• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕ್ ಉಗ್ರನಿಂದ ಮತ್ತೊಂದು ವಿಮಾನ ಹೈಜಾಕ್ ಸಂಚು?

By Srinath
|

ನವದೆಹಲಿ, ಜುಲೈ30: ಪಾಕಿಸ್ತಾನದ ಉಗ್ರನೊಬ್ಬ ಕಂದಹಾರ್ ವಿಮಾನ ಹೈಜಾಕ್ ಮಾದರಿಯಲ್ಲಿ ಮತ್ತೊಮ್ಮೆ ಏರ್ ಇಂಡಿಯಾ ವಿಮಾನ ಅಪಹರಿಸಲು ಸಂಚು ರೂಪಿಸಿದ್ದ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ.

ಭಾರತದ ಗುಪ್ತಚರ ಸಿಬ್ಬಂದಿಯ ನಿದ್ದೆಗೆಡಿಸಬಹುದಾದ ಈ ಮಾಹಿತಿಯನ್ನು ಜಾಮಿಯಾ ನಗರದ ನಿವಾಸಿ ಜುಬೇರ್ ಖಾನ್ ಬಹಿರಂಗಪಡಿಸಿದ್ದಾನೆ. ರಾಜಧಾನಿಯ ಕ್ರೈಂ ಬ್ರಾಂಚ್ ಪೊಲೀಸರು ಜುಬೇರನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಈ ಆತಂಕಕಾರಿ ಮಾಹಿತಿ ನೀಡಿದ್ದಾನೆ.

ಇದರೊಂದಿಗೆ ಭಾರತದ ಮೇಲೆ ಮತ್ತೊಮ್ಮೆ ದಾಳಿ ನಡೆಸಲು ಪಾಕಿಸ್ತಾನ ಹವಣಿಸುತ್ತಿರುವುದು ಬಹಿರಂಗವಾಗಿದೆ. ಭಾರತ ಮತ್ತೊಂದು ಸ್ವಾತಂತ್ರ್ಯಾಚರಣೆಗೆ ಸಿದ್ಧತೆ ನಡೆಸಿರುವಾಗ ಜುಬೇರ್ ಖಾನ್ ಬಂಧನ ಮತ್ತು ಅವನು ಹೊರಹಾಕಿರುವ ಮಾಹಿತಿಗೆ ಹೆಚ್ಚಿನ ಪ್ರಾಶಸ್ತ್ಯ ಬಂದಿದೆ.

ಬಂಧನಕ್ಕೂ ಮುನ್ನ ಜುಬೇರ್ ಖಾನ್ ರಕ್ಷಣಾ ಸ್ಥಾವರಗಳು ಅದರಲ್ಲೂ Air Indiaದ ಬಗ್ಗೆ ಮಾಹಿತಿ ಕಲೆಹಾಕಿರುವುದು ವಿಚಾರಣೆಯಿಂದ ದೃಢಪಟ್ಟಿದೆ. ಕಂದಹಾರ್ ಮಾದರಿಯಲ್ಲಿ ಏರ್ ಇಂಡಿಯಾ ವಿಮಾನವೊಂದನ್ನು ಹೈಜಾಕ್ ಮಾಡುವುದು ಜುಬೇರನ ಗುರಿಯಾಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಜುಬೇರ್ ಖಾನ್ ಪಾಕಿಸ್ತಾನದ ಗುಪ್ತಚರನಾಗಿದ್ದು, ಪಾಕ್ ಹೈಕಮಿಷನ್ನಿನ ಇಬ್ಬರು ಹಿರಿಯ ಅಧಿಕಾರಿಗಳು ನಿರಂತರವಾಗಿ ಜುಬೇರನ ಸಂಪರ್ಕದಲ್ಲಿದ್ದರು. ಪಾಕಿಸ್ತಾನಕ್ಕೆ ಯಾನ ಮಾಡುವ Air Indiaದ ಪೈಲಟ್ ಗಳು, ಪತ್ರಕರ್ತರು, ದ್ವಿಪಕ್ಷೀಯ ಮಾತುಕತೆ ವೇಳೆ ಭಾರತವನ್ನು ಪ್ರತಿನಿಧಿಸುವ ಗಣ್ಯರು ಮುಂತಾದವರ ಬಗ್ಗೆ ಜುಬೇರ್ ಖಾನ್ ಮೂಲಕ ಪಾಕ್ ಹೈಕಮಿಷನ್ನಿನ ಈ ಹಿರಿಯ ಅಧಿಕಾರಿಗಳು ವ್ಯವಸ್ಥಿತವಾಗಿ ಮಾಹಿತಿ ರವಾನಿಸುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ.

ಸದ್ಯದಲ್ಲೇ ಪಾಕಿಸ್ತಾನಕ್ಕೆ ಹೊಸದಾಗಿ ಯಾನ ಆರಂಭಿಸಲಿದ್ದ ನಿರ್ದಿಷ್ಟ Air India ವಿಮಾನದ ಬಗ್ಗೆ ಜುಬೇರ್ ಖಾನ್ ಮಾಹಿತಿ ಕಲೆಹಾಕುತ್ತಿದ್ದ. ಬಂಧನದ ಸಂದರ್ಭದಲ್ಲಿ ಜುಬೇರ್ ಖಾನ್ ಬಳಿ ಆ ವಿಮಾನದ ಕುರಿತು ಫೋಟೋಗಳ ಸಮೇತ ಸಮಗ್ರ ಮಾಹಿತಿಯಿತ್ತು. ಜತೆಗೆ, ರಕ್ಷಣಾ ಸ್ಥಾವರಗಳು, ದಂಡುಪ್ರದೇಶಗಳ ಬಗ್ಗೆಯೂ ಅವನಲ್ಲಿ ಮಾಹಿತಿಯಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It is reported that a Jamia Nagar resident named Zubair Khan who was detained by Crime Branch officials has been collecting information about defence establishments, especially Air India raising fears of another Kandahar-like hijack attempt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more