ಸಂಭೋಗ: 16ರ ಬಾಲೆಗೆ 100 ಛಡಿಯೇಟು

ಕಾನೂನಿನ ದೃಷ್ಟಿಯಿಂದ ಬಾಲಕಿಯು ಇನ್ನೂ ಅಪ್ರಾಪ್ತ ವಯಸ್ಸಿನವಳು. ಹಾಗಾಗಿ ಅವಳಿಗೆ ಶಿಕ್ಷೆ ವಿಧಿಸುವುದನ್ನು 2 ವರ್ಷಗಳ ಕಾಲ ಮೂಂದೂಡಲಾಗಿದೆ ಎಂದು Raa Atollದಲ್ಲಿನ Hulhudhufaaru Magistrate Court ತೀರ್ಪು ನೀಡಿದೆ ಎಂದು Minivan News ವರದಿ ಮಾಡಿದೆ.
ಬಾಲಕಿಯೇ ಸದರಿ ಪುರುಷನನ್ನು ತನ್ನ ದ್ವೀಪಕ್ಕೆ ಆಹ್ವಾನಿಸಿದ್ದಾಳೆ. ಸದರಿ ಬಾಲಕಿ ಮನೆಯಲ್ಲಿ ಇಲ್ಲದಿರುವುದನ್ನು ಕುಟುಂಬದವರು ಗಮನಿಸಿದ್ದಾರೆ. ರಾತ್ರಿಯಾಗಿದ್ದರಿಂದ ಗಾಬರಿಗೆ ಬಿದ್ದು ಅವಳಿಗಾಗಿ ಹುಡುಕಾಡುತ್ತಾ ಮನೆಯಾಚೆ ಬಂದಿದ್ದಾರೆ.
ದ್ವೀಪ ಪ್ರದೇಶದಲ್ಲಿ ದೂರದ ಪೊದೆಯೊಂದರ ಬಳಿ ಮೆಷೀನ್ ರೂಂ ಹಿಂಭಾಗ ಪುರುಷನೊಬ್ಬನ ಜತೆ ಬಾಲಕಿ ಸಂಭೋಗದಲ್ಲಿ ನಿರತವಾಗಿದ್ದು ಅವಳ ಕುಟುಂಬದವರ ಕಣ್ಣಿಗೆ ಬಿದ್ದಿದೆ. ಈ ಸಂಬಂಧ ಬಾಲಕಿಯ ಕುಟುಂಬದವರು ಪುರುಷನ ವಿರುದ್ಧ ಕೋರ್ಟಿಗೆ ದೂರು ನೀಡಿದ್ದರು. ಸದರಿ ಪುರುಷ ಆರೋಪವನ್ನು ಅಲ್ಲಗಳೆದನಾದರೂ ಬಾಲಕಿಯು ನಡೆದ ಘಟನೆಯನ್ನು ವಿವರಿಸಿದ್ದಾಳೆ.
ಯಾವುದೇ ವ್ಯಕ್ತಿಯೊಬ್ಬ ಸಂಭೋಗ ನಡೆಸುವ ಉದ್ದೇಶದಿಂದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೈದಡವಿದರೆ ಅದು Child Sex Abuse (Special Provisions) ಕಾಯಿದೆಯಡಿ ಶಿಕ್ಷಾರ್ಹ ಅಪರಾಧ ಎಂದು ಸಾರಿದ ಕೋರ್ಟ್ ಶಿಕ್ಷೆ ವಿಧಿಸಿದೆ.












Click it and Unblock the Notifications