ಬಾಲಕಿ ಮೇಲೆ ಶಿಕ್ಷಕನ ನಿರಂತರ ಅತ್ಯಾಚಾರ

42 ವರ್ಷದ ಆರೋಪಿ ಶಿಕ್ಷಕ ಶೈಲೇಂದ್ರ ಸಿಂಗ್ ಬಾಧಿತ ಬಾಲಕಿಯ ಸೋದರಿಗೆ ಫೋನ್ ಮಾಡಿ ಅಶ್ಲೀಲವಾಗಿ ಮಾತನಾಡಿದಾಗ ಪ್ರಕರಣ ಸುಳಿವು ಸಿಕ್ಕಿದೆ. ಬಾಲಕಿಯ ಪೋಷಕರು ತಕ್ಷಣ ಪೊಲೀಸರಿಗೆ ದೂರು ನೀಡಿದಾಗ ಅತ್ಯಾಚಾರದ ಇಡೀ ವೃತ್ತಾಂತ ಬಿಚ್ಚುಕೊಂಡಿದೆ.
ಅಜ್ಮೀರ್ ಗೇಟ್ ಬಳಿಯಿರುವ ಶಾಲಾಯಲ್ಲಿ ವ್ಯಾಸಂಗ ಮಾಡುತ್ತಿರುವ ಸದರಿ ವಿದ್ಯಾರ್ಥಿನಿಯನ್ನು ಪೋಷಕರು ಹೆಚ್ಚು ವಿಚಾರಿಸಿದಾಗ ಬಾಲಕಿ ಒಂದೇ ಸಮನೆ ಅಳತೊಡಗಿದ್ದಾಳೆ. ಕಳೆದ ನಾಲ್ಕು ವರ್ಷಗಳಲ್ಲಿ ಆರೋಪಿ ಶಿಕ್ಷಕ ತನ್ನನ್ನು ಉತ್ತರ ದೆಹಲಿಯಲ್ಲಿ ವಿವಿಧ ಹೋಟೆಲುಗಳಿಗೆ ಕರೆದುಕೊಂಡು ಹೋಗಿ ತಿಂಡಿ ಕೊಡಿಸುತ್ತಿದ್ದ. ನಂತರ ತನ್ನ ಮೇಲೆ ಲೈಂಗಿಕ ದಾಳಿ ಮಾಡುತ್ತಿದ್ದ ಎಂದು ಬಾಲಕಿಯು ಪೋಷಕರ ಬಳಿ ಹೇಳಿಕೊಂಡಿದ್ದಾಳೆ.
ವಿಷಯವನ್ನು ಯಾರಿಗಾದರೂ ಹೇಳಿದರೆ ಪರಿಣಾಮ ನೆಟ್ಟಿಗಿರುವುದಿಲ್ಲ ಎಂದು ಕಾಮುಕ ಶಿಕ್ಷಕ ಬೆದರಿಕೆಯೊಡ್ಡಿದ್ದ. ಹಾಗಾಗಿ ತಾನು ಯಾರೊಂದಿಗೂ ತನ್ನ ಬವಣೆಯನ್ನು ಹೇಳೊಕೊಳ್ಳಲಾಗಲಿಲ್ಲ ಎಂದು ಬಾಲಕಿ ಅಲವತ್ತುಕೊಂಡಿದ್ದಾಳೆ. ಸಹಕರಿಸದಿದ್ದಲ್ಲಿ ತನ್ನೊಂದಿಗೆ ಅಶ್ಲೀಲ ಭಂಗಿಗಳಲ್ಲಿರುವ ಫೋಟೋಗಳನ್ನು ಇಂಟರ್ ನೆಟ್ ನಲ್ಲಿ ಹಾಕುವುದಾಗಿಯೂ ಸದರಿ ಶಿಕ್ಷಕ ಬೆದರಿಸುತ್ತಿದ್ದ ಎಂದು ಬಾಲಕಿ ಹೇಳಿಕೊಂಡಿದ್ದಾಳೆ.












Click it and Unblock the Notifications