ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಟಿ-ಬಿ ವಿದ್ಯಾರ್ಥಿನಿಗೆ ಮತ್ತೇರಿಸಿ ಬಲಾತ್ಕಾರ?

By Mahesh
|
Google Oneindia Kannada News

IIT B student harassment
ಮುಂಬೈ, ಆ.13: ದೇಶದ ಪ್ರತಿಷ್ಠಿತ ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಮುಂಬೈನ ಕ್ಯಾಂಪಸ್ ನಲ್ಲಿ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಮುಂಬೈ ಪೊಲೀಸರು ಸೋಮವಾರ(ಆ.13) ಮಾಹಿತಿ ಹೊರ ಹಾಕಿದ್ದಾರೆ. ಪಿಎಚ್ ಡಿ ವಿದ್ಯಾರ್ಥಿನಿ ಮೇಲೆ ಬೋಧಕೇತರ ಸಿಬ್ಬಂದಿಯೊಬ್ಬರು ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಎಸೆಗಿರುವ ಆರೋಪ ಕೇಳಿ ಬಂದಿದೆ.

26 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ ಮಾಡಲಾಗಿದೆಯೇ ಅಥವಾ ಅತ್ಯಾಚಾರ ನಡೆದಿದೆಯೇ? ಎಂಬುದು ವೈದ್ಯಕೀಯ ಪರೀಕ್ಷೆ ನಂತರ ತಿಳಿದು ಬರಲಿದೆ. ಶನಿವಾರ ಬೆಳಗ್ಗೆ ಈ ಪ್ರಕರಣ ನಡೆದಿದ್ದು, ಶನಿವಾರ ಸಂಜೆ ಅಸ್ವಸ್ಥಳಾಗಿದ್ದ ವಿದ್ಯಾರ್ಥಿನಿಯನ್ನು ಕ್ಯಾಂಪಸ್ ನಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಗಳು ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಭಾನುವಾರ ಪೊಲೀಸರು ಆಕೆಯಿಂದ ಹೇಳಿಕೆ ಪಡೆದಿದ್ದಾರೆ. ಸದ್ಯಕ್ಕೆ ಐಸಿಯುನಲ್ಲಿರುವ ವಿದ್ಯಾರ್ಥಿನಿಯ ಆರೋಗ್ಯ ಸುಧಾರಿಸುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಕ್ಯಾಂಪಸ್ ನಲ್ಲಿ ಆರೋಪಿ ಜೊತೆಗೆ ದಿನವೂ ವಿದ್ಯಾರ್ಥಿನಿ ಬಾಡ್ಮಿಂಟನ್ ಆಡುತ್ತಿದ್ದರು. ಪರಿಚಯ ಇದ್ದುದ್ದರಿಂದ ಆಕೆಯನ್ನು ತನ್ನ ಮನೆಗೆ ಆತ ಕರೆಸಿಕೊಂಡಿದ್ದಾನೆ. ಕಾಫಿ/ಜ್ಯೂಸ್ ಕುಡಿಯಲು ನೀಡಿದ್ದಾನೆ. ನಂತರ ಆಕೆ ಪ್ರಜ್ಞಾಶೂನ್ಯಳಾಗಿ ಬಿದ್ದಿದ್ದಾಳೆ. ಮುಂದೆ ಏನಾಯಿತು ಎಂಬುದು ಯಾರಿಗೂ ತಿಳಿದಿಲ್ಲ.

ಆಕೆಗೆ ಮತ್ತು ಬರುವ ಔಷಧಿಯನ್ನು ಪಾನೀಯದಲ್ಲಿ ಬೆರೆಸಿ ನೀಡಲಾಗಿದೆ ಎಂಬುದು ಸಾಬೀತಾಗಿದೆ. ಆಕೆ ಡ್ರಗ್ಸ್ ಸೇವಿಸಿದ್ದಳೆ ಅಥವಾ ಬಲವಂತವಾಗಿ ಡ್ರಗ್ಸ್ ನೀಡಲಾಗಿದೆಯೇ ಎಂಬುದು ತಿಳಿಯಬೇಕಿದೆ. ರಾಜವಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

'ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ವಿದ್ಯಾರ್ಥಿನಿ ಗುಣಮುಖರಾಗಲಿ ಎಂದು ಹಾರೈಸುತ್ತೇವೆ. ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ' ಎಂದು ಐಐಟಿ ಮುಂಬೈನ ಪಿಆರ್ ಒ ಜಯಾ ಜೋಶಿ ಹೇಳಿದ್ದಾರೆ.

ಈ ಆಘಾತಕಾರಿ ಘಟನೆ ಸ್ಟಾಫ್ ಕ್ವಾಟರ್ಸ್ ನಲ್ಲೇ ನಡೆದಿರುವುದರಿಂದ ವಿದ್ಯಾರ್ಥಿನಿಯರ ಸುರಕ್ಷತೆ ಬಗ್ಗೆ ಆತಂಕ ಶುರುವಾಗಿದೆ. ಈ ಪ್ರಕರಣ ತನಿಖೆಗೆ ಮಹಿಳಾ ಪೊಲೀಸ್ ಅಧಿಕಾರಿಯನ್ನು ನೇಮಿಸಲಾಗಿದೆ. ವಿದ್ಯಾರ್ಥಿನಿಯಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕಿದೆ ಎಂದು ಹಿರಿಯ ಇನ್ಸ್ ಪೆಕ್ಟರ್ ಬಾಜಿರಾವ್ ಭೋಂಸ್ಲೆ ಹೇಳಿದ್ದಾರೆ.

ಪೊವೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಸತ್ಯಾಸತ್ಯತೆ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. ಐಐಟಿ ಕ್ಯಾಂಪಸ್ ಅವ್ಯವಹಾರಗಳ ಬಣ್ಣ ಬಯಲಾಗುವ ನಿರೀಕ್ಷೆಯಿದೆ.

English summary
A 26 year old PhD student at the IIT B campus in Mumbai was reportedly raped on campus by a non-teaching staff member of the institute and We have deputed a female assistant police inspector for detailed inquiry into the case and we will have a clearer picture in a day or two,” said senior inspector Bajirao Bhosale of Powai police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X