ಇ-ಮೇಲ್‌ನಿಂದ ಕೆಲಸ ಹಾಳು: ಸರಳ ಸತ್ಯ ಬಯಲು

employees-waste-25-percent-time-on-emails
ಲಂಡನ್, ಆ. 3: ಉದ್ಯೋಗಿಗಳು ಕಚೇರಿಯಲ್ಲಿ ಸುಮಾರು ಎರಡೂವರೆ ಗಂಟೆ ಅಮೂಲ್ಯ ಸಮಯವನ್ನು ದಿನಾಲೂ ಇ-ಮೇಲ್‌ ವಿನಿಮಯಕ್ಕೆ ಅನಗತ್ಯವಾಗಿ ವ್ಯರ್ಥ ಮಾಡುತ್ತಿದ್ದಾರೆ. ಇದರ ಬದಲು ಇಂಟರ್ ನೆಟ್ ಬಳಕೆ ಮಾಡುವ ವಿಧಾನದಲ್ಲಿ ಬದಲಾವಣೆಗಳನ್ನು ಮಾಡಿದಲ್ಲಿ ಉದ್ಯೋಗಿಳಿಂದ ಶೇ. 25ರಷ್ಟು ಹೆಚ್ಚಿನ ಉದ್ಯೋಗ ಮಾಡಿಸಬಹುದು ಎಂಬ ಸರಳ ಸತ್ಯವನ್ನು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ಅನೇಕ ಉದ್ಯೋಗಿಗಳು ತಮ್ಮ ಕಚೇರಿ ಸಮಯದ ಕಾಲು ದಿನವನ್ನು ಇ-ಮೇಲ್ ಕಳುಹಿಸುವುದು, ಬಂದಿರುವುದನ್ನು ಪರಿಶೀಲಿಸುವುದು ಮತ್ತಿತರೆ ಕಾರ್ಯಗಳಿಗೆ ವ್ಯರ್ಥ ಮಾಡುತ್ತಿದ್ದಾರೆ. ಅಂದರೆ, ಉದ್ಯೋಗಿಗಳು ವರ್ಷದಲ್ಲಿ 80 ದಿನ ಇ-ಮೇಲ್‌ನಲ್ಲಿಯೇ ತಮ್ಮ ಸಮಯ ವ್ಯರ್ಥ ಮಾಡುತ್ತಿದ್ದಾರೆ! ಎಂದು ಮೆಕೆನ್ಸಿ ಗ್ಲೋಬಲ್ ಇನ್‌ಸ್ಟಿಟ್ಯೂಟ್ ಸಮೀಕ್ಷಾ ವರದಿ ಹೇಳಿದೆ.

ಯಾವುದೇ ಕಂಪನಿಯ ಮಾನವ ಸಂಪನ್ಮೂಲ (HRD) ವಿಭಾಗಕ್ಕೆ ಈ ಕಹಿಸತ್ಯ ಅರಿಗಿಸಿಕೊಳ್ಳುವುದು ಕಷ್ಟ ಕಷ್ಟ. ಒಂದು ವಾರದಲ್ಲಿ ಉದ್ಯೊಗಿ 13 ಗಂಟೆ ಇ-ಮೇಲ್ ಬಳಕೆಗೆ ವ್ಯರ್ಥ ಮಾಡಿದರೆ, ಸರಾಸರಿ ಒಬ್ಬ ಉದ್ಯೋಗಿ ಶೇ. 28 ರಷ್ಟು ಮಾತ್ರ ಕಚೇರಿ ಕೆಲಸಗಳನ್ನು ಮಾಡಿದ್ದಾನೆ ಎಂಬುದು ಈ ಸಮೀಕ್ಷೆಯ ಅರ್ಥ.

ಇದರ ಬದಲಿಗೆ, ಇ-ಮೇಲ್ ಅಥವಾ ಸಾಮಾಜಿಕ ಮಾಧ್ಯಮವನ್ನು ಬಳಸದೆ ಉದ್ಯೋಗಿಗಳು ಕರ್ತವ್ಯ ನಿರ್ವಹಿಸಿದರೆ ಶೇ. 25ರಷ್ಟು ಪ್ರಗತಿಯನ್ನು ಅಂದರೆ ಉತ್ಪಾದಕತೆ ಹೆಚ್ಚಳ ಸಾಧಿಸಬಹುದಾಗಿದೆ ಎಂಬುದು ಇದರ ವಿಶ್ಲೇಷಣೆ.

ಇದರ ಜತೆಗೆ ಇ-ಮೇಲ್‌ಗೆ ಅಂಟಿಕೊಳ್ಳದೆ ಕೆಲಸದಲ್ಲಿ ಹೆಚ್ಚು ತನ್ಮಯತೆ ಸಾಧಿಸುವಂತೆ HRD ಅಧಿಕಾರಿಗಳು ತಮ್ಮ ುದ್ಯೋಗಿಗಳಿಗೆ ಸೂಚಿಸಬೇಕೆಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+