ಎಸ್ ಬಿಐನಲ್ಲಿ 9,500 ಹೊಸ ನೇಮಕಾತಿ

ರೀಟೇಲ್ ಬ್ಯಾಂಕಿಂಗ್ ಪೈಪೋಟಿ ಹಾಗೂ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸಲು ಹೆಚ್ಚಿನ ನೇಮಕಾತಿ ಅಗತ್ಯವಿದೆ ಎಂದು ಎಸ್ ಬಿಐ ಚೇರ್ ಮನ್ ಪ್ರತೀಪ್ ಚೌಧರಿ ಹೇಳಿದ್ದಾರೆ.
ಎಸ್ ಬಿಐ ವಾರ್ಷಿಕ 2011-12ರ ವರದಿಯಲ್ಲಿ ತನ್ನ ಷೇರುದಾರರಿಗೆ ನೀಡಿರುವ ಪತ್ರದಲ್ಲಿ ಪ್ರತೀಪ್ ಈ ರೀತಿ ಹೇಳಿದ್ದಾರೆ. ಪೈಪೋಟಿಗೆ ತಕ್ಕಂತೆ ಮಾನವ ಸಂಪನ್ಮೂಲ ಹಾಗೂ ತಂತ್ರಜ್ಞಾನ ಬಳಕೆ ಆಗಬೇಕಿದೆ ಎಂದಿದ್ದಾರೆ.
ಸರ್ಕಾರಿ ಸ್ವಾಮ್ಯದ ಎಸ್ ಬಿಐ ವರದಿ ಪ್ರಕಾರ ಕಳೆದ ಆರ್ಥಿಕ ವರ್ಷದಲ್ಲಿ 7,452 ಜನ ಉದ್ಯೋಗಗಳನ್ನು ಸಂಸ್ಥೆ ಕಳೆದುಕೊಂಡಿದೆ. ಆದರೆ, ಈ ಆರ್ಥಿಕ ವರ್ಷದಲ್ಲಿ 9,500 ಹೊಸ ನೇಮಕಾತಿ ಮಾಡಿಕೊಳ್ಳುವ ಮೂಲಕ ಮಾನವ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳಲಾಗುತ್ತದೆ. 2012-13ರಲ್ಲಿ 9,500ಕ್ಕೂ ಅಧಿಕ ಕ್ಲಕ್ ಹುದ್ದೆಗಳು ಲಭ್ಯವಿರುತ್ತದೆ ಎಂದು ಬ್ಯಾಂಕ್ ಪ್ರಕಟಿಸಿದ್ದಾರೆ.
ಮಾರ್ಚ್ 31, 2012ಕ್ಕೆ ಅನ್ವಯವಾಗುವಂತೆ ಎಸ್ ಬಿಐ ನಲ್ಲಿ ಶಾಶ್ವತ ಉದ್ಯೋಗಿಗಳ ಸಂಖ್ಯೆ 2,15,481ನಷ್ಟಿದೆ.












Click it and Unblock the Notifications