ಬಿಸ್ಕತ್ತು ಬೇಕಾ ಪುಟ್ಟಿ ಎಂದವನು ರೇಪ್ ಮಾಡಿಬಿಟ್ಟ

ಯುವಕನ ಕಾಮದಾಹಕ್ಕೆ ಸಿಲುಕಿದ ಬಾಲಕಿ ಇನ್ನೂ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ. ಸದ್ಯ ಪೊಲೀಸರ ಅತಿಥಿಯಾಗಿರುವ ಯುವಕನನ್ನು ಹೊರಬಿಡಿ ಒಂದು ಕೈ ನೋಡಿಕೊಳ್ಳುತ್ತೇವೆ ಎಂದು ಹರಪ್ಪನಹಳ್ಳಿಯ ಬಾಪೂಜಿ ನಗರ ನಿವಾಸಿಗಳು ಠಾಣೆ ಮುಂದೆ ಜಮಾಯಿಸಿದ್ದಾರೆ.
ಹರಪ್ಪನಹಳ್ಳಿಯ ಬಾಪೂಜಿ ನಗರದ 3ನೇ ತರಗತಿ ಓದುತ್ತಿರುವ 8 ವರ್ಷದ ಬಾಲಕಿ ಯಶೋದಾ(ಹೆಸರು ಬದಲಾಯಿಸಲಾಗಿದೆ) ತನ್ನ ಮನೆಯ ಬಳಿ ಗೆಳತಿಯರೊಂದಿಗೆ ಆಟವಾಡುತ್ತಿದ್ದಳು. ಆಗ ಅದೇ ಬಡಾವಣೆಯ 28 ವರ್ಷದ ರಾಜು ಎಂಬಾತ ಯಶೋದಾಳನ್ನು ಕರೆದು ಬಿಸ್ಕೆಟ್ ಕೊಡುತ್ತೇನೆ ನನ್ನ ಜೊತೆ ಬಾ ಎಂದಿದ್ದಾನೆ. ಮೊದಲಿಗೆ ಅತನನ್ನು ಅನುಮಾನಿಸಿದ ಯಶೋದಾ ನಂತರ ಬಿಸ್ಕೇಟ್ ಆಸೆಯಿಂದ ಆತನ ಜೊತೆಗೆ ಹೋಗಿದ್ದಾಳೆ.
ಯಶೋದಾಳನ್ನು ಬಾಪೂಜಿ ನಗರದ ಹೊರ ವಲಯದಲ್ಲಿರುವ ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಬಾಲಕಿಯ ಮೈಮೇಲೆ ಅಲ್ಲಲ್ಲಿ ಕಚ್ಚಿದ ಗಾಯಗಳಾಗಿದೆ. ಬಾಲಕಿಯನ್ನು ಹಿಂಸಿಸಿ ಸಂಭೋಗಿಸಿದ್ದಾನೆ. ರಾಜುವಿನ ದೇಹ ಭಾರ ತಾಳಲಾರದೆ ಬಾಲಕಿ ಚೀರಾಡಿದ್ದಾಳೆ. ಬಾಲಕಿಯ ಚೀರಾಟ ಕೇಳಿದ ಸ್ಥಳೀಯರೊಬ್ಬರು ಕೂಡಲೇ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ರಾಜು ಮೈಗೊಡವಿ ಕೊಂಡು ಓಡಿಹೋಗಿದ್ದಾನೆ.
ತೀವ್ರ ಅಸ್ವಸ್ಥಳಾಗಿದ್ದ ಬಾಲಕಿಳನ್ನು ದಾವಣಗೆರೆ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಪರಾರಿಯಾಗಿದ್ದ ಆರೋಪಿ ರಾಜು ವಿರುದ್ಧ ಬಾಲಕಿ ತಂದೆ ಹನುಮಂತಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಹರಪನಹಳ್ಳಿ ಪಟ್ಟಣ ಠಾಣೆ ಪೊಲೀಸರು ರಾಜುವನ್ನು ಬಂಧಿಸಿದ್ದಾರೆ.
ಬಾಲಕಿ ತಂದೆ ನೀಡಿದ ದೂರಿನ ಪ್ರತಿ ಈ ಕೆಳಗಿನಂತಿದೆ: ಹರಪನಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂ: 85/2012, ಕಲಂ: 376 (ಎಫ್) ಐಪಿಸಿ.
ಹರಪನಹಳ್ಳಿ ಪಟ್ಟಣದ ಬಾಪೂಜಿನಗರದ ವಾಸಿಯಾದ ಪಿರ್ಯಾದಿ ಶ್ರೀಮತಿ ದೇವಮ್ಮ ಗಂಡ ಹನುಮಂತಪ್ಪ ಇವರ ಕೊನೆಯ ಮಗಳಾದ 8 ವರ್ಷದ ಬಾಲಕಿ ಈಕೆಯು ಜ:30/06/12 ರಂದು ಸಂಜೆ 7-00 ಗಂಟೆ ಸಮಯದಲ್ಲಿ ತಮ್ಮ ಕೇರಿಯ ಹುಡುಗಿಯರಾದ ರಮ್ಯಾ(ಹೆಸರು ಬದಲಾಯಿಸಾಲಾಗಿದೆ) ತಂದೆ ಹನುಮಂತಪ್ಪ, ಪೂಜಾ ತಂದೆ ಕೀರಪ್ಪ, ಇವರೊಂದಿಗೆ ಆಟವಾಡುತ್ತಿದ್ದಾಗ, ಅದೇ ಕೇರಿಯ ವಾಸಿಯಾದ ರಾಜ ತಂದೆ ದುರುಗಪ್ಪ ಇವನು ಬಂದು ಯಶೋದಳಿಗೆ ಬಿಸ್ಕಿಟ್ ಕೊಡಿಸುತ್ತೇನೆ ಬಾ ಅಂತಾ ಆಕೆಯನ್ನು ಹೆಗಲ ಮೇಲೆ ಎತ್ತಿಕೊಂಡು ತಮ್ಮ ಕೇರಿಯ ಸ್ವಲ್ಪ ಮುಂದೆ ಇರುವ ಸ್ಮಶಾನದಲ್ಲಿ ಹೋಗಿ, ಸಂಜೆ 7-20 ಗಂಟೆ ಸಮಯದಲ್ಲಿ ಮಂಜುಳಾನ್ನು ಮಲಗಿಸಿದಾಗ, ಬಾಲಕಿ ಕೂಗಾಡಿದಾಗ, ಆಕೆಯ ಬಾಯಿಯನ್ನು ಕೈಯಿಂದ ಮುಚ್ಚಿ ತುಟಿಗೆ ಕಚ್ಚಿ ಆಕೆಯ ಲಂಗವನ್ನು ಎತ್ತಿ ಬಲಾತ್ಕಾರವಾಗಿ ಸಂಭೋಗ ಮಾಡಿರುತ್ತಾನೆ. ಆರೋಪಿತ ರಾಜ ತಂದೆ ದುರುಗಪ್ಪ, 28ವರ್ಷ, ವಾಸ:ಬಾಪೂಜಿನಗರ, ಹರಪನಹಳ್ಳಿ ಪಟ್ಟಣ ಇವರ ಮೇಲೆ ಮೇಲ್ಕಂಡಂತೆ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.












Click it and Unblock the Notifications