ಬಾಲಕಿಯರ ಮೇಲೆ ಕಾರು ಹರಿಸಿದ ಬಾಲಕ

boy-runs-car-over-two-girls-one-dead
ನವದೆಹಲಿ, ಜೂನ್ 22: ಆ ಬಾಲಕನಿಗಿನ್ನೂ 14 ವರ್ಷ ತುಂಬಿಲ್ಲ. ಆದರೂ car drive ಮಾಡುವ ಉಮೇದಿಗೆ ಬಿದ್ದಿದ್ದಾನೆ. ತಾನು ಚಲಾಯಿಸುತ್ತಿದ್ದ ಕಾರನ್ನು ಇಬ್ಬರು ಪುಟ್ಟ ಬಾಲಕಿಯರ ಮೇಲೆ ಹತ್ತಿಸಿದ್ದಾನೆ. ಘಟನೆಯಲ್ಲಿ ಒಬ್ಬ ಬಾಲಕಿ ತೀವ್ರ ಗಾಯಗಳಿಂದಾಗಿ ಮೃತಪಟ್ಟಿದ್ದಾಳೆ. ಮೊನ್ನೆ ಬುಧವಾರ ದಕ್ಷಿಣ ಜೈತ್ ಪುರದಲ್ಲಿ ಈ ಘಟನೆ ನಡೆದಿದೆ.

ತನ್ನ ಚಿಕ್ಕಪ್ಪನಿಂದ ಆಲ್ಟೋ ಕಾರನ್ನು ಪಡೆದ ಆರೋಪಿ ಬಾಲಕ ಅದರಲ್ಲಿ ತನ್ನ ಸ್ನೇಹಿತರನ್ನು ಕೂಡಿಸಿಕೊಂಡು ಕಾರು ಪರಾಕ್ರಮ ಮೆರೆಯಲು ಮುಂದಾಗಿದ್ದಾನೆ. ಕಾರನ್ನು ರಿವರ್ಸ್ ಗೇರಿಗೆ ತೆಗೆದುಕೊಳ್ಳುವಾಗ 5 ವರ್ಷದ ಮುನ್ನಿ ಮತ್ತು 4 ವರ್ಷ ಹಿಮಾಂಶಿ ಎಂಬ ಬಾಲಕಿಯರ ಮೇಲೆ ಹತ್ತಿಸಿದ್ದಾನೆ. ಮುನ್ನಿ ತಲೆಗೆ ತೀವ್ರ ಪೆಟ್ಟು ಬಿದ್ದು ಸಾವನ್ನಪ್ಪಿದ್ದರೆ ಹಿಮಾಂಶಿ ಕೈ ಮುರಿದುಕೊಂಡು ಆಸ್ಪತ್ರೆ ಸೇರಿದ್ದಾಳೆ.

ಅಪಘಾತವಾಗುತ್ತಿದ್ದಂತೆ ಗಾಬರಿಗೆ ಬಿದ್ದ ಬಾಲಕ/ ಚಾಲಕ ಸ್ಥಳದಿಂದ ಪರಾರಿಯಾಗಿದ್ದ. ಆದರೆ ಪೊಲೀಸರು ತದನಂತರ ಅವನನ್ನು ವಶಕ್ಕೆ ತೆಗೆದುಕೊಂಡು, ಬಾಲಾಪರಾಧ ಕೋರ್ಟಿಗೆ ಒಪ್ಪಿಸಿದ್ದಾರೆ. ಬಾಲಾಪರಾಧಿಯನ್ನು ಮನೆಗೆ ಕಳಿಸಿದ ಕೋರ್ಟ್, ವಿಚಾರಣೆಗೆ ಕಾಲ ಕಾಲಕ್ಕೆ ಹಾಜರಾಗುತ್ತಿರಬೇಕು ಎಂದು ಹೇಳಿಕಳಿಸಿದೆ.

ಈ ಮಧ್ಯೆ, ಪೊಲೀಸರು ಕಾರಿನ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಚಾಲನಾ ಪರವಾನಗಿ ಇಲ್ಲದಿದ್ದರೂ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಕಾರಿನ ಚಾವಿ ನೀಡಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+