿದಿರಲಿಲ್ಲ, ಆಗಲೇ ಮತ್ತೆ 4 ಲಕ್ಷ ರು. ಕೊಡಬೇಕೆಂದು ಗಂಡನ ಮನೆಯವರು ಬೇಡಿಕೆ ಇಟ್ಟಿದ್ದಾರೆ. ಆದರೆ, ಕೇಳಿದ್ದನ್ನೆಲ್ಲ ಕೊಟ್ಟು ಕೈಬರಿದು ಮಾಡಿಕೊಂಡಿದ್ದ ವಧುವಿನ ಮನೆಯವರು ಹೆಚ್ಚಿನ ವರದಕ್ಷಿಣೆ ಕೊಡಲು ನಿರಾಕರಿಸಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಗಂಡಿನ ಕಡೆಯವರು ಮಂಟಪ ಮತ್ತು ಗಂಡ ಹೆಂಡತಿಯನ್ನು ತೊರೆದು ನಡೆದುಬಿಟ್ಟಿದ್ದಾರೆ. ಅವರೆಲ್ಲರ ವಿರುದ್ಧ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಆದರೆ, ಅಂಥದೇನೂ ನಡೆದೇ ಇಲ್ಲ, ನಮ್ಮಿಬ್ಬರ ಮಧ್ಯೆ ಎಲ್ಲ ಸರಿಯಾಗಿದೆ ಎಂದು ಐಎಫ್ಎಸ್ ಅಧಿಕಾರಿಯಾಗಿರುವ ಗಂಡ ಹೇಳಿಕೆ ನೀಡಿದ್ದಾನೆ.

ಈ ಘಟನೆಯ ಹಿಂದೆ ಇನ್ನೂ ಆಸಕ್ತಿದಾಯಕ ಕಥೆಯಿದೆ. ಇವರಿಬ್ಬರ ಮದುವೆ ಗೊತ್ತಾಗಿದ್ದು ಮದುವೆ ದಲ್ಲಾಳಿ ವೆಬ್‌ಸೈಟ್ ಮುಖಾಂತರ. ಗಂಡಿನ ಕಡೆಯವರೇ ಹೆಣ್ಣಿನ ಕುಟುಂಬವನ್ನು ಸಂಪರ್ಕಿಸಿ ಮದುವೆಯ ಪ್ರಸ್ತಾಪ ಮುಂದಿಟ್ಟಿದ್ದರು. ಆದರೆ, ಗಂಡಿನ ಕುಟುಂಬ ಧೂಮ್ ಧಾಮ್ ಮದುವೆಯಾಗಬೇಕು ಎಂಬ ಬೇಡಿಕೆ ಇಟ್ಟಿದ್ದರಿಂದ ನಿಶ್ಚಿತಾರ್ಥ ನಡೆದಿದ್ದರೂ ಮದುವೆ ಮುರಿದುಬಿದ್ದಿತ್ತು.

ಈ ಘಟನೆ ನಡೆದ ನಂತರ, ವಧುವಿನ ಮದುವೆ ಡಾಕ್ಟರ್ ಗಂಡಿನೊಡನೆ ನಿಶ್ಚಯವಾಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಇಲ್ಲಸಲ್ಲದ ಸಂಗತಿಗಳನ್ನು ವೈದ್ಯರ ಕಿವಿ ತುಂಬಿ, ಆ ಸಂಬಂಧವನ್ನೂ ಮುರಿಯುವಂತೆ ಮಾಡಿದ್ದ ಐಎಫ್ಎಸ್ ಅಧಿಕಾರಿ. ನಂತರ, ಗಂಡಿನ ಕಡೆಯವರೇ ಮುಂದೆ ಬಂದಿದ್ದರಿಂದ, ಬುಧವಾರ ಸೆ.19ರಂದು ಮದುವೆ ಮುಗಿದಿತ್ತು. ಇಷ್ಟಕ್ಕೆ ಸುಮ್ಮನಾಗದ ಗಂಡಿನವರು ವರದಕ್ಷಿಣೆಯ ಬೇಡಿಕೆ ಮುಂದಿಟ್ಟು ಆ ಹೆಣ್ಣಿನ ಬಾಳಿನ ಜೊತೆ ಆಟವಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+