• search

ನಗ್ನ ಚಿತ್ರ ಲೀಕ್, ಹ್ಯಾರಿ ಅಕೌಂಟ್ ಕ್ಲೋಸ್

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Prince Harry deactivates personal Facebook page
  ಲಂಡನ್, ಆ.27: ಯುವರಾಜ ಪ್ರಿನ್ಸ್ ಹ್ಯಾರಿ 'ಕೆಟ್ಟ ಮೇಲೆ ಬುದ್ಧಿ ಬಂತು' ಎಂಬಂತೆ ತಮ್ಮ ಫೇಸ್ ಬುಕ್ ಪೇಜ್ ಅನ್ನು ನಿಷ್ಕ್ರಿಯಗೊಳಿಸಿದ್ದಾರೆ. ಲಾಸ್ ವೇಗಾಸ್ ನ 'ಸ್ಟ್ರೀಪ್ ಪೂಲ್' ಪ್ರಕರಣದಲ್ಲಿ ನಗ್ನನಾಗಿದ್ದ ಚಿತ್ರಗಳು ಫೇಸ್ ಬುಕ್ ನಲ್ಲಿ ಹರಿದಾಡಿದ್ದನ್ನು ಕಂಡು ಹ್ಯಾರಿ ಬೆಚ್ಚಿಬಿದ್ದಿದ್ದರು. ಹೀಗಾಗಿ ಇನ್ನೂ ಇದೇ ರೀತಿ ಚಿತ್ರಗಳು ದಾಳಿ ಇಡುವ ಶಂಕೆ, ಭಯದಿಂದ ತಮ್ಮ ಫೇಸ್ ಬುಕ್ ಪುಟವನ್ನು ಡೀ ಆಕ್ಟಿವೇಟ್ ಮಾಡಿದ್ದಾರೆ.

  27 ವರ್ಷದ ಯುವರಾಜನಿಗೆ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ 'Spike Wells' ಎಂಬ ಹೆಸರಿನಲ್ಲಿ ಹ್ಯಾರಿ ಅವರ ಫ್ಯಾನ್ ಪೇಜ್ ಗಳಿದೆ. ಅದರಲ್ಲಿ ಪಾರ್ಟಿ ಅನಿಮಲ್ ಹ್ಯಾರಿ ಚಿತ್ರಗಳು ಧಾರಾಳವಾಗಿದೆ.

  ಹ್ಯಾರಿ ನಗ್ನ ಚಿತ್ರ ಲೀಕ್ ನಿಂದ ಈಗಾಗಲೇ ರಾಜಮನೆತನದ ಘನತೆ, ಗೌರವಕ್ಕೆ ಕುಂದುಂಟಾಗಿದ್ದು, ಇನ್ನು ಹೆಚ್ಚು ಹಾನಿಯಾಗದಂತೆ ತಡೆಯಲು ನಿರ್ಧರಿಸಿದ ಖಾಸಗಿ ಕಾರ್ಯದರ್ಶಿ ಜಾಮಿ ಲೊಥೆರ್ ಪಿಂಕರ್ಟ್ನನ್ ನೀಡಿದ ಸಲಹೆ ಮೇರೆಗೆ ಹ್ಯಾರಿ ತಮ್ಮ ಫೇಸ್ ಬುಕ್ ಪುಟಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ ಎಂದು ದಿ ಸನ್ ವರದಿ ಮಾಡಿದೆ.

  ಬ್ರಿಟಿಷ್ ಅರಸನ ಗದ್ದುಗೆ ಏರಲು ಮೂರನೇ ಹಕ್ಕುದಾರನಾಗಿರುವ ಹ್ಯಾರಿಗೆ ಫೇಸ್ ಬುಕ್ ನ ವಿವಿಧ ಪುಟಗಳಲ್ಲಿ 400 ರ ಎಣಿಕೆಯಂತೆ ಫ್ಯಾನ್ಸ್ ಗಳು ಇದ್ದಾರೆ. ಹಲವು ಪುಟಗಳು ಖಾಸಗಿ ವೀಕ್ಷಣೆಗೆ ಮಾತ್ರ ಲಭ್ಯವಿದೆ.

  ಅಮೆರಿಕದ ವೆಬ್ ಸೈಟ್ ಟಿಎಂಜಡ್ಜ್ ಪ್ರಿನ್ಸ್ ಹ್ಯಾರಿ ತನ್ನ ಗೆಳತಿಯೊಂದಿಗೆ ಲಾಸ್ ವೆಗಾಸ್ ನ ಹೋಟೆಲ್ ನಲ್ಲಿ ನಗ್ನನಾಗಿ ಕುಣಿಯುತ್ತಿರುವ ಚಿತ್ರವನ್ನು ಪ್ರಕಟಿಸಿತ್ತು. ಇದರಿಂದ ಬ್ರಿಟನ್ ನಲ್ಲಿ ಹೊಸ ವಿವಾದ ಹುಟ್ಟುಕೊಂಡಿತ್ತು.

  ಲಾಸ್ ವೆಗಾಸ್ ಗೂ ಮುನ್ನ ಸರ್ ರಿಚರ್ಡ್ ಬ್ರಾಸ್ನನ್ ಅವರ ಖಾಸಗಿ ದ್ವೀಪದಲ್ಲಿ ಹ್ಯಾರಿ ಹಾಗೂ ಸ್ನೇಹಿತರು ತಂಗಿದ್ದರು. ಇಲ್ಲಿಂದಲೇ ಇನ್ನೂ ಅನೇಕ ಚಿತ್ರಗಳು ಪಸರಿಸಬಹುದು ಎಂಬ ಭಯದಿಂದ ಬಕಿಂಗ್ ಹ್ಯಾಮ್ ಅರಮನೆ ಥರಗುಟ್ಟಿದೆ.

  ಹ್ಯಾರಿ ಫೇಸ್ ಬುಕ್ ಪುಟಕ್ಕೆ ಕತ್ತರಿ ಬೀಳುತ್ತಿದ್ದಂತೆ ಹ್ಯಾರಿ ಅವರ ಆಪ್ತರ ಖಾತೆಗಳಿಗೂ ಕತ್ತರಿ ಬಿದ್ದಿದೆ. 25 ವರ್ಷದ ಲಾಸ್ ವೆಗಾಸ್ ನ ಟಾಪ್ 'ಸ್ಕಿಪ್ಪಿ' ಇನ್ಸ್ ಕಿಪ್ ಹಾಗೂ 30 ವರ್ಷದ ಆರ್ಥರ್ ಅವರ ಫೇಸ್ ಬುಕ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Prince Harry has deactivated his Facebook page amidst fear that fresh images could emerge in the wake of his nude "strip pool" antics in Las Vegas, according to a media report today(Aug.27).

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more