ಇನ್ಫೋಸಿಸ್ ನ 2000 ಕೋಟಿ ರೂ ಷೇರು ಖರೀದಿಸಿದ ಎಲ್ಲೈಸಿ

lic-buys-rs-2000-crore-worth-infosys-shares
ಬೆಂಗಳೂರು, ಸೆ.17: ಪ್ರತಿಷ್ಠಿತ ಇನ್ಫೋಸಿಸ್ ಐಟಿ ಕಂಪನಿಯ 2000 ಕೋಟಿ ರೂ ಮೌಲ್ಯದ ಷೇರುಗಳನ್ನು ದೇಶದ ಅದ್ವಿತೀಯ ವಿಮಾ ಕಂಪನಿಯಾದ ಭಾರತೀಯ ಜೀವ ವಿಮಾ ನಿಗಮವು (LIC) ಇತ್ತೀಚೆಗೆ ಖರೀದಿಸಿದೆ. ಇದರೊಂದಿಗೆ Infosysನಲ್ಲಿ LICಯ ಪಾಲು ಶೇ. 4.9ರಿಂದ ಶೇ. 6.3 ಕ್ಕೇರಿದೆ.

Infosys 'ಯೋಗಕ್ಷೇಮ' ವಿಚಾರಿಸಿಕೊಂಡ LIC:
ಭಾರತದ ಷೇರು ಮಾರುಕಟ್ಟೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಷೇರು ವ್ಯಾಪಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ LIC, ಒಂದು ಹೂಡಿಕೆದಾರ ಸಂಸ್ಥೆಯಾಗಿ Infosys ಕಂಪನಿಯ ಷೇರುಗಳನ್ನು ಖರೀದಿಸಿದೆಯೇ ಹೊರತು ಆ ಕಂಪನಿಯ promoter ಆಗಿ ಈ ಖರೀದಿ ನಡೆಸಿಲ್ಲ ಎಂಬುದು ಗಮನಾರ್ಹ.

ಆದರೆ ಇದು ಆರ್ಥಿಕವಾಗಿ ಕಳೆಗುಂದಿರುವ Infosysಗೆ ಭಾರಿ ಉತ್ತೇಜಕವಾಗಿದೆ. ಅದರಲ್ಲೂ ವಿದೇಶಿ ಹೂಡಿಕೆ ಸಂಸ್ಥೆಗಳು (FII) Infosys ಷೇರುಗಳಿಂದ ಮಾರು ದೂರವಾಗುತ್ತಿರುವಾಗ LIC ಕೈಹಿಡಿದಿರುವುದು Infosys ಪ್ರತಿಷ್ಠೆಯನ್ನು ಹೆಚ್ಚಿಸಿದೆ.

ಕಳೆದ ಫೆಬ್ರವರಿ 22ರಂದು ಇತ್ತೀಚಿನ ದಿನಗಳಲ್ಲಿ 2,990 ರೂ ಗರಿಷ್ಠ ಮೊತ್ತ ತಲುಪಿದ್ದ Infosys ಷೇರು ಇಂದು ಕೆಂಪು ಕೆಂಪಾಗಿದ್ದು 2565 ರೂ ನಲ್ಲಿದೆ. Infosys ಕಂಪನಿಯ ಷೇರುಗಳಲ್ಲಿ ಕಳೆದ ತ್ರೈಮಾಸಿಕದಲ್ಲಿ FII ಹೂಡಿಕೆ ಪ್ರಮಾಣ ಶೇ. 39ರಿಂದ ಶೇ. 38ಕ್ಕೆ ಕುಸಿದಿದೆ. ಅಮದಾಹು 1,500 ಕೋಟಿ ರೂ. ಮೌಲ್ಯದ ಇನ್ಫಿ ಷೇರುಗಳನ್ನು ವಿದೇಶಿ ಹೂಡಿಕೆ ಸಂಸ್ಥೆಗಳು ಮಾರಿಕೊಂಡಿವೆ. ಇಂತಹ ಸಂದರ್ಭದಲ್ಲಿ ಭಾರತೀಯ ಜೀವ ವಿಮಾ ನಿಗಮವು Infosysನ ಕೈಹಿಡಿದಿರುವುದು ಕಂಪನಿಗೆ ಶ್ರೇಯಸ್ಕರವಾಗಿದೆ.

2002ರಲ್ಲಿ ಮೊದಲ ಬಾರಿಗೆ Infosysನಲ್ಲಿ ಶೇ. 2ರಷ್ಟು ಷೇರುಗಳನ್ನು ಖರೀದಿಸಿದ LIC ಸತತವಾಗಿ ಆ ಷೇರುಗಳನ್ನು ಖರೀದಿಸುತ್ತಲೇ ಇದ್ದು, ಅದೀಗ ಶೇ. 6.3 ಕ್ಕೆ ಬಂದು ತಲುಪಿದೆ. ಅದಕ್ಕೂ ಮುನ್ನ ದೇಶದ ಷೇರು ವಹಿವಾಟಿನಲ್ಲಿ ಅತಿ ಹೆಚ್ಚು ಹೂಡಿಕೆ ಮಾಡುತ್ತಿದ್ದ ಹಿಂದಿನ Unit Trust of India (UTI) ಸಂಸ್ಥೆಯು Infosysನಲ್ಲಿ ಶೇ. 8ರಷ್ಟು ಷೇರುಗಳನ್ನು ಖರೀದಿಸಿತ್ತು. ಕೊನೆಗೆ ಅದು ಮುಚ್ಚಿಕೊಂಡು ಹೋಗುವ ವೇಳೆಗೆ 2003ರಲ್ಲಿ ಶೇ. 1ಕ್ಕೆ ಕುಸಿದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+