• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಣ್ಣೋ ನಿಮ್ಮ ಆರೋಪಗಳೆಲ್ಲ ನಿರಾಧಾರ: ಎಸ್ಎಂ ಕೃಷ್ಣ

By Srinath
|

ಬೆಂಗಳೂರು, ಜುಲೈ 30: 'ಗಣಿ ರಾಡಿಯನ್ನು ನನ್ನ ಮೇಲೆ ಎರಚಬೇಡಿ. ಕರ್ನಾಟಕದ ಅಕ್ರಮ ಗಣಿಗಾರಿಕೆಯಲ್ಲಿ ನನ್ನದೇನೂ ಪಾತ್ರವಿಲ್ಲ' ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಸ್ ಎಂ ಕೃಷ್ಣ ಅವರು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆಗೆ ಪತ್ರ ಮುಖೇನ ತಿಳಿಸಿದ್ದಾರೆ.

ಸಾವಕಾಶವಾಗಿ ಗಣಿ ಪಾಠ ಒಪ್ಪಿಸಿದ ಕೃಷ್ಣ : 'ಕರ್ನಾಟಕ ಅಕ್ರಮ ಗಣಿಗಾರಿಕೆಯಲ್ಲಿ ಸಚಿವ ಎಸ್ ಎಂ ಕೃಷ್ಣ ಅವರ ಹೆಸರೂ ಇದೆ' ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಟೀಂ ಅಣ್ಣಾ ಕಳೆದ ಮೇ ತಿಂಗಳಲ್ಲಿ ಪತ್ರ ಬರೆದಿತ್ತು.

ಅದಕ್ಕೆ ಮೊನ್ನೆ ಸಾವಕಾಶವಾಗಿ ಪತ್ರ ಬರೆದಿರುವ ಮಂಡ್ಯದ ಕೃಷ್ಣ 'ತಾವು ಮಾಡಿರುವ ಆರೋಪದಲ್ಲಿ ತಪ್ಪು ಮಾಹಿತಿ, ತಪ್ಪು ತಪ್ಪು ಅಂಕಿಅಂಶಗಳು, ಅವುಗಳನ್ನು ತಪ್ಪಾಗಿ ಅರ್ಥೈಸಿರುವುದು ಮತ್ತು ಅನುಕೂಲಸಿಂಧು ಅರ್ಥೈಸುವಿಕೆ ಢಾಳಾಗಿ ಕಂಡುಬಂದಿದೆ. ಇದೆಲ್ಲ ನನ್ನ ತೇಜೋವಧೆಗಾಗಿ ಮಾಡಿರುವಂತಹುದು ಅಷ್ಟೇ' ಎಂದು ತಮ್ಮ ಮೇಲಿನ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಅಣ್ಣಾ ಹಜಾರೆ ಅವರಿಗೆ ಸವಿಸ್ತಾರ ಪತ್ರ ಬರೆದಿರುವ ಸಚಿವ ಕೃಷ್ಣ, 'ಮೇ 12ರಂದು ತಾವು ನನ್ನ ಮೇಲೆ ಮಾಡಿರುವ ಆರೋಪಗಳಿಗೆ ನನ್ನ ಜವಾಬು. ಮೊದಲನೆಯದಾಗಿ ನನ್ನ ಮೇಲಿನ ಆರೋಪಗಳು ನಡೆದಿರುವ ಕಾಲಘಟ್ಟ 1999-2004 ಅವಧಿಯದ್ದು. ಆಗ ನಾನು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದೆ. ನಾನೀಗ ವಿದೇಶಾಂಗ ಸಚಿವ. ನೀವು ಮಾಡಿರುವ ಅಷ್ಟೂ ಆರೋಪಗಳು ನಿರಾಧಾರ ಮತ್ತು ಅದರಲ್ಲಿ ಯಾವುದೇ ಹುರುಳಿಲ್ಲ.'

ಪತ್ರದ ವಿವರಗಳು: ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಕರ್ನಾಟಕದಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ಸಲ್ಲಿಸಿರುವ ವರದಿಯನ್ನು ಉಲ್ಲೇಖಿಸಿರುವ ಕೃಷ್ಣ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ವರದಿಯಲ್ಲಿ ಹೇಳಿದ್ದಾರೆ. ಇನ್ನು, ವರದಿಯಲ್ಲಿ ನನ್ನನ್ನು ತಪ್ಪಿತಸ್ಥ ಎಂದು ಎಲ್ಲೂ ದಾಖಲಿಸಿಲ್ಲ ಎಂದು ತಿಳಿಸಿದ್ದಾರೆ.

ಕಾಯ್ದಿರಿಸಿದ ಅರಣ್ಯ ಭೂಮಿಯನ್ನು ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾನೂನುಬಾಹಿರವಾಗಿ ಮೀಸಲು ಪಟ್ಟಿಯಿಂದ ಹೊರತೆಗೆಯಲಾಯ್ತು ಮತ್ತು ಅಲ್ಲಿ ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಯಿತು ಎಂಬ ಆರೋಪ ಹಾಸ್ಯಾಸ್ಪದವಾಗಿದೆ. ನನ್ನ ಅಧಿಕಾರಾವಧಿಯಲ್ಲಿ ಯಾವುದೇ ಅರಣ್ಯ ಭೂಮಿಯನ್ನು ಮೀಸಲು ಪಟ್ಟಿಯಿಂದ ಹೊರತೆಗೆದಿಲ್ಲ.

ಬದಲಾಗಿ 2002ರ ಡಿಸೆಂಬರ್ 16 ಸಚಿವ ಸಂಪುಟ ಸಭೆಯಲ್ಲಿ ಖನಿಜಯುಕ್ತ ಭೂಮಿಯಲ್ಲಿ ಗಣಿಗಾರಿಕೆ ನಡೆಸಲು 1993ರ ಖನಿಜ ನೀತಿಯಂತೆ ಅನುಮತಿ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ರಾಜ್ಯ ಮತ್ತು ಕೇಂದ್ರ ಸರಕಾರಗಳ ನಡುವೆ ಜರುಗಿದ ನಿರಂತರ ಸಭೆಗಳಲ್ಲಿ ಈ ಕ್ರಮಕ್ಕೆ ಮುಂದಾಗಲಾಗಿತ್ತು. ಅದೇ ರೀತಿಯಾಗಿ ಕೇಂದ್ರ ಸರಕಾರದ 1980ರ ಕಾಯಿದೆಯಂತೆ ಮೀಸಲು ಅರಣ್ಯ ಪ್ರದೇಶದಲ್ಲಿ ಇದೇ ನೀತಿ ಅನುಸರಿಸಲು ಆದೇಶ ಹೊರಡಿಸಲಾಗಿತ್ತು.

ಈ ಕ್ರಮವನ್ನು ಅರಣ್ಯ ಸಚಿವರು ವಿರೋಧಿಸಿದ್ದರು ಎಂದು ತಪ್ಪಾಗಿ ಅರ್ಥೈಸಲಾಗಿದೆ. ಕಾರಣ ಅಂದು ಸಂಪುಟ ಸಭೆ ನಿರ್ಣಯಕ್ಕೆ ಅಂಗೀಕಾರ ಪಡೆಯುವಾಗ ಅಂದಿನ ಅರಣ್ಯ ಸಚಿವ ಕೆ ಎಚ್ ರಂಗನಾಥ್ ಅವರ ಗಮನಕ್ಕೆ ತರಲಾಗಿತ್ತು. ಎಲ್ಲ ಸಚಿವರ ಅನುಮೋದನೆಯನ್ನೂ ಪಡೆಯಲಾಗಿತ್ತು.

ಇನ್ನು, ಕೆಲವು ಕಂಪನಿಗಳ ಹಿತಾಸಕ್ತಿ ಕಾಯಲು ಮೀಸಲು ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ ಎನ್ನುವ ಆರೋಪ ಸರಿಯಲ್ಲ. ಕಾರಣ, 1993ರ ಕೇಂದ್ರ ಸರಕಾರದ ಉದಾರೀಕರಣ ನೀತಿಯಿಂದಾಗಿ ಖಾಸಗಿ ಸಹಭಾಗಿತ್ವದಲ್ಲಿ ಬಂಡವಾಳ ಆಕರ್ಷಿಸಲು ಈ ಕ್ರಮ ಕೈಗೊಳ್ಳಲಾಗಿತ್ತು.

ಮೈಸೂರು ಮಿನರಲ್ಸ್ ಲಿಮಿಟೆಡ್ ಗೆ ಸಂಬಂಧಿಸಿದಂತೆ ಮಾಡಿರುವ ಆರೋಪಗಳನ್ನು ಹೈಕೋರ್ಟ್ ತಳ್ಳಿಹಾಕಿದೆ. ಸ್ವಾಯತ್ತ MML ಆಡಳಿತವನ್ನು ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು ನಿರ್ವಹಿಸುತ್ತಿದ್ದಾರೆ. ಆದ್ದರಿಂದ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಿಗಮದ ಆಡಳಿತ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಹೈಕೋರ್ಟಿನಿಂದ ಈ ಬಗ್ಗೆ ಆದೇಶ ಹೊರಬಿದ್ದಿರುವಾಗ ಮತ್ತೊಮ್ಮೆ ಆ ಬಗ್ಗೆ ಚರ್ಚೆ ನಡೆಸುವ ಅಗತ್ಯವಿಲ್ಲ.

ಆದ್ದರಿಂದ 2003ರಲ್ಲಿ ಖಾಸಗಿ ಕಂಪನಿಗಳಿಗೆ ಬಳ್ಳಾರಿಯಲ್ಲಿ ಸಾವಿರಾರು ಎಕರೆ ಮೀಸಲು ಅರಣ್ಯ ಪ್ರದೇಶವ್ನು ಮೀಸಲು ಪಟ್ಟಿಯಿಂದ ಹೊರ ತೆಗೆಯಲಾಗಿದೆ ಎನ್ನುವ ಆರೋಪಗಳೂ ಸತ್ಯಕ್ಕೆ ದೂರವಾಗಿವೆ.

ಇದು horse mouth ಎಸ್ ಎಂ ಕೃಷ್ಣ ಅವರ ಉತ್ತರ. ಇದಕ್ಕೆ ಅಣ್ಣಾ ಹಜಾರೆ ತಂಡ ಏನು ಪ್ರತಿಕ್ರಿಯೆ ನೀಡುತ್ತದೋ ಕಾದು ನೋಡಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka illegal mining - SM Krishna writes to team Anna- denies allegations: External affairs minister S.M. Krishna has denied the allegations made by Team Anna in a letter written to the Prime Minister in May and said the charges were made based on erroneous information, wrong facts, incorrect understanding and convenient interpretations to discredit him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more