ರೇಪ್: ಬಿಜೆಪಿ ನಾಯಕನ ಸೋದರನಿಗೆ ಜೀವಾವಧಿ ಶಿಕ್ಷೆ

ಈ ಕುಕೃತ್ಯಕ್ಕಾಗಿ ಆರೋಪಿ ಬ್ರಿಜೇಶ್ ಗೆ ಪ್ರಕರಣದಲ್ಲಿ ಯಾವುದೇ ಕನಿಕರ ತೋರಬಾರದು ಎಂದು ಆಜ್ಞಾಪಿಸಿರುವ ಹೆಚ್ಚುವರಿ ಸೆಷನ್ಸ್ ಜಡ್ಜ್ ರಾಕೇಶ್ ತಿವಾರಿ ಅವರು ಪ್ರಕರಣದಲ್ಲಿ ಆರೋಪಿಯ ಪರ ವಹಿಸಿದ್ದ ಸ್ಥಳೀಯ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ರೇಪ್ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪಾಲಿಸುವುದು ಅತ್ಯವಶ್ಯಕ ಎಂದೂ ಜಡ್ಜ್ ರಾಕೇಶ್ ತಿಳಿಯ ಹೇಳಿದ್ದಾರೆ.
ಅತ್ಯಾಚಾರವೆಸಗಿದ ಸಂದರ್ಭದಲ್ಲಿ ಮತ್ತು ಆ ನಂತರ ಆರೋಪಿಯು ವಿಕೃತನಾಗಿ ಅಧಿಕಾರ ಮದದಿಂದ ಮೆರೆದಿದ್ದಾನೆ. ತನ್ನ ಲೈಂಗಿಕ ತೃಷೆ ತೀರಿಸಿಕೊಳ್ಳಲು ಹೆಣ್ಣನ್ನು ಬಳಿಸಿಕೊಂಡಿದ್ದೂ ಅಲ್ಲದೆ ತನ್ನ ಕುಕೃತ್ಯವನ್ನು ಮುಚ್ಚಿಹಾಕಲು ವಿವಿಧ ಘಟ್ಟಗಳಲ್ಲಿ ಪ್ರಭಾವ ಬೀರಿದ್ದಾನೆ ಎಂದು ಜಡ್ಜ್ ರಾಕೇಶ್ ಕಿಡಿಕಾರಿದ್ದಾರೆ.
ದುರ್ದೈವವೆಂದರೆ ಪೊಲೀಸರೂ ಆರೋಪಿಯ ಪರ ವಹಿಸಿದ್ದಾರೆ. ಸದರಿ ಆರೋಪಿಯನ್ನು ಬಚಾವು ಮಾಡಲು ಈ ಪೊಲೀಸರು ರೇಪ್ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಗಾಳಿಗೆ ತೂರಿದ್ದಾರೆ. ಇದೇ ವೇಳೆ ಜಡ್ಜ್ ರಾಕೇಶ್ ಅವರು ಆರೋಪಿ ಬ್ರಿಜೇಶ್ ಗೆ 1.1 ಲಕ್ಷ ದಂಡವನ್ನೂ ವಿಧಿಸಿದ್ದಾರೆ.
ಆರೋಪಿ ಬ್ರಿಜೇಶನ ಮನೆಯ ಹೆಣ್ಣುಮಕ್ಕಳು ಬಾಧಿತ ಮಹಿಳೆಯ ಮನೆಗೆ ನುಗ್ಗಿ ಆಕೆಯನ್ನು ಚಪ್ಪಲಿಯಿಂದ ಹೊಡೆದ ಹೀನಾಯ ಘಟನೆ ನಡೆದಿದೆ. ಆದರೂ ಆರೋಪಿ ಬ್ರಿಜೇಶ್ ಸ್ಥಳೀಯ ಬಿಜೆಪಿ ನಾಯಕನ ಸಹೋದರನಾಗಿರುವುದರಿಂದ ಪೊಲೀಸರು ಆರಂಭದಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ ಎಂದು ಕೋರ್ಟ್ ವಿಷಾದಿಸಿದೆ.
2007ರಲ್ಲಿ ಈ ಘಟನೆ ನಡೆದಿತ್ತು. ಬಾಧಿತ ಮಹಿಳೆಗೆ ಪತಿ ಮತ್ತು ಮೂವರು ಮಕ್ಕಳು ಇದ್ದಾರೆ. ಮಕ್ಕಳು ಹೊರಗೆ ಆಟವಾಡುತ್ತಿದ್ದಾಗ, ತನ್ನ ಪತಿ ಕೆಲಸ ನಿಮಿತ್ತ ಹೊರ ಹೋಗಿದ್ದಾಗ ಆರೋಪಿ ಬ್ರಿಜೇಶ ಪಶುವಿನಂತೆ ಎರಗಿ ತನ್ನ ಮೇಲೆ ಅತ್ಯಾಚಾರವೆಸಗಿದ ಎಂದು ಬಾಧಿತ ಮಹಿಳೆ ದೂರು ನೀಡಿದ್ದರು.












Click it and Unblock the Notifications