ಡೊನೇಷನ್: ಕಾಂಗ್ರೆಸ್ ಗೆ 2008 ಕೋಟಿ, ಬಿಜೆಪಿಗೆ 994 ಕೋಟಿ

ಇನ್ನೊಂದು ರಾಷ್ಟ್ರೀಯ ಪಕ್ಷವಾದ ಬಿಜೆಪಿ ಎರಡನೇ ಸ್ಥಾನದಲ್ಲಿದ್ದು ಪಕ್ಷಕ್ಕೆ 994 ಕೋಟಿ ರೂಪಾಯಿ ಬಂದಿದ್ದರೆ ಮಾಯಾವತಿ ಅವರ ಬಹುಜನ ಸಮಾಜ ಪಾರ್ಟಿಗೆ 484 ಕೋಟಿ ರೂಪಾಯಿ ಬಂದಿದೆ ಎಂದು ಪಾಲಿಟಿಕಲ್ ವಾಚ್ ಡಾಗ್ ನೀಡಿದ ವರದಿಯನ್ನು ಇಂಡಿಯನ್ ಎಕ್ಸ್ಪ್ರೆಸ್ ತನ್ನ ಅಂತರ್ಜಾಲದಲ್ಲಿ ಪ್ರಕಟಿಸಿದೆ.
ರಾಜಕೀಯ ಪಕ್ಷಗಳಿಗೆ ಇದರಲ್ಲಿ ಸ್ವಯಂಪ್ರೇರಿತವಾಗಿ ದೇಣಿಗೆ ಬಂದಿರುವ ಮೊತ್ತಗಳೇ ಜಾಸ್ತಿ. 2009 ರಿಂದ 2011ರ ಅವಧಿಯಲ್ಲಿ ಪ್ರಸಿದ್ದ ವ್ಯಕ್ತಿಗಳಿಂದ ಬಿಜೆಪಿಗೆ ಬಂದ ದೇಣಿಗೆ ಶೇ.22.76 ರಷ್ಟಾಗಿದ್ದರೆ ಕಾಂಗ್ರೆಸ್ ಶೇ.11.89 ರಷ್ಟು ಪಡೆದಿದೆ.
ಆದರೆ ಬಹುಜನ ಸಮಾಜ ಪಕ್ಷ ಈ ಅವಧಿಯಲ್ಲಿ ಪಕ್ಷಕ್ಕೆ ಇಪ್ಪತ್ತು ಸಾವಿರ ರೂಪಾಯಿಗಿಂತ ಅಧಿಕ ಮೊತ್ತ ಯಾವುದೂ ದೇಣಿಗೆ ರೂಪದಲ್ಲಿ ಬಂದಿಲ್ಲ ಎಂದು ಹೇಳಿಕೊಂಡಿದೆ.












Click it and Unblock the Notifications