ಒಬಾಮಾ ಪತ್ನಿ ಅರೆನಗ್ನ ಚಿತ್ರ ವಿವಾದ

ಮ್ಯಾಗಜಿನ್ ನ 2012ರ ಅಗಸ್ಟ್ ಆವೃತ್ತಿಯಲ್ಲಿ ಈ ಚಿತ್ರ ಪ್ರಕಟವಾಗಿದೆ. ಮಿಚೆಲ್ ಒಬಾಮಾ ಒಂದು ಕುರ್ಚಿ ಮೇಲೆ ಕುಳಿತುಕೊಂಡಿದ್ದು, ತನ್ನ ದೇಹವನ್ನು ಅಮೆರಿಕಾದ ಧ್ವಜದಿಂದ ಮುಚ್ಚಿಕೊಂಡಿದ್ದಾರೆ. ಆದರೆ ಈ ವೇಳೆ ಆಕೆಯ ಬಲದ ಸ್ತನ ಕಾಣುವಂತಿದೆ. ಆಕೆಯ ತಲೆಗೆ ಹೆಡ್ ಕ್ರಾಫ್ಟ್ ಕೂಡ ಹಾಕಲಾಗಿದೆ.
ಮಿಚೆಲ್ ಒಬಾಮಾ ಅಮೆರಿಕಾದಲ್ಲಿ ಹೆಚ್ಚು ಜನಪ್ರಿಯರಾಗಿರುವ ಬಗ್ಗೆ ಇರುವ ಲೇಖನಕ್ಕಾಗಿ ಈ ಫೋಟೊವನ್ನು ಬಳಸಿಕೊಳ್ಳಲಾಗಿದೆ. ಗುಲಾಮನೊಬ್ಬನ ಮೊಮ್ಮಗಳು ಅಮೆರಿಕಾದ ಲೇಡಿ ಎಂದು ತಲೆಬರಹ ಕೊಡಲಾಗಿದೆ.
ಜನಪ್ರಿಯ ವ್ಯಕ್ತಿಗಳ ನಗ್ನ ಫೋಟೊಗಳನ್ನು ಪ್ರಕಟಿಸುವ ಸರಣಿ ಇದಾಗಿದ್ದು, ರಾಣಿ ಡಯಾನಾ, ಅಬ್ರಾಹಂ ಲಿಂಕನ್ ಮತ್ತು ಮಿಚೆಲ್ ಪತಿ ಬರಾಕ್ ಒಬಾಮಾ ಕೂಡ ಇದಕ್ಕೆ ಬಲಿಯಾಗಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಒಬಾಮಾ ಹಾಗೂ ವಿವಾದ : ಮಿಚೆಲ್ ಅವರ ಪತಿ ಬರಾಕ್ ಒಬಾಮಾ ಅವರ್ ಜನಪ್ರಿಯತೆ ಜೊತೆಗೆ ವಿವಾದಗಳು ಅವರ ಬೆನ್ನು ಹತ್ತಿತ್ತು. ಒಬಾಮಾ ಮುಸ್ಲಿಂ ಜನಾಂಗಕ್ಕೆ ಸೇರಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ನಂತರ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಮುಸ್ಲಿಂ ಅಲ್ಲ, ಅಪ್ಪಟ್ಟ ಕ್ರಿಶ್ಚಿಯನ್ ಈ ಬಗ್ಗೆ ಯಾವುದೇ ಸಂದೇಹ ಬೇಡ ಎಂದು ಶ್ವೇತಭವನ ಸ್ಪಷ್ಟನೆ ನೀಡಿತ್ತು.
ವರ್ಲ್ಡ್ ಟ್ರೆಡ್ ಸೆಂಟರ್ ಇದ್ದ ಜಾಗದಲ್ಲಿ ಸುಂದರ ಇಸ್ಲಾಮಿಕ್ ಪ್ರಾರ್ಥನಾಲಯ (ಮಸೀದಿ) ನಿರ್ಮಿಸುವ ಇಚ್ಛೆ ವ್ಯಕ್ತಪಡಿಸಿ, 26/11 ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬರಾಕ್ ಒಬಾಮಾ ನೀಡಿದ್ದ ವಿವಾದಾತ್ಮಕ ಹೇಳಿಕೆ ನೀಡಿದ್ದರಿಂದ ವಿವಾದ ಇನ್ನಷ್ಟು ಬಿಗಡಾಯಿಸಿತ್ತು.
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ನರ್ತಿಸುವ ನಟರಾಜನ ದೇವರ ರೂಪದಲ್ಲಿ ಅಮೆರಿಕದ ಸುದ್ದಿ ಮ್ಯಾಗಜಿನ್ ನ್ಯೂಸ್‌ವೀಕ್‌ನ ಮುಖಪುಟದಲ್ಲಿ ಚಿತ್ರಿಸಿತ್ತು. 2010 ರ ನವೆಂಬರ್ 22 ರ ನ್ಯೂಸ್‌ವೀಕ್ ಸಂಚಿಕೆಯಲ್ಲಿ ಹಲವು ಕೈಗಳುಳ್ಳ ಒಬಾಮಾ ಅವರ ವ್ಯಂಗ್ಯಚಿತ್ರವನ್ನು ಮುದ್ರಿಸಲಾಗಿದ್ದು, ಹಿಂದೂಗಳ ಆರಾಧ್ಯದೇವ ಶಿವ(ನಟರಾಜ)ನ ತಾಂಡವ ನೃತ್ಯವನ್ನು ಅಣಕಿಸುವ ರೀತಿಯಲ್ಲಿ ಎಡಗೈಯನ್ನು ಮೇಲಕ್ಕೆತ್ತಿ ನೃತ್ಯ ಮಾಡುವ ಭಂಗಿಯಲ್ಲಿ ಈ ಚಿತ್ರವಿತ್ತು.
ತೀರಾ ಇತ್ತೀಚೆಗೆ ಕರ್ನಾಟಕದ ಮೂಲೆಯೊಂದರ ಹವಾಯಿ ಚಪ್ಪಲಿ ತಯಾರಕ ಸಂಸ್ಥೆಯೊಂದು ಒಬಾಮಾ ಅವರ ಚಿತ್ರವನ್ನು ಪಾದರಕ್ಷೆಗಳಲ್ಲಿ ಹಾಕಿತ್ತು. ಅದರೆ, ಅಮೆರಿಕದ ಪ್ರಥಮ ಮಹಿಳೆ ಮಿಚೆಲ್ ಅವರನ್ನು ಕೀಳಾಗಿ ಕಾಣಲು ಸ್ಪೇನ್ ಮ್ಯಾಗಜೀನ್ ಈ ರೀತಿ ಕ್ರಮ ಅನುಸರಿಸಿರುವುದಕ್ಕೆ ಎಲ್ಲೆಡೆಯಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications