ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಳಯ ಆಗೋಲ್ಲ ಧೈರ್ಯವಾಗಿರಿ: ಕೋಡಿಮಠ ಸ್ವಾಮಿ

By Srinath
|
Google Oneindia Kannada News

kodimutt-seer-predicts-no-doomsday-in-2012
ರಬಕವಿ (ಬಾಗಲಕೋಟ ), ಆ. 22: ಏನೇನೋ ಸಂಭವಿಸಿಬಿಡುತ್ತದೆ ಎಂದು ಕಳೆದ ಏಪ್ರಿಲ್ ತಿಂಗಳಲ್ಲಿ ಭಯಂಕರ ಭವಿಷ್ಯ ನುಡಿದಿದ್ದ ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಮಂಗಳವಾರ ಮತ್ತೆ ಭವಿಷ್ಯ ಹೇಳಿದ್ದಾರೆ. ಆದರೆ ಈ ಬಾರಿ ಭವಿಷ್ಯಕ್ಕೇ ಪೆಟ್ಟುಕೊಡುವಂತೆ ತುಸು ಭಿನ್ನವಾದ ಭವಿಷ್ಯ ನುಡಿದಿದ್ದಾರೆ.

'ಯಾರ್ರೀ ಹೇಳಿದ್ದು, 2012ರ ಡಿಸೆಂಬರಿಗೆ ಪ್ರಳಯ ಸಂಭವಿಸುತ್ತದೆ ಅಂತ? ಅದೆಲ್ಲ ಶುದ್ಧ ಬೊಗಳೆ. ಈ ಬಗ್ಗೆ ಜನ ಭಯಭೀತರಾಗುವ ಅಗತ್ಯವಿಲ್ಲ. ಅಂಥದ್ದೇನೂ ಘಟಿಸುವುದಿಲ್ಲ' ಎಂದು ಮಹಾಸ್ವಾಮಿಗಳು ಅಭಯ ನೀಡಿದ್ದಾರೆ.

ಮಂಗಳವಾರ ಬಾಗಲಕೋಟದ ಬನಹಟ್ಟಿಯ ರಾಜಶೇಖರ ಮಹಾದೇವಪ್ಪ ಬಿದರಿ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಮಠದ ಮಹಾಸ್ವಾಮಿಗಳು ತುಂಬಾ ಉಲ್ಲಸಿತರಾಗಿದ್ದರು.

'ನಾನು ಭಯ ಬಿತ್ತುವ ಸ್ವಾಮಿಯಲ್ಲ. ಭವಿಷ್ಯ ರೂಪಿಸುವಂತಹ ವಿಚಾರಗಳನ್ನು ಹೇಳುವ ಸ್ವಾಮಿಯಷ್ಟೇ. ಅವಗಢಗಳನ್ನು ತಪ್ಪಿಸುವ ಉದ್ದೇಶದಿಂದ ಜನತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿ ಎಂಬ ಉದ್ದೇಶದಿಂದ ನಾನು ಹೇಳುವ ಭವಿಷ್ಯವಾಣಿಗಳಿಂದ ಮಹಾಜನತೆ ಕೆಲವೊಮ್ಮೆ ಸಿಟ್ಟಿಗೇಳುತ್ತಾರೆ, ಅಷ್ಟೇ' ಎಂದು ಅವರು ತಮ್ಮ ಭವಿಷ್ಯ ಧಾಟಿಯನ್ನು ವ್ಯಾಖ್ಯಾನಿಸಿದ್ದಾರೆ.

ಕೋಡಿಮಠದ ಮಹಾಸ್ವಾಮಿಗಳ ಮಾತುಗಳು ಹೀಗಿವೆ:
* ಪ್ರತಿ 770 ವರ್ಷಗಳಿಗೊಮ್ಮೆ ಸೂರ್ಯನ ಪಥ ಬದಲಾಗುತ್ತದೆ. ಭೂಮಧ್ಯೆ ರೇಖೆಗೆ ಸಮೀಪವಾಗುವ ಸೂರ್ಯನಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತದೆ. ಶಾಖದ ಕಾರಣಕ್ಕೆ ಹಿಮ ಭಾರಿ ಪ್ರಮಾಣದಲ್ಲಿ ಕರಗುತ್ತದೆ. ಇದು ಪ್ರಕೃತಿ ವಿಕೋಪಕ್ಕೆ ತಿರುಗಿ ಶೀತಲ ರಾಷ್ಟ್ರಗಳಿಗೆ ತೊಂದರೆ ಆಗುವುದು ಸಹಜ'
* ಹೆಚ್ಚುತ್ತಿರುವ ಅಂತರ್ಜಲದ ಬಳಕೆಯ ಕಾರಣಕ್ಕೆ ಶಿಲಾಗೋಳಕ್ಕೆ ತೀವ್ರ ಧಕ್ಕೆ ಆಗುತ್ತಿದೆ. ಇದರಿಂದ ಭೂಕಂಪದ ತಡೆಗೆ ಅಂತರ್ಜಲ ಬಳಕೆ ತಡೆಗಟ್ಟಬೇಕು. ಇಲ್ಲವಾದಲ್ಲಿ ಅಪಾಯ ಶತಸಿದ್ಧ'
* ಅಶ್ವಿನಿ ಮಳೆಯಾಗದ ಕಾರಣಕ್ಕೆ ಬೆಳೆ ಮೇವು ಮತ್ತು ನೀರು ನಾಶವಾಗಿದ್ದು, ಸದ್ಯದ ಸರ್ಕಾರವೂ ಅಸ್ಥಿರವಾಗುತ್ತದೆ.
* ಕಾರ್ತಿಕ ಮಾಸದೊಳಗೆ ಗಂಭೀರ ಅವಘಡವೊಂದು ಕಾದಿದೆ. ಆದರೆ ಅದು ಎಲ್ಲಿ, ಯಾವ ರೂಪದಲ್ಲಿ ಎಂಬ ವಿವರಣೆ ನೀಡಲು ಅವರು ನಿರಾಕರಿಸಿದ್ದಾರೆ.

English summary
The Kodimutt Seer Shivananda Rajendra Swamiji on Aug 22 has predicted that there will be no Dooms Day in 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X