ಕಲಘಟಗಿ ಬಳಿ ಭೀಕರ ಅಪಘಾತ : 12 ಕಾರ್ಮಿಕರ ಸಾವು
ಹುಬ್ಬಳ್ಳಿ,
ಜೂ. 26 : ಮಂಗಳವಾರ ಬೆಳಗಿನ ಜಾವ ಲಾರಿ ಮತ್ತು ಮ್ಯಾಕ್ಸಿ ಕ್ಯಾಬ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ, ಮ್ಯಾಕ್ಸಿ ಕ್ಯಾಬ್ ತಗ್ಗಿಗೆ ಉರುಳಿ 12 ಜನ ಕೂಲಿ ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ. ಘಟನೆ ನಡೆದಿರುವುದು ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನಲ್ಲಿರುವ ಕಲಕುಂಟಿ ಕ್ರಾಸ್ ಬಳಿ. id="toptextpromo">ಕಾರ್ಮಿಕರೆಲ್ಲರು
ಕಲಘಟಗಿಯಿಂದ ಹಳಿಯಾಳಕ್ಕೆ ಕೂಲಿ ಕೆಲಸಕ್ಕೆ ಮ್ಯಾಕ್ಸಿ ಕ್ಯಾಬ್ ನಲ್ಲಿ ಹೋಗುತ್ತಿದ್ದರು. ಮ್ಯಾಕ್ಸಿ ಕ್ಯಾಬನ್ನು ಬಲಬದಿಯಿಂದ ಓವರ್ ಟೇಕ್ ಮಾಡಲು ಲಾರಿ ಚಾಲಕ ಯತ್ನಿಸಿದಾಗ ಕ್ಯಾಬಿಗೆ ಲಾರಿ ಡಿಕ್ಕಿ ಹೊಡೆದು, ಮ್ಯಾಕ್ಸಿ ಕ್ಯಾಬ್ ತಗ್ಗಿಗೆ ಉರುಳಿದೆ. ಮ್ಯಾಕ್ಸಿ ಕ್ಯಾಬ್ ಮೇಲೆಯೇ ಲಾರಿ ಕೂಡ ಉರುಳಿ ಬಿದ್ದಿದೆ. id='are-slot-1' class='oiad oi-axt oiadv'> id='top-searched-articles'>ಮ್ಯಾಕ್ಸಿ
ಕ್ಯಾಬ್ ಮೇಲೆ ಲಾರಿ ಉರುಳಿ ಬಿದ್ದಿದ್ದರಿಂದ ಪ್ರಾಣ ಹಾನಿ ಹೆಚ್ಚಾಗಿದೆ. ಇದರಿಂದಾಗಿ ಗಾಯಾಳುಗಳನ್ನು ರಕ್ಷಿಸುವ ಕಾರ್ಯ ಕೂಡ ಕುಂಠಿತವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ರಸ್ತೆ ತೀರ ಕಿರಿದಾಗಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಧಾರವಾಡದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸತ್ತವರು ಮತ್ತು ಗಾಯಾಳುಗಳ ಬಗ್ಗೆ ಹೆಚ್ಚಿನ ವಿವರ ತಿಳಿದುಬರಬೇಕಿದೆ.











Click it and Unblock the Notifications