ಉದ್ಯೋಗದ ಆಮಿಷ: ವಿವಾಹಿತ ಮಹಿಳೆ ಮಾರಾಟ

ಸದರಿ ವಿವಾಹಿತ ಮಹಿಳೆ ರಾಜಸ್ಥಾನ ಮೂಲದವರು. ಆಕೆಗೊಬ್ಬ ಆಪತ್ಭಾಂಧವನ ಪರಿಚಯವಾಯಿತು. ಆದರೆ ಆ ನಂಬಿಕೆಯ ದ್ರೋಹಿ ಆಕೆಯ ಕಷ್ಟ ಕೇಳಿದವನೇ ಭರ್ಜರಿ ಸಂಬಳ ತರುವ ಉದ್ಯೋಗವನ್ನು ಕೊಡಿಸುವುದಾಗಿ ಹೇಳಿ, marriage bureauಗೆ ಮಾರಾಟ ಮಾಡಿದ್ದಾನೆ.
ಆರೋಪಿಯು ತನ್ನ ಮತ್ತಷ್ಟು ಗೆಳೆಯರ ಜತೆಗೂಡಿ ರಾಜಸ್ಥಾನ ಮತ್ತು ಗುಜರಾತಿನಲ್ಲಿ ಪುರುಷರಿಗೆ ಹೆಣ್ಣುಗಳನ್ನು ಹೊಂದಿಸುವ marriage bureauಗೆ ಸದರಿ ವಿವಾಹಿತ ಮಹಿಳೆಯನ್ನು ಮಾರಾಟ ಮಾಡಿದ್ದಾನೆ. ಸದರಿ ಮಹಿಳೆಯು ಐದು ವರ್ಷಗಳ ಹಿಂದೆ ಮದುವೆಯಾಗಿದ್ದಳು.
ಆರ್ಥಿಕ ಸಂಕಷ್ಟದಲ್ಲಿದ್ದ ಮಹಿಳೆಯು ತನ್ನ ಮೂರು ವರ್ಷದ ಮಗುವಿನ ಜತೆ ಆರೋಪಿ ಆಪತ್ಭಾಂಧವನ ಜತೆಗೂಡಿ ಒಳ್ಳೆಯ ಭವಿಷ್ಯವನ್ನರಸಿ ಗಂಡನ ಮನೆಯಿಂದ ಹೊರಬಿದ್ದಿದ್ದಾಳೆ. ಕೆಲವು ದಿನಗಳ ನಂತರ ಆಲಿ ಎಂಬ ಯುವಕನೊಬ್ಬ ಆ ಮಹಿಳೆಯ ಗಂಡನ ಮನೆಗೆ ತೆರಳಿ, ಮಗುವನ್ನು ಗಂಡನ ಮನೆಯವರಿಗೆ ಒಪ್ಪಿಸಿದ್ದಾನೆ.
ಮನೆಯವರು ವಿಚಾರಿಸಿದಾಗ ಮಗುವಿನ ತಾಯಿ ಯಾರು ಎಂದಾಗಲಿ ಅಥವಾ ಆ ಮಹಿಳೆ ಎಲ್ಲಿದ್ದಾಳೆ ಎನ್ನುವುದರ ಬಗ್ಗೆ ಸಮಂಜಸ ಉತ್ತರ ನೀಡಿಲ್ಲ. ಆಗ ಗಂಡನ ಮನೆಯವರು ವಿಷಯವನ್ನು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.
ಮಹಿಳೆಯ ಅಪಹರಣ ಆರೋಪ ಹೊರಿಸಿ, ಪೊಲೀಸರು ಆ ಯುವಕನನ್ನು ಬಂಧಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಮಹಿಳೆಯನ್ನು ತಂಡವೊಂದು ಒಂದು ಲಕ್ಷ ರುಪಾಯಿಗೆ ಮಾರಾಟ ಮಾಡಿರುವುದಾಗಿ ಯುವಕ ತಿಳಿಸಿದ್ದಾನೆ. ಯುವಕನ ಮಾಹಿತಿಯನ್ನಾಧರಿಸಿ ಪೊಲೀಸರು ಮಹಿಳೆಯನ್ನು ಕರೆತರಲು ಕ್ರಮ ಕೈಗೊಂಡಿದ್ದಾರೆ.
ಅದಕ್ಕೂ ಮುನ್ನ, ಸದರಿ ಮಹಿಳೆಯು ಅದೊಂದು ದಿನ ಗಂಡನಿಗೆ ಫೋನ್ ಮಾಡಿ- 'ತನಗೆ ಬ್ಯಾಂಕೊಂದರಲ್ಲಿ ಒಳ್ಳೆಯ ಕೆಲಸ ಸಿಕ್ಕಿದೆ. ಇದಕ್ಕೆ ಗೆಳೆಯನೊಬ್ಬ ನೆರವಾಗಿದ್ದಾನೆ ಎಂದು ತಿಳಿಸಿದ್ದಳು.












Click it and Unblock the Notifications