ಸೆ 26ರಿಂದ ಯುಎಸ್ ವೀಸಾ ಶುಲ್ಕ ಪಾವತಿ ಸರಳ

america-visa-fee-payment-process-simplified-newdelhi
ಹೊಸದಿಲ್ಲಿ, ಸೆ. 6: ಸೆಪ್ಟೆಂಬರ್ 26ರಿಂದ ಜಾರಿಗೆ ಬರುವಂತೆ ಅಮೆರಿಕ ವೀಸಾಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಇಲ್ಲಿನ ಅಮೆರಿಕ ರಾಯಭಾರಿ ಕಚೇರಿಯು ಭಾರತೀಯರಿಗಾಗಿ ಇನ್ನಷ್ಟು ಸರಳಗೊಳಿಸಿದೆ. ಶುಲ್ಕ ಪಾವತಿ ವ್ಯವಸ್ಥೆಯನ್ನು ಸರಳಗೊಳಿಸುವ ನೂತನ ವೀಸಾ ಪರಿಷ್ಕರಣೆ ವ್ಯವಸ್ಥೆಯನ್ನೂ ಅಮೆರಿಕ ಕಚೇರಿ ಪ್ರಕಟಿಸಿದೆ.

ಈ ನೂತನ ವ್ಯವಸ್ಥೆಯಡಿ ಅರ್ಜಿದಾರರು ತಮ್ಮ ವೀಸಾ ಅರ್ಜಿ ಶುಲ್ಕಗಳನ್ನು ಇಂಟರ್‌ನೆಟ್ ಮೂಲಕ ಇಲೆಕ್ಟ್ರಾನಿಕ್ ನಿಧಿ ವರ್ಗಾವಣೆ ವಿಧಾನದಲ್ಲಿ (Electronic Fund Transfer) ಅಥವಾ ತಮ್ಮ ಮೊಬೈಲ್ ಫೋನ್‌ಗಳ ಮೂಲಕ ಪಾವತಿಸಬಹುದಾಗಿದೆ. ಪ್ರತಿವರ್ಷ ಅಮೆರಿಕದ ವೀಸಾ ಪಡೆಯಲು ಸುಮಾರು 7 ಲಕ್ಷ ಮಂದಿ ಅರ್ಜಿ ಸಲ್ಲಿಸುತ್ತಾರೆ.

ಇನ್ನು ದಾಖಲೆಗಳ ಪರಿಶೀಲನೆಗೆ ಸಂದರ್ಶನ ಪ್ರಕ್ರಿಯೆ ಈಗಿರುವುದಕ್ಕಿಂತ ಸರಳವಾಗಲಿದೆ. ಜತೆಗೆ, ಮೊದಲ ಬಾರಿಗೆ ಕಾಲ್‌ಸೆಂಟರ್‌ ವ್ಯವಸ್ಥೆ ಬಂದಿದ್ದು, ಅಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಪ್ರತಿನಿಧಿಗಳು, ಅರ್ಜಿದಾರರು ಕೇಳುವ ಪ್ರಶ್ನೆಗಳಿಗೆ ಇಂಗ್ಲೀಷ್, ಹಿಂದಿ, ಪಂಜಾಬಿ, ಗುಜರಾತಿ, ತೆಲುಗು ಭಾಷೆಗಳಲ್ಲಿ ಉತ್ತರಿಸಲಿದ್ದಾರೆ. ದಾಖಲೆಗಳನ್ನು ಸಲ್ಲಿಸಲು ದೇಶದ ವಿವಿಧೆಡೆ 33 ಕೇಂದ್ರಗಳನ್ನು ತೆರೆಯಲಾಗುತ್ತದೆ.

'ಜಗತ್ತಿನಾದ್ಯಂತ ಅಮೆರಿಕ ವೀಸಾಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ವೀಸಾ ಪ್ರಕ್ರಿಯೆಯನ್ನು ಸದೃಢಗೊಳಿಸುವುದು ನಮ್ಮ ಗುರಿಯಾಗಿದೆ. ಇದೇ ವೇಳೆ, ವೀಸಾ ವಿಷಯಗಳಿಗೆ ಸಂಬಂಧಿಸಿ ಅಮೆರಿಕವು ಸದಾ ಅತ್ಯುನ್ನತ ಮಟ್ಟದ ಭದ್ರತಾ ವ್ಯವಸ್ಥೆಯನ್ನು ಪಾಲಿಸುತ್ತಿದೆ. ಹಾಗಾಗಿ ನಿಯಮಗಳು ಕಠಿಣವಾಗಿರುತ್ತವೆ' ಎಂದು ಅಮೆರಿಕ ರಾಯಭಾರಿ ಕಚೇರಿಯ ದೂತವಾಸ ವ್ಯವಹಾರಗಳ ಸಚಿವೆ ಜೂಲಿಯಾ ಸ್ಟ್ಯಾನ್ಲಿ ತಿಳಿಸಿದ್ದಾರೆ.

ಅಮೆರಿಕದ ಹಾಲಿ ವೀಸಾ ಪ್ರಕ್ರಿಯೆ ವ್ಯವಸ್ಥೆಯಲ್ಲಿ ವೀಸಾಕ್ಕಾಗಿ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದವರು ಎರಡು ಬಾರಿ ಸಂದರ್ಶಿಸಲ್ಪಡುತ್ತಿದ್ದರು. ಒಮ್ಮೆ ಬೆರಳಚ್ಚು ಸಂಗ್ರಹಕ್ಕಾಗಿ ನಿರ್ದಿಷ್ಟ ಕೇಂದ್ರಕ್ಕೆ ತೆರಳಬೇಕಾಗುತ್ತಿತ್ತು. ಇನ್ನೂ ಒಮ್ಮೆ ರಾಯಭಾರಿ ಕಚೇರಿಗಳಲ್ಲಿ ಅಥವಾ ದೂತಾವಾಸ ಕಚೇರಿಗಳಲ್ಲಿ ಕಾನ್ಸುಲರ್ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತಿತ್ತು. ಆದರೆ ಇನ್ಮುಂದೆ ವೀಸಾದ ಪುನರ್‌ನವೀಕರಣಕ್ಕಾಗಿ ಅರ್ಜಿಸಲ್ಲಿಸುವವರು ಮತ್ತೊಮ್ಮೆ ಬೆರಳಚ್ಚುಗಳನ್ನು ನೀಡುವ ಅಗತ್ಯವಿರುವುದಿವೆಂದು ಜೂಲಿಯಾ ಹೇಳಿದ್ದಾರೆ.

ನೂತನ ವ್ಯವಸ್ಥೆಯಡಿ, ಅರ್ಜಿದಾರರು ವೀಸಾ ಶುಲ್ಕವನ್ನು ಪಾವತಿಸಲು ಹಲವಾರು ವಿಧದ ಆಯ್ಕೆಗಳಿರುತ್ತವೆ. ಎಲೆಕ್ಟ್ರಾನಿಕ್ ಹಣ ವರ್ಗಾವಣೆ ವ್ಯವಸ್ಥೆ, ಮೊಬೈಲ್ ಫೋನ್ ಮೂಲಕವೂ ಅವರು ಶುಲ್ಕವನ್ನು ಪಾವತಿಸಬಹುದಾಗಿದೆ. 1800 ರೂ.ಗಿಂತ ಹೆಚ್ಚಿನ ಹಣವನ್ನು ಅವರು ಆ್ಯಕ್ಸಿಸ್ ಬ್ಯಾಂಕ್ ಹಾಗೂ ಸಿಟಿ ಬ್ಯಾಂಕ್ ಶಾಖೆಗಳಲ್ಲಿ ಪಾವತಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+