ಎಲ್‌ಪಿಜಿ ವರ್ಷಕ್ಕೆ 6ರಿಂದ 10ಕ್ಕೆ ಏರಿಕೆ ಸಾಧ್ಯತೆ

Limit on subsidised LPG may go up from six to ten
ನವದೆಹಲಿ, ಸೆ. 17 : ಕೇಂದ್ರ ಸರಕಾರದ ಪ್ರಮುಖ ಅಂಗ ಪಕ್ಷಗಳ ಮತ್ತು ಸಾರ್ವಜನಿಕರ ತೀವ್ರ ಟೀಕೆಗೆ ಗುರಿಯಾಗಿರುವ ಯುಪಿಎ ಸರಕಾರ ರಿಯಾಯಿತಿ ದರದಲ್ಲಿ ನೀಡುವ ಅಡುಗೆ ಅನಿಲದ ಸಂಖ್ಯೆಯನ್ನು ವರ್ಷಕ್ಕೆ 6ರಿಂದ 10ಕ್ಕೆ ಏರಿಸುವ ಸಾಧ್ಯತೆಗಳಿವೆ.

ಸಬ್ಸಿಡಿ ಎಲ್‌ಪಿಜಿ ಸಿಲಿಂಡರನ್ನು ವರ್ಷಕ್ಕೆ 6 ಮಾತ್ರ ಎಂದು ನಿಗದಿಪಡಿಸಿ ಕೇಂದ್ರ ಸರಕಾರ ಸೆಪ್ಟೆಂಬರ್ 13ರಂದು ಆದೇಶ ಹೊರಡಿಸಿತ್ತು. ಏಳನೇ ಅಡುಗೆ ಅನಿಲ ಬೇಕಿದ್ದರೆ, ಈಗಿನ 415 ರು.ಗೆ ಬದಲಾಗಿ 720 ರು.ಗೂ ಹೆಚ್ಚು ಬೆಲೆ ತೆತ್ತು ಖರೀದಿ ಮಾಡಬೇಕಿದೆ. ಅದೇ ದಿನ ಡೀಸೆಲ್ ದರವನ್ನು ಲೀಟರಿಗೆ 5 ರು.ನಷ್ಟು ಏರಿಸಲಾಯಿತು.

ಬೆಲೆ ಏರಿಕೆ ಮತ್ತು ಅಡುಗೆ ಸಬ್ಸಿಡಿ ಅಡುಗೆ ಅನಿಲ ಸಿಲಿಂಡರನ್ನು 6ಕ್ಕೆ ಇಳಿಸಿದ್ದನ್ನು ವಿರೋಧಿಸಿ ಯುಪಿಎ ಅಂಗಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷಗಳು ಬೆಂಕಿಯನ್ನು ಉಗುಳುತ್ತಿವೆ. ಇಷ್ಟಾದರೂ ಪೆಟ್ರೋಲಿಯಂ ಸಚಿವ ಜೈಪಾಲ್ ರೆಡ್ಡಿ ಮತ್ತು ಗೃಹ ಸಚಿವ ಪಿ. ಚಿದಂಬರಂ ತಮ್ಮ ನಿರ್ಧಾರಕ್ಕೆ ಕಟ್ಟುಬಿದ್ದಿದ್ದಾರೆ.

ಇನ್ನು ಕೆಂಡಾಮಂಡಲವಾಗಿರುವ ವಿರೋಧ ಪಕ್ಷ ಎನ್‌ಡಿಎ ಬೆಲೆ ಏರಿಕೆಯನ್ನು ವಿರೋಧಿಸಿ ಸೆ.20, ಗುರುವಾರ ಭಾರತ ಬಂದ್‌ಗೆ ಕರೆ ನೀಡಿದೆ. ಈ ಬಂದ್‌ಗೆ ಕರ್ನಾಟಕದಲ್ಲಿ ಬಿಜೆಪಿ ಪಕ್ಷವೇ ಇರುವುದರಿಂದ ಉತ್ತಮ ಪ್ರತಿಕ್ರಿಯೆ ದೊರೆಯುವ ನಿರೀಕ್ಷೆಯಿದೆ. ಬೆಲೆ ಇಳಿಕೆಗಾಗಿ ಮತ್ತು ರಿಯಾಯಿತಿ ಎಲ್‌ಪಿಜಿ ಸಿಲಿಂಡರ್ ಮಿತಿಯನ್ನು ಏರಿಸುತ್ತಾರೆಂದು ಎದುರು ನೋಡುತ್ತಿರುವ ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ಸಿಗುವ ನಿರೀಕ್ಷೆಯಿದೆ.

ಇದನ್ನೆಲ್ಲ ಗಮನಿಸುತ್ತಿರುವ ಕೇಂದ್ರ ಸರಕಾರ, ರಿಯಾಯಿತಿ ಎಲ್‌ಪಿಜಿ ಸಿಲಿಂಡರ್ ಮಿತಿಯನ್ನು ವರ್ಷಕ್ಕೆ 6ರಿಂದ 10ಕ್ಕೆ ಏರಿಸಲು ಚಿಂತಿಸುತ್ತಿದೆ. ಆದರೆ, ಡೀಸೆಲ್ ಬೆಲೆ ಕಡಿಮೆ ಆಗುವ ನಿರೀಕ್ಷೆಗಳಿಲ್ಲ. ಹಾಗೆಯೆ, ಸೀಮೆಎಣ್ಣೆ ಮತ್ತು ಪೆಟ್ರೋಲ್ ದರ ಏರಿಕೆಯ ಚಿಂತನೆಯನ್ನು ಸದ್ಯಕ್ಕೆ ಕೇಂದ್ರ ಸರಕಾರ ಮುಂದೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+