ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ದಿನಗಳು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

|
Google Oneindia Kannada News

Bescom
ಬೆಂಗಳೂರು, ಆಗಸ್ಟ್. 04: ಬೆಂಗಳೂರು ನಗರದಲ್ಲಿ ಮೂರು ದಿನಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ವಿಷಯವನ್ನು ಬೆಸ್ಕಾಂ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ. ಯಲಹಂಕ ಬಳಿಯ ಸಿಂಗನಾಯಕನಹಳ್ಳಿ ವಿದ್ಯತ್ ಪ್ರಸರಣ ಘಟಕದಲ್ಲಿ ದುರಸ್ತಿ ಕಾರ್ಯದ ಅಗತ್ಯ ಇರುವುದರಿಂದ ನಗರದ ಬಿಬಿಎಂಪಿ ವ್ಯಾಪ್ತಿಯ ಬಡಾವಣೆಗಳಲ್ಲಿ ಸೋಮವಾರದಿಂದ ಮೂರು ದಿನಗಳು, ಅಂದರೆ ಆಗಸ್ಟ್ 6, 7 ಹಾಗೂ 8 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ.

ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ ಹೊಸದಾಗಿ 400 ಕಿಲೋ ವ್ಯಾಟ್ ವಿದ್ಯುತ್ ಪ್ರಸರಣ ಘಟಕ ಕಾರ್ಯಾರಂಭ ಮಾಡಿದೆ. ಕೆಲವು ದುರಸ್ತಿ ಕೆಲಸಗಳು ಹಾಗೂ ಘಟಕಕ್ಕೆ ಸಂಪರ್ಕ ಕಲ್ಪಿಸುವ ಕಾರಣಕ್ಕೆ ಆಗಾಗ ವಿದ್ಯತ್ ಸಂಪರ್ಕ ಕಡಿತವಾಗಲಿದೆ. ಸಂಪರ್ಕ ಹಾಗೂ ದುರಸ್ಥಿ ಕೆಲಸಗಳು ಬೇಗ ಮುಗಿದರೆ ಸಮಸ್ಯೆ ಸಂಪೂರ್ಣವಾಗಿ ಮೂರು ದಿನಗಳು ಮುಂದುವರಿಯುವ ಬದಲು ಪರಿಹಾರ ಸಿಕ್ಕ ತಕ್ಷಣ ಪೂರೈಕೆ ಎಂದಿನಂತಾಗಲಿದೆ.

ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಆಗಾಗ ವಿದ್ಯತ್ ಕಡಿತ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಅಧಿಕಾರಿಗಳು ಸಹಕರಿಸಿದ್ದಾರೆ. ವಿದ್ಯುತ್ ಪೂರೈಕೆಯಲ್ಲಾಗುವ ವ್ಯತ್ಯಯದಿಂದ ನೀರಿನ ಪೂರೈಕೆಯಲ್ಲೂ ಸಮಸ್ಯೆ ತಲೆದೋರಬಹುದಾಗಿದ್ದು ಈ ಸಂಬಂಧ ಜನರು ಗಮನ ನೀಡುವ ಅಗತ್ಯವಿದೆ. ಓದುವ ಮಕ್ಕಳು ಹಾಗೂ ಅತ್ಯಗತ್ಯ ಕೆಲಸಗಳಿಗೆ ಜನರು ಮೂರು ದಿನ 'ಕ್ಯಾಂಡಲ್' ಅನ್ನು ಪಕ್ಕದಲ್ಲಿಟ್ಟುಕೊಳ್ಳುವುದು ಒಳ್ಳೆಯದು.

English summary
The power supply in Bangalore ( BBMP Limits) will be disrupted ( means no supplies) between 6 AM to 10 PM, Monday to Wednesday, 6-8 Aug. This is due to some maintenance work in BESCOM work stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X