Get Updates
Get notified of breaking news, exclusive insights, and must-see stories!

ಕುಮಾರಸ್ವಾಮಿಗೆ ನಟಿ ಪೂಜಾ ಗಾಂಧಿ ಬೇಡವಂತೆ

hd-kumaraswamy-asks-actress-pooja-gandhi-to-quit-jds
ಬೆಂಗಳೂರು, ಸೆ.13: ನಟಿ ಪೂಜಾ ಗಾಂಧಿ ಮತ್ತು ಜೆಡಿಎಸ್ ಮಧುಚಂದ್ರ ಮುಗಿಯಿತೇ? ಏಕೆಂದರೆ ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನಟಿ ಪೂಜಾಗೆ ಪಕ್ಷ ತೊರೆಯಲು ಹೇಳುವುದಾಗಿ ಪ್ರಕಟಿಸಿದ್ದಾರೆ.

ಪಬ್ಲಿಕ್ ಟಿವಿ ತಾಜಾ ವರದಿಯ ಪ್ರಕಾರ ಆಯನೂರು ಮಂಜುನಾಥ್ ಅವರು ನಟಿ ಪೂಜಾ ಗಾಂಧಿ ಅವರ ಬಗ್ಗೆ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಕುಮಾರಸ್ವಾಮಿ ಅವರು ಪೂಜಾಗೆ ತಮ್ಮ ಪಕ್ಷ ಬಿಡುವಂತೆ ಸೂಚಿಸುವುದಾಗಿ ಹೇಳಿದ್ದಾರೆ. ಅಂದಹಾಗೆ, ಕಳೆದ ಜನವರಿಯಲ್ಲಿ ಕನ್ನಡದ ನಟಿ ಪೂಜಾ ಗಾಂಧಿ ಜಾತ್ಯಾತೀತ ಜನತಾದಳದ ತೆನೆ ಹೊತ್ತಿದ್ದರು.

ನಟಿ ಪೂಜಾ ಗಾಂಧಿ ನನಗೆ ತಂಗಿ ಸಮಾನ: ಬಿಜೆಪಿಯ ಆಯನೂರು ಮಂಜುನಾಥ್ ಅವರು ನಟಿ ಪೂಜಾ ಗಾಂಧಿ ಅವರನ್ನು 'ದಂಡುಪಾಳ್ಯದ ಕ್ವೀನ್' ಎಂದು ಜರಿದಿದ್ದರು. 'ದಂಡುಪಾಳ್ಯದ ಕ್ವೀನ್ ಪೂಜಾ ಗಾಂಧಿ ಅವರನ್ನು ಮುಂದಿಟ್ಟುಕೊಂಡು ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ' ಎಂದಿದ್ದರು.

ಇದರಿಂದ ಬೇಸರಗೊಂಡ ಕುಮಾರಸ್ವಾಮಿ ಅವರು, 'ತಾವು ನಟಿ ಪೂಜಾರನ್ನು ತಮ್ಮ ಪಕ್ಷಕ್ಕೆ ಕರೆತಂದು ಸೇರಿಸಿಕೊಂಡಿಲ್ಲ. ಆಕೆ ನನ್ನ ತಂಗಿ ಸಮಾನ. ಸಿನಿಮಾ ನಟ/ನಟಿಯರಿಂದ ತಮ್ಮ ಪಕ್ಷ ಬೆಳೆಯುವ ಅಗತ್ಯವಿಲ್ಲ. ಹಾಗೆ ನೋಡಿದರೆ ಎಲ್ಲ ಪಕ್ಷಗಳಲ್ಲೂ ಸಿನಿಮಾ ಮಂದಿ ಇದ್ದಾರೆ. ಆದರೆ ತಮಗೆ ಅದರ ಜರೂರತ್ತು ಇಲ್ಲ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+