ಅಳುತ್ತಿರುವ ಸಚಿವ ಸ್ಥಾನ ವಂಚಿತ ಹಾಲಾಡಿ ಶ್ರೀನಿವಾಸ್

Posted By:
Subscribe to Oneindia Kannada
4-bjp-mlas-denied-minister-post-wants-resignation
ಬೆಂಗಳೂರು, ಜುಲೈ 12:ಅತ್ತ 56 ವರ್ಷದ ಜಗದೀಶ್ ಶೆಟ್ಟರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ ಇತ್ತ ನಾಲ್ವರು ಶಾಸಕರು ರಾಜೀನಾಮೆ ಬೆದರಿಕೆಯೊಡ್ಡಿದ್ದಾರೆ.

ಕರಾವಳಿ ಭಾಗದ ಶಾಸಕರಿಗೆ ಅನ್ಯಾವಾಗಿದೆ ಎಂದು ನಾಗರಾಜ ಶೆಟ್ಟಿ ಅವರು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕುಂದಾಪುರ ಪುರಸಭೆಯ 11 ಮಂದಿ ಸದಸ್ಯರು ರಾಜೀನಾಮೆ ನೀಡಿದ್ದಾರೆ.

ಹಾಲಾಡಿ ಶ್ರೀನಿವಾಸ್, ಲಾಲಾಜಿ ಮೆಂಡನ್, ರಘುಪತಿ ಭಟ್ ಮತ್ತು ಬೈಂದೂರು ಲಕ್ಷಿನಾರಾಯಣ ಸೇರಿದಂತೆ ಕರಾವಳಿ ಭಾಗದ 8 ಶಾಸಕರು ತಮಗೆ ಸಚಿವ ಸ್ಥಾನ ನೀಡಿಲ್ಲವೆಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ತೀವ್ರ ದುಃಖಿತರಾಗಿರುವ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ್ ಅವರಂತೂ ಶಾಸಕರ ಭವನದಲ್ಲಿ ಒಂದೇ ಸಮನೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.

'ಸಚಿವ ಸ್ಥಾನ ನೀಡುವುದಾಗಿ ಪಕ್ಷದ ಹಿರಿಯ ನಾಯಕರೇ ಆಹ್ವಾನ ನೀಡಿದ್ದರು. ತಾವು ನಿಷ್ಠಾವಂತ ಕಾರ್ಯಕರ್ತರಾಗಿದ್ದರೂ ಯಾವುದೇ ಸಕಾರಣವೇ ಇಲ್ಲದೆ ತಮಗೆ ಸಚಿವ ಸ್ಥಾನ ನೀಡಿಲ್ಲ' ಎಂದು ಈ ಎಲ್ಲ ಶಾಸಕರೂ ಸಿಡಿದೆದ್ದಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಅವರು ಶಾಸಕರ ಭವನಕ್ಕೆ ತೆರಳಿದ್ದು, ಬಂಡೆದದ್ದಿರುವ ಶಾಸಕರನ್ನು ಸಮಾಧಾನಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Even as the Jagadish Shettar sworn-in as new Chief Minister of Karnataka in Bangalore today (July 12) Four MLAs rebel and wants to submit resignation.
Please Wait while comments are loading...