ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಹೆಸರಘಟ್ಟ ಹುಲ್ಲುಗಾವಲನ್ನು ಉಳಿಸಲು ಸಹಿಹಾಕಿರಿ

By Prasad
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  ಬೆಂಗಳೂರು, ಆ. 29 : ಭಾರತೀಯ ಜನತಾ ಪಕ್ಷದ ಸರಕಾರಕ್ಕೆ ಪರಿಸರದ ಬಗ್ಗೆ, ಪರಿಸರದ ಸಮತೋಲನ ಕಾಪಾಡುತ್ತಿರುವ ಪ್ರಾಣಿ ಪಕ್ಷಿಗಳ ಬಗ್ಗೆ, ಪರಿಸರವನ್ನು ಪ್ರೀತಿಸುವ ಜನರ ಬಗ್ಗೆ, ಕೆರೆಕಟ್ಟೆಗಳ ಬಗ್ಗೆ, ಹಸುರಿನ ಬಗ್ಗೆ, ನಗರದ ಸೌಂದರ್ಯದ ಬಗ್ಗೆ ಎಳ್ಳಷ್ಟೂ ಕಾಳಜಿಯಿಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ.

  ಬೆಂಗಳೂರು ನಗರದ ಸುತ್ತಲಿರುವ ಏಕೈಕ ನೈಸರ್ಗಿಕವಾದ ಹುಲ್ಲುಗಾವಲನ್ನು ಸರ್ವನಾಶ ಮಾಡಲು ಸರಕಾರ ತುದಿಗಾಲಲ್ಲಿ ನಿಂತಿದೆ. ದೊಡ್ಡಬಳ್ಳಾಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಬರುವ, ಹೆಸರಘಟ್ಟದಲ್ಲಿರುವ 305 ಎಕರೆಯಷ್ಟಿರುವ ಹುಲ್ಲುಗಾವಲಿನಲ್ಲಿ ಥೀಮ್ ಪಾರ್ಕ್, ಫಿಲ್ಮ್ಂ ಸಿಟಿ ಮತ್ತು ಗೋಲ್ಫ್ ಕೋರ್ಸ್ ನಿರ್ಮಿಸಲು ಸರಕಾರ ಅನುಮತಿ ನೀಡಿದೆ. ಈ 'ಅಭಿವೃದ್ಧಿ' ಕಾರ್ಯ ಕೈಗೊಂಡರೆ ಪರಿಸರದ ಗತಿ ಏನಾಗಲಿದೆ ಎಂಬ ಬಗ್ಗೆ ಸರಕಾರ ಎಳ್ಳಷ್ಟೂ ಚಿಂತನೆ ನಡೆಸಿಲ್ಲ.

  ಹೆಸರಘಟ್ಟ ಕೆರೆಗೆ ಹೊಂದಿಕೊಂಡಿರುವ ಹಚ್ಚಹಸುರಾಗಿರುವ ಈ ಹುಲ್ಲುಗಾವಲನ್ನು ಅನೇಕ ಕಾರಣಗಳಿಂದಾಗಿ ನಾವು ಇಂದು ಉಳಿಸಿಕೊಳ್ಳಬೇಕಾಗಿದೆ. ಮೊದಲನೇಯದು, ಇದು ಬೆಂಗಳೂರಿನ ಸುತ್ತಲಿರುವ ಕಟ್ಟಕಡೆಯ ನೈಸರ್ಗಿಕ ಹುಲ್ಲುಗಾವಲು, ಎರಡನೆಯದಾಗಿ, ಇಲ್ಲಿ ಬೆಳೆಯುವ ವಿಶಿಷ್ಟ ಹೂವುಗಳು ಮತ್ತು ಚಳಿಗಾಲದಲ್ಲಿ ಇಲ್ಲಿಗೆ ಯುರೋಪ್ ಮತ್ತು ಏಷ್ಯಾ ಖಂಡದ ಅನೇಕಕಡೆಗಳಿಂದ ಹಾರಿಬರುವ ವಿಶಿಷ್ಟ ಹಕ್ಕಿಗಳು. ಇಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡರೆ ಈ ವಿಶಿಷ್ಟ ಹಕ್ಕಿಗಳು ಇನ್ನು ಇಲ್ಲಿ ಬರಲಾರವು.

  ಮತ್ತೊಂದು ಪ್ರಮುಖ ಕಾರಣವೆಂದರೆ, ಸತ್ತುಹೋಗಿರುವ ಅರ್ಕಾವತಿ ನದಿಯ ಪುನರುಜ್ಜೀವನಕ್ಕಾಗಿ ಈ ಹುಲ್ಲುಗಾವಲನ್ನು ನಾವು ಉಳಿಸಿಕೊಳ್ಳಲೇಬೇಕಾಗಿದೆ. ಅರ್ಕಾವತಿ ನದಿ ಪುನರುಜ್ಜೀವನಗೊಳಿಸಲು ಟೆಂಡರ್ ಕೂಡ ಇತ್ತೀಚೆಗೆ ಕರೆಯಲಾಗಿತ್ತು. ಆದರೆ, ಅಷ್ಟರಲ್ಲಿಯೇ ಥೀಮ್ ಪಾರ್ಕ್, ಫಿಲ್ಮಂ ಸಿಟಿ ಮತ್ತು ಗೋಲ್ಫ್ ಕೋರ್ಸ್ ನಿರ್ಮಿಸಲು ಸರಕಾರ ಮುಂದಡಿ ಇಟ್ಟಿದೆ. ಇದೆಂಥ ದ್ವಂದ್ವ? ಕಳೆದ ಬಜೆಟ್‌ನಲ್ಲಿಯೇ ಥೀಮ್ ಪಾರ್ಕ್ ನಿರ್ಮಿಸಲು ಸರಕಾರ ಅನುಮೋದನೆ ನೀಡಿದೆ.

  ಈ 'ಮಹತ್ವಾಕಾಂಕ್ಷಿ' ಯೋಜನೆಯನ್ನು ಶುರುಮಾಡುವ ಮೊದಲೇ ನಿಲ್ಲಿಸಲು ಆನ್‌ಲೈನ್ ಅಭಿಯಾನವನ್ನು ಆರಂಭಿಸಲಾಗಿದೆ. change.org ಆರಂಭಿಸಿರುವ 'ಹುಲ್ಲುಗಾವಲು ಉಳಿಸಿ' ಅಭಿಯಾನಕ್ಕೆ ಅಭೂತಪೂರ್ವ ಪ್ರತಿಸ್ಪಂದನೆ ವ್ಯಕ್ತವಾಗಿದೆ. ಈಗಾಗಲೆ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಜನರು ಇದಕ್ಕೆ ಸಹಿ ಹಾಕಿದ್ದಾರೆ. ಜನಸ್ಪಂದನೆಯನ್ನು ಗಮನಿಸಿ, ಗೌರವಿಸಿ ಈ ಯೋಜನೆಯನ್ನು ಸರಕಾರ ನಿಲ್ಲಿಸುವುದೆ? ಪರಿಸರವನ್ನು ಉಳಿಸಲು ಕಾಳಜಿ ತೋರುವುದೆ? ಎಂಬುದು ಕಾದುನೋಡಬೇಕಾಗಿದೆ. ಕೊನೆಯುಸಿರು ಹಿಡಿದು ಕೂತಿರುವ ಹುಲ್ಲುಗಾವಲು ಉಳಿಯಬೇಕು ಅಂತ ನಿಮಗೆ ಅನಿಸಿದರೆ ಇಲ್ಲಿ ಸಹಿ ಹಾಕಿರಿ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The only grassland in and around Bangalore soon make way for a theme park, film city and a golf course. The Karnataka Government has approved the proposal to convert natural grasslands in Hesaraghatta into a commercial area. Sign the online petition if you want to save it.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more