ವಿದ್ಯಾರ್ಥಿನಿಯರ ರೇಪ್, ವಿಡಿಯೋ: ಶಿಕ್ಷಕರ ಸೆರೆ
ಜೈಪುರ,
ಆ.18: ಆಲ್ವಾರ್ ಜಿಲ್ಲೆಯಲ್ಲಿ ಸರಕಾರಿ ಶಾಲೆಯೊಂದರಲ್ಲಿ ಅಪ್ರಾಪ್ತ ವಯಸ್ಸಿನ ಇಬ್ಬರು ವಿದ್ಯಾರ್ಥಿನಿಯರ ಮೇಲೆ ರೇಪ್ ಮಾಡಿ, ಅದನ್ನು ಮೊಬೈಲಿನಲ್ಲಿ ಸೆರೆ ಹಿಡಿದಿದ್ದ ಆರೋಪದ ಮೇಲೆ ಸರಕಾರಿ ಶಾಲೆಯ ಇಬ್ಬರು ಶಿಕ್ಷಕರನ್ನು ಪೊಲೀಸರು ಗುರುವಾರ ಸೆರೆ ಹಿಡಿದ್ದಾರೆ. id="toptextpromo">ದಾರಾ
ಸಿಂಗ್ ಮತ್ತು ಬದ್ರಿ ಪ್ರಸಾದ್ ಮೀನಾ ಬಂಧಿತ ಶಿಕ್ಷಕರು. ಜಿಲ್ಲೆಯ ತೆಹಲಾ ಪಟ್ಟಣದ ಬಳಿಯಿರುವ ಗ್ರಾಮವೊಂದರಲ್ಲಿ ಈ ಘಟನೆ ನಡೆದಿತ್ತು. ಅತ್ಯಾಚಾರಕ್ಕೀಡಾದ ಬಾಲಕಿಯರ ಪೈಕಿ ಒಬ್ಬ ಬಾಲಕಿಯ ಸೋದರಿ ಸ್ಥಳೀಯ ನ್ಯಾಯಾಲಯಕ್ಕೆ ತೆರಳಿ ದೂರು ನೀಡಿದ್ದರು. id='are-slot-1' class='oiad oi-axt oiadv'> id='top-searched-articles'>'ಬಾಧಿತ
ಇಬ್ಬರು ಬಾಲಕಿಯರ ಮೇಲೆ ನಡೆದ ಪೈಶಾಚಿಕ ಕೃತ್ಯವನ್ನು ಆರೋಪಿಗಳು ಮೊಬೈಲಿನಲ್ಲಿ ಚಿತ್ರೀಕರಿಸಿ, ಎಂಎಂಎಸ್ ಮಾಡಿದ್ದಾರೆ' ಎಂದು ಆಕೆ ದೂರಿದ್ದರು. ತರಗತಿ ಮುಗಿದ ಬಳಿಕವೂ ಶಾಲೆಯಲ್ಲೇ ಉಳಿಯುವಂತೆ ಆಜ್ಞಾಪಿಸಿದ ಆರೋಪಿ ಶಿಕ್ಷಕರು ನಂತರ ಈ ಕೃತ್ಯವೆಸಗಿದ್ದಾರೆ.











Click it and Unblock the Notifications