• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಂಗಳೂರು ಕಾಲೇಜು ಬಂದ್ ಉತ್ತಮ ಆರಂಭ

By Mahesh
|

ಮಂಗಳೂರು, ಜು. 30: ಇಲ್ಲಿನ ಪಡೀಲ್ ಸಮೀಪದ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇನಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಲ್ಲೆಗೈದಿರುವುದನ್ನು ಖಂಡಿಸಿ ಕರೆ ನೀಡಿರುವ ಕಾಲೇಜು ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹುಟ್ಟುಹಬ್ಬ ಸಮಾರಂಭದಲ್ಲಿ ಭಾಗಿಯಾಗಿದ್ದ ಯುವತಿಯರಿಗೆ ಥಳಿಸಿದ ಘಟನೆಯನ್ನು ವಿದ್ಯಾರ್ಥಿ ಸಂಘಟನೆಗಳು ತೀವ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸಿದೆ,

ಸೆಂಟ್ ಆಗ್ನಿಸ್, ಸೆಂಟ್ ಅಲೋಶಿಯಸ್, ಎಸ್ ಡಿಎಂ, ರಾಮಕೃಷ್ಣ ಕೆನರಾ ಕಾಲೇಜು ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸಿ ಬಂದ್ ಆಚರಿಸುತ್ತಿದ್ದಾರೆ. ಸರ್ವ ಕಾಲೇಜು ಸಂಘದ ಅಧ್ಯಕ್ಷ ಪ್ರಭು ಅವರು ವಿದ್ಯಾರ್ಥಿಗಳ ಬಂದ್ ಗೆ ಸಹಕರಿಸುವಂತೆ ನಗರದ ಎಲ್ಲಾ ಕಾಲೇಜುಗಳಿಗೆ ಮನವಿ ಮಾಡಿದ್ದರು.

ಆದರೆ, ಮುಂಜಾಗೃತಾ ಕ್ರಮವಾಗಿ, ಮಂಗಳೂರು ನಗರದಾದ್ಯಂತ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹೀಗಾಗಿ ಪ್ರತಿಭಟನೆ, ಮೆರವಣಿಗೆಗೆ ಅನುಮತಿ ನೀಡುತ್ತಿಲ್ಲ ಎಂದು ಪೊಲೀಸ್ ಆಯುಕ್ತ ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಸೀಮಂತ್‌ಕುಮಾರ್ ಸಿಂಗ್ ಹೇಳಿದ್ದಾರೆ.

ಜು.29ರಂದು ಬೆಳಗ್ಗೆ 6 ಗಂಟೆಯಿಂದ ಜು.31 ಸಂಜೆ 6 ಗಂಟೆಯ ತನಕ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ ಕಲಂ 144ರ ಅನ್ವಯ ಯಾವುದೇ ಸಭೆ, ಸಮಾರಂಭ ಮತ್ತು ಪ್ರತಿಭಟನಾ ಮೆರವ ಣಿಗೆಗಳನ್ನು ನಡೆಸದಂತೆ ನಿಷೇಧಾಜ್ಞೆಯನ್ನು ವಿಧಿಸಲಾಗಿದೆ ಎಂದು ಸೀಮಂತ್‌ಕುಮಾರ್ ಸಿಂಗ್ ಆದೇಶದಲ್ಲಿ ತಿಳಿಸಿದ್ದಾರೆ.

ಸದ್ಯಕ್ಕೆ ಸೈಂಟ್ ಅಲೋಶಿಯಸ್ ಕಾಲೇಜು ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಜಮೆಯಾಗುತ್ತಿದ್ದಾರೆ. ಬೃಹತ್ ಸಭೆ ನಡೆಸಲು ಉದ್ದೇಶಿಸಲಾಗಿದೆ.ಯುವ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಬೃಹತ್ ಪ್ರತಿಭಟನೆ ನಡೆಸಿ, ವಿದ್ಯಾರ್ಥಿ ವೃಂದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಸೋಮವಾರ ಕೂಡಾ ಸರ್ವ ಕಾಲೇಜು ಮಂಡಳಿ ಕರೆದಿರುವ ಬಂದ್ ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಆದರೆ, ಯಾವುದೇ ಪಕ್ಷ, ಸಂಘಟನೆಯ ಬೆಂಬಲ ನಮಗೆ ಬೇಕಿಲ್ಲ. ವಿದ್ಯಾರ್ಥಿ ಯೂನಿಯನ್ ಜೊತೆ ಯೂಥ್ ಕಾಂಗ್ರೆಸ್ ಕೈ ಜೋಡಿಸುವುದು ಸರಿಯಲ್ಲ ಎಂದು ವಿದ್ಯಾರ್ಥಿ ಸಂಘಟನೆಗಳು ಎಚ್ಚರಿಸಿದೆ. ಈ ಎಲ್ಲಾ ಗೊಂದಲಗಳ ನಡುವೆ ಮಂಗಳೂರಿನಲ್ಲಿ ಕಾಲೇಜುಗಳ್ ಬಂದ್ ಆಗಿದ್ದು, ಯಾವುದೇ ಅಹಿತಕರ ಘಟನೆ ಸೋಮವಾರ (ಜು.30) ಬೆಳಗ್ಗೆ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ನೊಂದ ವಿದ್ಯಾರ್ಥಿ ಅಳಲು: ಹುಟ್ಟುಹಬ್ಬದ ದಿನ ಧರ್ಮದೇಟು ತಿಂದ ನೊಂದ ವಿದ್ಯಾರ್ಥಿ ವಿಜಯ್ ಮಾಧ್ಯಮದ ಮುಂದೆ ಜನನ ಪ್ರಮಾಣ ಪತ್ರವನ್ನು ತೋರಿಸಿದ್ದಾರೆ. ಇಲ್ಲಿ ಯಾವುದೇ ಅನೈತಿಕ ಚಟುವಟಿಕೆಗಳು ನಡೆದಿಲ್ಲ. ಗಾಂಜಾ ಅಥವಾ ಇನ್ನಿತರ ಯಾವುದೇ ವಸ್ತುಗಳು ಇಲ್ಲಿರಲ್ಲಿಲ್ಲ ಎಂದು ಅವರು ಸ್ವಷ್ಟಪಡಿಸಿದ್ದಾರೆ.

ನಾವು ಯಾವುದೇ ರೇವ್ ಪಾರ್ಟಿಯನ್ನು ಆಚರಿಸಿಕೊಂಡಿಲ್ಲ. ಕೇವಲ ಕೇಕ್ ಕಟ್ ಮಾಡುವುದರ ಮೂಲಕ ಬರ್ತಡೇ ಪಾರ್ಟಿಯನ್ನು ಆಚರಿಸಿಕೊಳ್ಳುತ್ತಿದ್ದೆವು ಅಷ್ಟೆ. ಮ್ಯೂಸಿಕ್, ಡ್ಯಾನ್ಸ್ ಯಾವುದೂ ಇಲ್ಲವಾಗಿತ್ತು. ಆದರೆ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ದಿಢೀರ್ ಆಗಮಿಸಿ ವಿಷಯದ ಬಗ್ಗೆ ಎನೂ ತಿಳಿಯದೆ ಏಕಾಏಕಿ ದಾಳಿ ನಡೆಸಲು ಶುರು ಮಾಡಿದರು.

ನಾವು ಹೇಳಿದ ಮಾತನ್ನು ಕೇಳುವ ಸಹನೆಯನ್ನು ಕೂಡಾ ತೋರಿಸಲ್ಲಿಲ್ಲ. ಮಾತ್ರವಲ್ಲ ಅವಾಚ್ಯ ಪದಗಳನ್ನು ಉಪಯೋಗಿಸಿ ಹುಡುಗಿಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಗುರುದತ್ ಕಾಮತ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bandh called by the All College Students' Union on Monday July 30 to condemn the attack on students at Morning Mist Home Stay, Padil is peaceful so far. Student Union warned Youth Congress not to misuse the situation. Crufew imposed in Mangalore city said commissioner Seemanth Kumar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more