ಇಂದಿನ ಮಕ್ಕಳಿಗೆ ABCD ಹೀಗೆ ಹೇಳಿಕೊಡಬಹುದಾ?

ಬೆಂಗಳೂರು, ಜೂನ್ 14: ಇದು ಹೇಳಿಕೇಳಿ ಮಾಹಿತಿ ತಂತ್ರಜ್ಞಾನ ಯುವ. ಆದರೆ ನಮ್ಮ ಶಿಕ್ಷಣವೋ ಇನ್ನೂ ಯಾವುದೋ ಕಾಲಘಟ್ಟದಲ್ಲಿದೆ. ಆದರೂ ಸ್ಥಿತಿವಂತರು ಕಾಲಕ್ಕೆ ತಕ್ಕಂತೆ ತಮ್ಮ ಮುದ್ದು ಕಂದಮ್ಮಗಳಿಗೆ ಓನಾಮಾಗಳನ್ನು ಮುಕ್ತವಾಗಿ ಕಲಿಸಿಕೊಡಲು ಹಾತೊರೆಯುತ್ತಾರೆ.

ಹಾಗಂತ ಇಲ್ಲೊಂದು ಉದಾಹರಣೆಯಿದೆ ನೋಡಿ. ಏನಪಾ ಅಂದರೆ ಐಟಿ ಮಂದಿಗೆ ಈ ಐಡಿಯಾ ಬಂದಿದ್ದು ತಮ್ಮ ಮಕ್ಕಳಿಗೆ ಓನಾಮಾ ಕಲಿಸಿಕೊಡಲು ತಮ್ಮದೇ ಆದಂತಹ ಒಂದು ಚಾರ್ಟ್ ಸಿದ್ಧಪಡಿಸಿಕೊಂಡಿದ್ದಾರೆ.

alphabets-taught-in-information-technology-age
ಅದಕ್ಕೂ ಮುನ್ನ, ಇಂದಿನ ಮಕ್ಕಳೂ ಅಷ್ಟೇ ಸ್ಲೇಟು, ಬಳಪ ಹಿಡಿಯುವ ಕಾಲದಲ್ಲಿ ಕಂಪ್ಯೂಟರು, ಮೌಸು ಹಿಡಿಯುತ್ತಿವೆ. ಶಾಲೆಯಲ್ಲೂ ಅಷ್ಟೇ ನರ್ಸರಿ ಮಕ್ಕಳನ್ನು AV Hall ಗೆ ಕರೆದುಕೊಂಡು ಹೋಗಿ, ಕಂಪ್ಯೂಟರ್ ದರುಶನ ಮಾಡಿಸುತ್ತಾರೆ.

ಮೊನ್ನೆ ಸಾಫ್ಟ್ ವೇರ್ ಇಂಜಿನಿಯರ್ ಮಿತ್ರನೊಬ್ಬ ಹೇಳಿದ ಮಾತು ಇಂದಿನ ಐಟಿ ಯುಗಕ್ಕೆ ಹಿಡಿದ ಕನ್ನಡಿಯಾಗಿತ್ತು. ಏನಂದರೆ ಆ ಟೆಕ್ಕಿ ಮಿತ್ರ ತನ್ನ ಮುದ್ದು ಕಂದನನ್ನು ಒಮ್ಮೆ ಆತನ ಕಚೇರಿಗೆ ಕರೆದುಕೊಂಡು ಹೋಗಿದ್ದರಂತೆ. ಆ ಮಗುವೋ ಖುಷಿಯಾಗಿ ಅಲ್ಲಿಂದ ಇಲ್ಲಿಗೆ ಓಡಾಡುತ್ತಾ, ಅಲ್ಲಿ ಸಾಲುಸಾಲಾಗಿದ್ದ ಕಂಪ್ಯೂಟರುಗಳನ್ನು ನೋಡುತ್ತಿತ್ತಂತೆ. ಕೊನೆಗೆ ಅಪ್ಪನ ತೆಕ್ಕೆಗೆ ಬಿದ್ದು 'ಅಪ್ಪಾ. ಇದು computer park ಅಲ್ವಾ, ಅಪ್ಪಾ?' ಅಂತ ಅಬೋಧ ನಗೆ ಚೆಲ್ಲಿತಂತೆ.

ಸರಿ ಅದೆಲ್ಲ ಹಾಗಿರಲಿ. ಇಲ್ಲಿರುವ ಐಟಿ ಚಾರ್ಟ್ ಸ್ವಲ್ಪ ನೋಡಿ. A for Apple, B for Bluetooth, C for Chat, D for Download ಸಾಕಲ್ವಾ. ಮುಂದಿನದನ್ನು ನೀವೇ ನೋಡಿಕೊಳ್ಳಿ. ಕೊನೆಯಲ್ಲಿ Z for Zorpia! ಈ ಪದಗಳ ಅರ್ಥಗಳು, ಅವುಗಳ ಪ್ರಾಮುಖ್ಯತೆಗಳ ಬಗ್ಗೆಯೂ ಒಂಚೂರು ಹೇಳಿಕೊಟ್ಟರೆ ಮುಂದೊಂದು ದಿನ ಮಗುವಿನ ಐಟಿ ಶಿಕ್ಷಣ ಸಲೀಸಾದೀತು. ಏನಂತೀರಿ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+