ಸರಕಾರ, ಬಿಎಂಟಿಸಿ ಚೆಲ್ಲಾಟ, ಶಾಲಾ ಮಕ್ಕಳಿಗೆ ಸಂಕಟ

KSRTC, BMTC bus strike : Children suffer
ಬೆಂಗಳೂರು, ಸೆ. 13 : ಬೇಡಿಕೆಗಳನ್ನು ಆಗ್ರಹಿಸಿ ಅನಿರ್ದಿಷ್ಟಕಾಲ ಮುಷ್ಕರ ಹೂಡಿರುವ ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ ಸಿಬ್ಬಂದಿಗಳ ಹಠಮಾರಿತನದಿಂದ ಮತ್ತು ಮಕ್ಕಳಿಗೆ, ಪ್ರಯಾಣಿಕರಿಗೆ ಎಲ್ಲ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದಿರುವ ರಾಜ್ಯ ಸರಕಾರದ ಬೇಜವಾಬ್ದಾರಿತನದಿಂದ ಜಾಸ್ತಿ ಸಂಕಟಕ್ಕೊಳಗಾದವರು ಶಾಲಾ ಮಕ್ಕಳು.

ಸರಕಾರವೇನೋ ಮಕ್ಕಳಿಗಾಗಿ ಬಸ್ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದು ಬೊಂಬಡಾ ಬಜಾಯಿಸಿಕೊಳ್ಳುತ್ತಿದ್ದರೂ, ಎಲ್ಲಿವೆ ಬಸ್ಸುಗಳು? ಕೆಲವೆಡೆ ಕಲ್ಲು ತೂರಾಟ ನಡೆದಿರುವ ಹಿನ್ನೆಲೆಯಲ್ಲಿ ರಸ್ತೆಗಿಳಿದಿದ್ದ ಕೆಲವೇ ಕೆಲವು ಬಸ್ಸುಗಳು ಬೆಚ್ಚಗೆ ಬಸ್ ಡೀಪೋದಲ್ಲಿಯೇ ಕಾಲ ಕಳೆಯಲು ನಿರ್ಧರಿಸಿಯಾಗಿದೆ. ಇಷ್ಟಕ್ಕೂ ಕಲ್ಲು ತೂರುತ್ತಿರುವವರಾದರೂ ಯಾರು? ಕಿಡಿಗೇಡಿಗಳೆ? ಸಾರ್ವಜನಿಕರೆ?

ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಲ್ಲಿ ಅನೇಕ ಶಾಲೆಗಳು ಬುಧವಾರ ಅರ್ಧ ದಿನ ರಜಾ ಘೋಷಿಸಿದ್ದರೆ, ಗುರುವಾರ ಪೂರ್ತಿ ದಿನ ರಜಾ ನೀಡಿವೆ. ರಜಾ ಪಡೆದ ಮಕ್ಕಳೆಲ್ಲ ಮನೆಯಲ್ಲಿ ಆರಾಮವಾಗಿ ಆಡುತ್ತ ಕಾಲ ಕಳೆಯುತ್ತಿದ್ದಾರೆ. ಆದರೆ, ಕೆಲ ಶಾಲೆಗಳು ದೂರದೃಷ್ಟಿಕೋನದಿಂದ ಯೋಚಿಸದೆ ಶಾಲೆ ನಡೆಸುತ್ತಿವೆ.

ಖಾಸಗಿ ಶಾಲೆಗಳಲ್ಲಾದರೆ ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ, ಸರಕಾರಿ ಶಾಲೆಯ ಮಕ್ಕಳು ಏನು ಮಾಡಬೇಕು? ಇದನ್ನು ಸಾರಿಗೆ ಸಚಿವ ಆರ್ ಅಶೋಕ್ ಯೋಚಿಸಬೇಡವೆ? ಕನಿಷ್ಠಪಕ್ಷ ಸರಕಾರಿ ಶಾಲೆಗಳ ಮುಖ್ಯೋಪಾಧ್ಯಾಯರಾದರೂ ಚಿಂತಿಸಬೇಡವೆ. ಬಸ್ಸುಗಳು ರಸ್ತೆಗಿಳಿದಿಲ್ಲದ ಕಾರಣ ಹಠಾತ್ತಾಗಿ ಅರ್ಧ ದಿನ ರಜೆ ಕೊಟ್ಟು, ಮಕ್ಕಳೇ ಬೇಗನೆ ಮನೆ ಸೇರಿಕೊಳ್ಳಿ ಎಂದು ಹೇಳಿದರೆ ಮಕ್ಕಳು ಏನು ಮಾಡಬೇಕು.

ಬೆಂಗಳೂರು ಜಯನಗರ 3ನೇ ಬ್ಲಾಕಿನ ಎಲಿಫೆಂಟ್ ರಸ್ತೆಯ ಮಗ್ಗುಲಲ್ಲಿ ಇರುವ ವಿಜಯಾ ಹೈಸ್ಕೂಲ್ (ಸರಕಾರಿ ಶಾಲೆ) ಮಕ್ಕಳ ಕಥೆಯೂ ಇಂದು ಇದೇ ಆಗಿದೆ. ಬಸ್ಸುಗಳ ಕೊರತೆ ಕಾಣುತ್ತಲೇ ಮಕ್ಕಳಿಗೆ ಅರ್ಧ ದಿನ ರಜೆ ಕೊಟ್ಟು ಸಾಗಹಾಕಿದ್ದಾರೆ. ಮಕ್ಕಳು ತಂಡೋಪತಂಡವಾಗಿ ಕಾಲ್ನಡಿಗೆಯಲ್ಲಿ ಮನೆಯನ್ನು ಸೇರಿಕೊಳ್ಳುತ್ತಿವೆ.

ಕೆಲ ಮಕ್ಕಳು ಸೌತ್ ಎಂಡ್ ಸರ್ಕಲ್ ನಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಇಟ್ಟಿರುವ ಎರಡು ಕಾಯಿನ್ ಬೂತನ್ನು ಸಕ್ಕರೆಗೆ ಇರುವೆ ಮುತ್ತಿಕೊಂಡಂತೆ ಮುತ್ತಿಕೊಂಡಿದ್ದವು. ಸರದಿಯಂತೆ ನಾಣ್ಯ ಬಳಸಿ ಒಬ್ಬೊಬ್ಬರಾಗಿ ಪಾಲಕರಿಗೆ ಫೋನ್ ಮಾಡಿ ಏನು ಮಾಡಬೇಕು ಎಂದು ಕೇಳುತ್ತಿದ್ದವು. ಕೆಲ ಮಕ್ಕಳು ಬಂದು ಕರೆದುಕೊಂಡು ಹೋಗಿ ಎಂದು ಪಾಲಕರನ್ನು ಕೇಳುತ್ತಿದ್ದರೆ, ಕೆಲ ಹುಡುಗರು ಬೇರೆ ದಾರಿಯಿಲ್ಲದೆ ಕಾಲ್ನಡಿಗೆಯಲ್ಲಿ ಸಾಗುವುದಾಗಿ ಒನ್ಇಂಡಿಯಾ ಕನ್ನಡದೊಡನೆ ಹೇಳಿದರು.

ಈ ನಡುವೆ, ಬಸ್ಸುಗಳು ರಸ್ತೆಗಿಳಿಯದ (ದು)ಲಾರ್ಭವನ್ನು ಆಟೋ ಚಾಲಕರು ಸಖತ್ತಾಗಿ ಪಡೆಯುತ್ತಿದ್ದಾರೆ. ಎರಡು ಮೂರು ಪಟ್ಟು ಹಣವನ್ನು ಜನರಿಂದ ಪೀಕಿಸಿ ಸಾರ್ವಜನಿಕರನ್ನು ಪೀಕಲಾಟಕ್ಕೆ ಸಿಕ್ಕಿಸುತ್ತಿದ್ದಾರೆ. ಇದೇ ಸೌತ್ ಎಂಡ್ ವೃತ್ತದಲ್ಲಿ ಆಟೋ ಚಾಲಕ ಮತ್ತು ಮಹಿಳೆಯ ವಾಗ್ಯುದ್ಧವೇ ನಡೆದಿತ್ತು. "ಏನು ಇಷ್ಟೊಂದು ಹಣ ಕೇಳುತ್ತಿದ್ದೀರಲ್ಲ, ಡಬಲ್ ರೇಟೆಂದು ಮೊದಲೇ ಹೇಳಬೇಕಿತ್ತು" ಎಂದು ಹಿಂದೆ ಮುಂದೆ ನೋಡದೆ, ಆಟೋ ದರ ವಿಚಾರಿಸದೆ ಆಟೋ ಹತ್ತಿದ ಮಹಿಳೆ ಅರಚಾಡುತ್ತಿದ್ದರೆ, ಆಟೋ ಚಾಲಕ, "ಕೇಳಿದಷ್ಟು ಹಣ ನೀಡಲು ತಾಕತ್ತಿಲ್ಲದಿದ್ದರೆ ಆಟೋ ಯಾಕೆ ಹತ್ತಬೇಕಿತ್ತು" ಎಂದು ಬೈಗುಗಳ ಮಳೆಯನ್ನೇ ಸುರಿಸುತ್ತಿದ್ದ. ಖಾಸಗಿ ವಾಹನ ತಂದವರಿಗೆ, ಸದ್ಯ ವಾಹನ ತಂದಿದ್ದು ಒಳ್ಳೆಯದಾಯಿತು, ಆಟೋ ಹತ್ತಲಿಲ್ಲ ಎಂದು ನಿಟ್ಟುಸಿರುಬಿಡುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+