ಈ ಯುವತಿಯರ ಮದುವೆಗೆ ಕನ್ನಡಕ ಅಡ್ಡ ಬರುತ್ತಿದೆ

newdelhi-spectacles-hamper-girls-marriage-prospects
ನವದೆಹಲಿ, ಜುಲೈ18: ರಾಷ್ಟ್ರದ ರಾಜಧಾನಿಯಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿಯರು 'ಮದುವೆಗೆ ಕನ್ನಡಕ ಅಡ್ಡ ಬರುತ್ತದೆ' ಎಂದು ಅಲವತ್ತುಕೊಂಡಿದ್ದಾರೆ. ಇದರಿಂದಾಗಿ ದೃಷ್ಟಿದೋಷವಿದ್ದರೂ ಶೇ. 82ರಷ್ಟು ಬಾಲಕಿಯರು ಕನ್ನಡಕ ಹಾಕಿಕೊಳ್ಳುತ್ತಿಲ್ಲವಂತೆ. ಇದನ್ನು ಕೇಳಿದ ಸಾಂಪ್ರದಾಯಿಕ ಹೆಣ್ಣುಮಕ್ಕಳು 'ಮದುವೆ ಬಗ್ಗೆ ಅವರ ದೃಷ್ಟಿ(ಕೋನ)ದೋಷ ಸರಿಯಲ್ಲ' ಎಂದು ನಕ್ಕಿದ್ದಾರೆ.

ನಿರಂತರವಾಗಿ ಕನ್ನಡಕ ಧರಿಸಲು ಒಲ್ಲೆ ಎಂದ ಈ ವಿದ್ಯಾರ್ಥಿನಿಯರು ಸಮೀಕ್ಷೆಯ ವೇಳೆ ಏನು ಹೇಳಿದ್ದಾರೆ ಗೊತ್ತಾ? 'ನಾವು ಹಾಗೆಲ್ಲ ಕನ್ನಡಕ ಹಾಕಿಕೊಂಡರೆ ನಮಗೆ ಒಳ್ಳೆಯ ಗಂಡ ಸಿಗೊಲ್ಲ' ಎಂದು ಕಣ್ಣುಮಿಟುಕಿಸಿದ್ದಾರೆ.

ಈ ಯುವತಿಯರು 'ಕನ್ನಡಕ ಮತ್ತು ಮದುವೆ' ಬಗ್ಗೆ ಏನೆಲ್ಲ ಅಭಿಪ್ರಾಯಗಳನ್ನು ಹೊಂದಿದಾರೆ ಓದಿ: ಅದು ಸೌಂದರ್ಯ ಪ್ರಜ್ಞೆಗೆ ತೊಡಕಾಗುತ್ತದೆ. ಮೂಗಿನ ಮೇಲೆ ಮಾರ್ಕು ಬಿದ್ಹೋಗುತ್ತದೆ. ನಮ್ಮ ಮುಖಾರವಿಂದದ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ಕನ್ನಡಕ ಹಾಕಿಕೊಂಡರೆ ಕಣ್ಣುಗಳು ಮತ್ತಷ್ಟು ಹಾಳಾಗುತ್ತವೆ.

ಈ ತಾಪತ್ರಯವೇ ಬೇಡ. ಸುಮ್ಮನೇ contact lenses ಹಾಕಿಕೋಳ್ಳುತ್ತೇವೆ ಎನ್ನುವವರೂ ಇದ್ದಾರೆ. ಇನ್ನು ಕಣ್ಣುಬಿಕ್ಕಿಲ್ಲ, ಆಗಲೇ ಅಂದರೆ 14 ವರ್ಷದ ಹುಡುಗಿಯರಿಗೂ ಕನ್ನಡಕ ಬೇಡವಂತೆ; contact lenses ಬೇಕಂತೆ.

ಆದರೆ ಕಣ್ಣಿನ ಡಾಕ್ಟರುಗಳು ಏನು ಹೇಳುತ್ತಾರೋ ಸ್ವಲ್ಪ ಕೇಳಿಸಿಕೊಳ್ಳಿ. 'ನೋಡಿ, ಈ ದೃಷ್ಟಿ ದೋಷವರುವವರು ಕನ್ನಡಕ ಹಾಕಿಕೊಳ್ಳಲಿಲ್ಲ ಅಂದರೆ ದೋಷ ಮತ್ತಷ್ಟು ಹೆಚ್ಚಾಗುವ ಅಪಾಯವಿರುತ್ತದೆ'. ಈಗ ಯುವ ವಯಸ್ಸಿನಲ್ಲಿ ಸೌಂದರ್ಯೋಪಾಸಕರಾಗಿ, ಅನಗತ್ಯವಾಗಿ ಕನ್ನಡಕ ಬೇಡವೆನ್ನುವವರು ಮುಂದೆ ದಪ್ಪ ಕನ್ನಡಕ ಹಾಕಿಕೊಳ್ಳಬೇಕಾಗುತ್ತದೆ ಎಂದೂ ಎಚ್ಚರಿಸುತ್ತಾರೆ ಈ ವೈದ್ಯರು. ಮನೆಗಳಲ್ಲೇ ಇರುವುದು, ಟಿವಿ/ ಕಂಪ್ಯೂಟರ್ ನೋಡುವುದು, ಅನಾರೋಗ್ಯಕರ ಆಹಾರ ಸೇವನೆಗಳು ಮುಖ್ಯವಾಗಿ ದೃಷ್ಟಿಗೆ ಪೆಟ್ಟುಕೊಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+