ಟೋರೆಸ್ 2 ಗೋಲು, ಸ್ಪೇನ್ ಗೆ ಭರ್ಜರಿ ಜಯ

ದುರ್ಬಲ ಐರ್ಲೆಂಡ್ ತಂಡವನ್ನು ಹೀನಾಯವಾಗಿ 0-4 ಅಂತರದಿಂದ ಸ್ಪೇನ್ ತಂಡ ಸೋಲಿಸಿದೆ.
ಸಿ ಗುಂಪಿನಲ್ಲಿ ಕ್ರೋಷಿಯಾದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿರುವ ಹಾಲಿ ಚಾಂಪಿಯನ್ ಸ್ಪೇನ್ ತಂಡ ಕ್ವಾಟರ್ ಫೈನಲ್ ಹಂತಕ್ಕೇರುವುದು ಖಾತ್ರಿಯಾಗಿದೆ.
ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದರೂ ಯುರೋ 2008ರ ಹೀರೋ ಟೊರೆಸ್ ಅವರನ್ನು ಆರಂಭದಿಂದಲೂ ಕಣಕ್ಕಿಳಿಸಿದ ಸ್ಪೇನ್ ಕೋಚ್ ತಂತ್ರ ಫಲ ನೀಡಿದೆ. ಪಂದ್ಯದ ಆರಂಭದ ನಾಲ್ಕು ನಿಮಿಷದಲ್ಲೇ ಮೊದಲ ಗೋಲು ದಾಖಲಿಸಿದ್ದರು.
'ಇಟಲಿ ಮೇಲೆ ತೋರಿಸಿದ ಪ್ರದರ್ಶನದಿಂದ ನಮ್ಮ ಅಭಿಮಾನಿಗಳು ನಿರಾಶೆಗೊಂಡಿದ್ದರು. ಐರ್ಲೆಂಡ್ ಮೇಲೆ ದೊಡ್ಡ ಜಯ ದಾಖಲಿಸುವುದು ನಮ್ಮ ಉದ್ದೇಶವಾಗಿತ್ತು' ಎಂದು ಟೊರೆಸ್ ಹೇಳಿದ್ದಾರೆ.
ಸ್ಪೇನ್ ಪರ ಮಿಡ್ ಫೀಲ್ಡರ್ ನಲ್ಲಿ ಕ್ಸಾವಿ ಹೆನಾಂಡೆಜ್ ಹಾಗೂ ಚಾವಿ ಅಲಾನ್ಫೋ ಉತ್ತಮ ಆಟ ಪ್ರದರ್ಶಿಸಿ ಅನೇಕ ಬಾರಿ ಐರ್ಲೆಂಡ್ ಗೋಲ್ ಕೀಪರ್ ಗೆ ಕಾಟ ಕೊಟ್ಟರು.
ತಮ್ಮ ಉತ್ತಮ ಫಾರ್ಮ್ ಮುಂದುವರೆಸಿದ 49ನೇ ನಿಮಿಷದಲ್ಲಿ ಸಿಲ್ವಾ ಹಾಗೂ 83ನೇ ನಿಮಿಷದಲ್ಲಿ ಫ್ಯಾಬ್ರಿಗಾಸ್ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಗೋಲು ಗಳಿಸಿದರು. 4ನೇ ನಿಮಿಷದಲ್ಲಿ ಹಾಗೂ 70ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಟೊರೆಸ್ ಫಾರ್ಮ್ ಗೆ ಮರಳಿರುವುದು ಎದುರಾಳಿಗಳಿಗೆ ಎಚ್ಚರಿಕೆ ಗಂಟೆ ಬಾರಿಸಿದೆ.
| ಸ್ಪೇನ್ | 4 - 0 | ಐರ್ಲೆಂಡ್ |
| 20(6) | ಗೋಲು ಯತ್ನ (ಗುರಿಗೆ ಹತ್ತಿರವಾಗಿದ್ದು) | 4(2) |
| 8 | ಕಾರ್ನರ್ಸ್ | 2 |
| 9 | ಫೌಲ್ಸ್ | 16 |
| 6 | ಆಫ್ ಸೈಡ್ | 1 |
| 2 | ಹಳದಿ ಕಾರ್ಡ್ | 3 |
| 0 | ಕೆಂಪು ಕಾರ್ಡ್ | 0 |
ಜೂನ್ 19 ರ ಮಧ್ಯರಾತ್ರಿ ಇದೇ ಮೈದಾನದಲ್ಲಿ ಉತ್ತಮ ಆಟವಾಡುತ್ತಿರುವ ಕ್ರೋಷಿಯಾ ವಿರುದ್ಧ ಸ್ಪೇನ್ ತನ್ನ ಮುಂದಿನ ಪಂದ್ಯವನ್ನು ಆಡಲಿದೆ. ಈ ಪಂದ್ಯವನ್ನು ಗೆದ್ದವರು ಸಿ ಗುಂಪಿನ ಅಗ್ರಸ್ಥಾನ ಪಡೆದು ಮುಂದಿನ ಹಂತಕ್ಕೇರಲಿದ್ದಾರೆ. ಟೂರ್ನಿಯಿಂದ ಹೊರಬೀಳುವ ಹಾದಿಯಲ್ಲಿರುವ ಐರ್ಲೆಂಡ್ ತಂಡ ಇಟಲಿ ವಿರುದ್ಧ ಸೆಣಸಲಿದೆ. ಇಟಲಿ ಪಾಲಿಗೆ ಇದು ಮಹತ್ವದ ಪಂದ್ಯವಾಗಿದೆ.












Click it and Unblock the Notifications