ತ.ನಾಡು ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ: 32 ಸಜೀವ ದಹನ

ನೆಲ್ಲೂರು (ಆಂಧ್ರ ಪ್ರದೇಶ), ಜುಲೈ 30: ಸೋಮವಾರ ಬೆಳಗಿನ ಜಾವ ದಕ್ಷಿಣ ಕರಾವಳಿ ಭಾಗವಾದ ನೆಲ್ಲೂರು ಬಳಿ ರೈಲಿನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, 32 ಮಂದಿ ಮೃತಪಟ್ಟಿದ್ದಾರೆ. ಬೆಳಗಿನ ಸವಿ ನಿದ್ರೆಯಲ್ಲಿದ್ದ ಇನ್ನೂ ಹಲವು ಮಂದಿ ಬೆಂಕಿಗೆ ಆಹುತಿಯಾಗಿರುವ ಶಂಕೆಯಿದೆ.

ನವದೆಹಲಿಯಿಂದ- ಚೆನ್ನೈಗೆ ಬರುತ್ತಿದ್ದ ತಮಿಳುನಾಡು ಎಕ್ಸ್ ಪ್ರೆಸ್ ರೈಲಿಗೆ ನೆಲ್ಲೂರು ಬಳಿ ಬೆಂಕಿ ಹೊತ್ತಿಕೊಂಡಿದೆ. ಪ್ರಾಥಮಿಕ ವರದಿಗಳ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟಿನಿಂದ ಈ ಬೆಂಕಿ ತಗುಲಿರಬಹುದು ಎನ್ನಲಾಗಿದೆ. ಇಡೀ ಬೋಗಿಯೊಂದು ಧಗಧಗನೆ ಉರಿದು ಸುಟ್ಟು ಕರಕಲಾಗಿದ್ದು, ಅದರಲ್ಲಿ 72 ಮಂದಿ ಪ್ರಯಾಣಿಕರಿದ್ದರು ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಟ್ರೈನು ಆಂಧ್ರದ ನೆಲ್ಲೂರು ನಿಲ್ದಾಣವನ್ನು ಬಿಟ್ಟು ಹೊರಟ ಕೆಲವೇ ಕ್ಷಣಗಳಲ್ಲಿ ಸೋಮವಾರ ಬೆಳಗಿನ ಜಾವ 4.30ರಲ್ಲಿ ಈ ಅವಘಡ ಸಂಭವಿಸಿದೆ. ಎಸ್ 11 ಎಂಬ ಕಂಪಾರ್ಟ್ ಮೆಂಟಿಗೆ ಬೆಂಕಿ ತಗುಲಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದು ಪರಿಹಾರ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ.

8 ಶವಗಳನ್ನು ಬೋಗಿಯಿಂದ ಹೊರತೆಗೆಯಲಾಗಿದೆ. ಹಲವಾರು ಮಂದಿಗೆ ತೀವ್ರ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ರೈಲ್ವೆ ಅಧಿಕಾರಿಗಳು ದೌಡಾಯಿಸಿದ್ದಾರೆ.
ದೂರವಾಣಿ ಹೆಲ್ಪ್ ಲೈನ್:
Chennai Central Station 044-25357398 ಮತ್ತು 044-25330821.
Nellore 0861-2345863, 864, 865, 866 ಮತ್ತು 0866-2576924.
Northern Railway (New Delhi Station) 011-23342954, 23341072 ಮತ್ತು 23341074. 011-24359748 .

ಪರಿಹಾರ ಘೋಷಣೆ: ರೈಲ್ವೆ ಇಲಾಖೆಯು ರೈಲಿನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟವರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಗಂಭೀರ ಗಾಯಗೊಂಡವರಿಗೆ ತಲಾ ಒಂದು ಲಕ್ಷ ರೂ. ಹಾಗೂ ಸಣ್ಣ ಪುಟ್ಟ ಗಾಯಗೊಂಡವರಿಗೆ ತಲಾ 25 ಸಾವಿರ ರೂ. ಪರಿಹಾರ ಘೋಷಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+