ನಿತ್ಯಾನಂದನ ಮೇಲೆ 16 ಲಕ್ಷ ಡಾಲರ್ ವಂಚನೆ ಆರೋಪ

Nithyananda held guilty in US court
ಕ್ಯಾಲಿಫೋರ್ನಿಯಾ, ಜು.2: ಮದುರೈ ಅಧೀನಂ ಪೀಠದ ಮೇಲೆ ತಮಿಳುನಾಡು ಪೊಲೀಸರು ಮಂಗಳವಾರ (ಜೂ.26) ದಾಳಿ ಮಾಡಿದ ನಂತರ ವಿವಾದಿತ ಧರ್ಮಗುರು ಸ್ವಾಮಿ ನಿತ್ಯಾನಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕ್ಯಾಲಿಫೋರ್ನಿಯಾದ ನಿತ್ಯಾನಂದ ಫೌಂಡೇಶನ್ ಅನ್ನು ವಂಚಕ ಸಂಸ್ಥೆ ಎಂದು ಮಂಗಳವಾರ (ಜು.3) ಸ್ಥಳೀಯ ನ್ಯಾಯಾಲಯ ಘೋಷಿಸಿದೆ.

ಲಾಭರಹಿತ ಸಂಸ್ಥೆಯಾಗಿರುವ ನಿತ್ಯಾನಂದ ಫೌಂಡೇಶನ್ ಒಂದು ವಂಚಕ ಸಂಸ್ಥೆಯಾಗಿದೆ. ದಾನ ರೂಪದಲ್ಲಿ ಭಕ್ತಾದಿಗಳಿಂದ ಸಂಗ್ರಹಿಸಿದ ಹಣವನ್ನು ನಿತ್ಯಾನಂದ ಫೌಂಡೇಶನ್ ಬಡ್ಡಿ ಸಮೇತ ದಾನಿಗಳಿಗೆ ನೀಡಬೇಕು ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ನಿತ್ಯಾನಂದ ಫೌಂಡೇಶನ್ ಮೇಲೆ ಸುಮಾರು 16 ಲಕ್ಷ ಡಾಲರ್ ವಂಚನೆ ಎಸೆಗಿದ ಆರೋಪವಿದೆ.

ನಿತ್ಯಾನಂದ ಫೌಂಡೇಶನ್ ನಲ್ಲಿ ಘೋಷಿತ ಕಾರ್ಯಕ್ರಮಗಳನ್ನು ನಡೆಸುತ್ತಿಲ್ಲ ಎಂದು ಉಸ್ತುವಾರಿ ವಹಿಸಿಕೊಂಡಿರುವ ಸ್ವಾಮಿ ಗೋಪಾಲನಂದ ಅಲಿಯಾಸ್ ಗೋಪಾಲಚಿನ್ನರೆಡ್ಡಿ ಅವರ ಮೇಲೆ ಆರೋಪ ಹೊರೆಸಿ ಮಫತ್ ಲಾಲ್ ಚಾವ್ಲಾ ಅವರು ದೂರು ಸಲ್ಲಿಸಿದ್ದರು.

2010ರಲ್ಲಿ ಗೋಪಾಲನಂದ ಅವರನ್ನು ಬಂಧಿಸಲಾಗಿತ್ತು. ಚಾವ್ಲಾ ಅವರಿಗೆ ಸುಮಾರು 8,800 ಕೋಟಿ ರು ಮರು ಪಾವತಿಸುವಂತೆ ಕೋರ್ಟ್ ಹೇಳಿದೆ.

9720 Central Ave Montclair, California 91763 ವಿಳಾಸದಲ್ಲಿರುವ ನಿತ್ಯಾನಂದ ಫೌಂಡೇಶನ್ ಆದಾಯ ತೆರಿಗೆ ಐಡಿ 020716687 ಆಗಿದೆ. ಲಾಭ ರಹಿತ ಸಂಸ್ಥೆ Nonprofit Religious Organisation ಎಂದು ದಾಖಲಿಸಲಾಗಿದೆ. ಸ್ಥಾಪನೆ ಕೋಡ್ Church 170(b)(1)(A)(i) ಸಂಖ್ಯೆಯಂತೆ ಯಾವುದೇ ತೆರಿಗೆ ಫೈಲಿಂಗ್ ಅವಶ್ಯಕತೆ ಇಲ್ಲ ಎಂದು ನಮೂದಿಸಲಾಗಿದೆ.

ನಿತ್ಯಾನಂದ ಫೌಂಡೇಶನ್ ನ ಸರಾಸರಿ ಆದಾಯ: $2,693,322
ಫೌಂಡೇಶನ್ ನ ಆಸ್ತಿ ಮೌಲ್ಯ : $5.75 ಮಿಲಿಯನ್
ಆಸ್ತಿ ವಿಸ್ತರಣೆ ವ್ಯಾಪ್ತಿ : $5,000,000 ನಿಂದ $9,999,999
ಆದಾಯ ಗಳಿಕೆ ಸಾಮರ್ಥ್ಯ: $1,000,000 ನಿಂದ 4,999,999 ಇದೆ ಎಂದು ತಿಳಿದು ಬಂದಿದೆ.

ಮದುರೈನ ಸುಮಾರು 1500 ವರ್ಷ ಇತಿಹಾಸ ಹೊಂದಿರುವ ಶೈವ ಮಠದ ಕಿರಿಯ ಸ್ವಾಮೀಜಿಯಾಗಿರುವ ನಿತ್ಯಾನಂದ ಅವರಿಗೆ ಅಮೆರಿಕದಲ್ಲೂ ಅಸಂಖ್ಯಾತ ಭಕ್ತರು, ಅನುಯಾಯಿಗಳಿದ್ದಾರೆ.ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ಮೇಲೆ ಲೈಂಗಿಕ ಕಿರುಕುಳ, ಗಲಭೆ, ಶಾಂತಿ ಭಂಗ ಮುಂತಾದ ಆರೋಪಗಳಿವೆ. ರಾಮನಗರ ಕೋರ್ಟಿನಿಂದ ಜಾಮೀನು ಪಡೆದು ನಿತ್ಯಾನಂದ ಹೊರಬಿದ್ದಿದ್ದಾರೆ.

ಕರ್ನಾಟಕದ ಬಿಡದಿ ಆಶ್ರಮದಲ್ಲಿ ನಡೆದ ಗಲಭೆಯಿಂದ ಆಶ್ರಮಕ್ಕೆ ಧಕ್ಕೆ ಉಂಟಾಗಿದೆ ಎಂದು ರಾಜ್ಯ ಸರ್ಕಾರದ ಮೇಲೆ 10 ಕೋಟಿ ರು. ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಲು ನಿತ್ಯಾನಂದ ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದಲ್ಲದೆ ನಿತ್ಯಾನಂದ ಆಶ್ರಮ ವಾಷಿಂಗ್ಟನ್ ನಲ್ಲೂ ಒಂದಿದೆ (ಒಂದು ಸುತ್ತು ಹಾಕಿ ಬನ್ನಿ) ವಾಷಿಂಗ್ಟನ್ ಫೌಂಡೇಶನ್ ಇನ್ನೂ ಹೆಚ್ಚಿನ ಆದಾಯ ಗಳಿಕೆಯಲ್ಲಿ ಹಿಂದಿದೆ. $7,170 ಸರಾಸರಿ ಆದಾಯ ದಾಖಲಿಸಿದೆ. ಲಾಸ್ ಏಂಜಲೀಸ್ ನ ಆಶ್ರಮ ಬಂದ್ ಮಾಡಲಾಗಿದೆ. ಸಿಂಗಪುರದಲ್ಲಿ ಆಶ್ರಮ ಕಾರ್ಯ ನಿರ್ವಹಿಸುತ್ತಿದ್ದರೂ ಮಲೇಶಿಯಾದಲ್ಲಿ ಇತ್ತೀಚೆಗೆ ಆಶ್ರಮವನ್ನು ಮುಚ್ಚಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+