ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿ ಲಘು ಭೂಕಂಪ

Mild quake at Kasturba road in Bangalore
ಬೆಂಗಳೂರು, ಜೂ. 25 : ಸೋಮವಾರ ಮಧ್ಯಾಹ್ನ 3.30ರ ಸುಮಾರಿಗೆ ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿ ಲಘು ಭೂಕಂಪ ಸಂಭವಿಸಿದ ಅನುಭವವಾಗಿದೆ. ಏಪ್ರಿಲ್ 14ರಂದು ಭೂಕಂಪ ಸಂಭವಿಸಿದ ನಂತರ ಬೆಂಗಳೂರಿನಲ್ಲಿ ಕಂಪನದ ಅನುಭವವಾಗುತ್ತಿರುವುದು ಇದು ಎರಡನೇ ಬಾರಿ. ಆಗ ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿತ್ತು.

ಕಂಪನದ ಪ್ರಮಾಣ ಎಷ್ಟೆಂದು ತಿಳಿದುಬಂದಿಲ್ಲ. ಆದರೆ, ಕಂಪನದ ಅನುಭವವಾಗುತ್ತಿದ್ದಂತೆ ಸುರಿಯುತ್ತಿದ್ದ ಧೋಧೋ ಮಳೆಯಲ್ಲಿ ಆ ರಸ್ತೆಯಲ್ಲಿ ಅನೇಕ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಭಯದಿಂದ ಕಚೇರಿಬಿಟ್ಟು ರಸ್ತೆಗೆ ಓಡಿಬಂದರು. ಕಂಪನ ಕೇವಲ ಕೆಲ ಸೆಕೆಂಡುಗಳು ಮಾತ್ರ ಆಗಿದ್ದು, ಮೇಲ್ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಹೆಚ್ಚಿನ ಅನುಭವವಾಗಿದೆ.

ರಸ್ತೆಗೋಡಿ ಬಂದ ಉದ್ಯೋಗಿಗಳ ಪ್ರಕಾರ, ಕಂಪ್ಯೂಟರುಗಳು ಗಡಗಡನೆ ನಡುಗಲು ಪ್ರಾರಂಭಿಸಿದವು, ಲಿಫ್ಟ್ ನಲ್ಲಿ ಸಾಗುತ್ತಿದ್ದಾಗ ಕೂಡ ಕಂಪಿಸಿದ ಅನುಭವವಾಯಿತು. ಕಂಪನ ಅನುಭವಿಸಿದವರ ಹಾಹಾಕಾರ ಕೇಳುತ್ತಿದ್ದಂತೆ ಕಂಪನ ಅನುಭವ ಆಗದಿರುವ ಜನರು ಕೂಡ ರಸ್ತೆಗೆ ಓಡೋಡಿ ಬಂದಿದ್ದಾರೆ. ಹೊರಗೆ ನೋಡಿದರೆ, ಕಪ್ಪು ಕಾರ್ಮೋಡ, ಧೋಧೋ ಮಳೆ. ಕಟ್ಟಡದಲ್ಲಿ ಇರುವ ಹಾಗೂ ಇಲ್ಲ, ರಸ್ತೆಗೆ ಬರುವ ಹಾಗೂ ಇಲ್ಲ ಎಂಬಂಥ ಪರಿಸ್ಥಿತಿ. ಇದರಿಂದಾಗಿ ಕಸ್ತೂರಬಾ ರಸ್ತೆಯಲ್ಲಿ ಭಾರೀ ಜನದಟ್ಟಣೆ ಸಂಭವಿಸಿತ್ತು.

ಆದರೆ, ಭೂಗರ್ಭ ನಿಷ್ಣಾತರ ಪ್ರಕಾರ, ಭೂಮಿಯಲ್ಲಿ ಪ್ರತಿದಿನವೂ ಕಂಪನ ಸಂಭವಿಸುತ್ತಲೇ ಇರುತ್ತದೆ. ಆದರೆ, ಈ ಯಾವ ಕಂಪನಗಳೂ ಅಪಾಯಕಾರಿಯಲ್ಲ, ಅಂತಹ ಹಾನಿಯೂ ಸಂಭವಿಸುವುದಿಲ್ಲ. ಭೂಗರ್ಭ ಶಾಸ್ತ್ರಜ್ಞರು ದಿನನಿತ್ಯ ರಿಕ್ಟರ್ ಮಾಪಕದಲ್ಲಿ ಭೂಕಂಪನವನ್ನು ದಾಖಲಿಸುತ್ತಲೇ ಇರುತ್ತಾರೆ. ಇದರಿಂದ ಹೆದರುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಹವಾಮಾನ ಇಲಾಖೆ ಪ್ರತಿದಿನ ಸಂಭವಿಸುವ ಭೂಕಂಪನವನ್ನು ದಾಖಲಿಸುತ್ತಿರುತ್ತದೆ. ಜೂ.24ರಂದು ಮಧ್ಯಾಹ್ನ 1 ಗಂಟೆ 30 ನಿಮಿಷ 34 ಸೆಕೆಂಡಿಗೆ ಚೀನಾದಲ್ಲಿ 5.6 ಪ್ರಮಾಣದಷ್ಟು ಭೂಕಂಪ ಸಂಭವಿಸಿದೆ.

ಏಪ್ರಿಲ್ 11ರಂದು ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ನಂತರ ಏ.12ರಂದು ಮೆಕ್ಸಿಕೋದಲ್ಲಿ ಮತ್ತು ಏ.14ರಂದು ಕರ್ನಾಟಕ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಸರಣಿ ಭೂಕಂಪ ಸಂಭವಿಸಿ, ಆತಂಕದ ಅಲೆಗಳನ್ನು ಎಬ್ಬಿಸಿತ್ತು. ಇಂಡೋನೇಷ್ಯಾ ಹೊರತುಪಡಿಸಿದರೆ ಬೇರೆಡೆಗಳಲ್ಲಿ ಅಂತಹ ಹಾನಿ ಉಂಟಾಗಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+