ಇನ್ಫೋಸಿಸ್: ಈ ಬಾರಿ ಕ್ಯಾಂಪಸ್ ನೇಮಕಾತಿ ಇಲ್ಲ

ಏನಪಾ ಅಂದರೆ Infosys ಕಂಪನಿಯು ದೇಶದ ನಾನಾ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ನಡೆಸುತ್ತಿದ್ದ ವಾರ್ಷಿಕ ಕ್ಯಾಂಪಸ್ ಸೆಲೆಕ್ಷನ್ ಅನ್ನು ಈ ಬಾರಿ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಹಾಗೆ ನೋಡಿದರೆ ಇನ್ಫೋಸಿಸ್ ಕಂಪನಿಯು ನಾಮುಂದು ತಾಮುಂದು ಎಂದು ಕ್ಯಾಂಪಸ್ ಸೆಲೆಕ್ಷನ್ ಗೆ ಮುಗಿಬೀಳುತ್ತಿತ್ತು. ಆದರೆ ಈಗ ಕಂಪನಿಯ ಆರ್ಥಿಕ ಪರಿಸ್ಥಿತಿ ಹಾಗಿಲ್ಲ. ತನ್ನ ಇತ್ತೀಚಿನ ತ್ರೈಮಾಸಿಕ ಫಲಿತಾಂಶಗಳು ಕಳೆಗುಂದಿರುವ ಹಿನ್ನೆಲೆಯಲ್ಲಿ ಧರಾಶಾಹಿಯಾಗಿರುವ ಇನ್ಫೋಸಿಸ್ ಅನಿವಾರ್ಯವಾಗಿ ಇಂತಹ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.
ಈಗಿರುವ ಉದ್ಯೋಗಿಗಳೇ ಸಂಸ್ಥೆಯನ್ನು ತೊರೆದುಹೋಗಲಿ ಎಂಬ ಮನಸ್ಥಿತಿಯಲ್ಲಿರುವಾಗ ಹೊಸಬರ ನೇಮಕವಾದರೂ ಏಕೆ? ಇನ್ಫೋಸಿಸ್ ಕಂಪನಿಯಲ್ಲಿರುವ ಹಾಲಿ ಉದ್ಯೋಗಿಗಳ ಸಂಖ್ಯೆ 1.5 ಲಕ್ಷ ದಾಟುತ್ತದೆ. ಅದರಲ್ಲಿ 45 ಸಾವಿರ ಮಂದಿ ಉದ್ಯೋಗ ತೊರೆಯಲು ತುದಿಗಾಲಲ್ಲಿ ನಿಂತಿದ್ದಾರೆ.
ಗಮನಾರ್ಹವೆಂದರೆ ಕಳೆದ ಬಾರಿಯ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಆಯ್ಕೆಗೊಂಡ 23 ಸಾವಿರ ಮಂದಿಗೆ ಕಂಪನಿ ಇನ್ನಷ್ಟೇ ನೇಮಕಾತಿ ಪತ್ರ ನೀಡಬೇಕಾಗಿದೆ.
ಸಮಾಧಾನಕರ ಸಂಗತಿಯೆಂದರೆ ಜಾಗತಿಕ ಮಟ್ಟದಲ್ಲಿ ಐಟಿ ಕ್ಷೇತ್ರಕ್ಕೆ ಹಿನ್ನಡೆಯಾಗಿದ್ದರೂ ದೇಶದ ಇತರೆ ಅನೇಕ ಕಂಪನಿಗಳು (TCS, Cognizant, IBM, Accenture) ನೇಮಕಾತಿಯಲ್ಲಿ ಹಿಂದೆಬಿದ್ದಿಲ್ಲ. ಆದರೆ ಇನ್ಫೋಸಿಸ್ ಕಂಪನಿ ಆಯ್ದ ಕೆಲವೇ ಕಾಲೇಜುಗಳಲ್ಲಿ ಕ್ಯಾಂಪಸ್ ಸೆಲೆಕ್ಷನ್ ಗೆ ಮುಂದಾಗಿದ್ದು, ಕೆಲವೇ ಮಂದಿಯನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.












Click it and Unblock the Notifications