ಸಮಯಕ್ಕೆ ಸಿಗದ ಸಂಬಳ, ಬಿಪಿಒ ಉದ್ಯೋಗಿ ನೇಣಿಗೆ ಶರಣು

BPO employee Suicide Bangalore
ಬೆಂಗಳೂರು, ಜೂ.11: ಕಂಪನಿಯಿಂದ ಸರಿಯಾದ ಸಮಯಕ್ಕೆ ಸಿಗದ ಸಂಬಳ, ಹೆಚ್ಚಿದ ಸಾಲಬಾಧೆ ತಡೆಯಲಾರದೆ ಬಿಪಿಒ ಉದ್ಯೋಗಿಯೊಬ್ಬಳು ಭಾನುವಾರ (ಜೂ.10) ನೇಣಿಗೆ ಶರಣಾಗಿದ್ದಾಳೆ.

ಆಂಧ್ರಪ್ರದೇಶದ ಚಿತ್ತೂರಿನ ಮದನಪಲ್ಲಿ ಮೂಲದ 21 ವರ್ಷ ವಯಸ್ಸಿನ ಶೇಖ್ ಹಸೀನಾ ಹೆಬ್ಬಾಳದ ತನ್ನ ಪಿಜಿಯಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆಗೆ ಶರಣಾಗುವುದಕ್ಕೂ ಮುನ್ನ ಶೇಖ್ ಹಸೀನಾ ತನ್ನ ರೂಮ್ ಮೇಟ್ ಅಫ್ಸರ್ ಕೌಸರ್ ಜೊತೆ ಭಾರಿ ಕಿತ್ತಾಟ ನಡೆಸಿದ್ದಾಳೆ. ಎಂದು ತಿಳಿದುಬಂದಿದೆ. ಶೇಖ್ ಹಸೀನಾ ಆತ್ಮಹತ್ಯೆ ಪತ್ರವನ್ನು ಬರೆದಿಟ್ಟಿಲ್ಲ. ತನಿಖೆ ಮುಂದುವರೆದಿದೆ ಎಂದು ಹೆಬ್ಬಾಳದ ಪೊಲೀಸರು ಹೇಳಿದ್ದಾರೆ.

ಹಸೀನಾಳಿಗೆ ಬಂದಿದ್ದ ಸಮಸ್ಯೆ ಏನು?: ಹಸೀನಾಳಿಗೆ ತ್ವರಿತವಾಗಿ ಒಂದಷ್ಟು ಹಣ ಬೇಕಿತ್ತು. ತನ್ನ ರೂಮ್ ಮೇಟ್ ಕೌಸರ್ ಅವರ ಎಟಿಎಂ ಕಾರ್ಡ್ ಬಳಸಿಕೊಂಡು 4,000 ರು. ಡ್ರಾ ಮಾಡಿಕೊಂಡಿದ್ದಳು. ಒಂದು ತಿಂಗಳೊಳಗೆ ದುಡ್ಡು ಹಿಂತಿರುಗಿಸುವ ಭರವಸೆ ನೀಡಿದ್ದ ಹಸೀನಾ, ಹಣ ವಾಪಸ್ ಮಾಡುವಲ್ಲಿ ವಿಫಲಳಾದಳು.

ಬಿಪಿಒ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ಹಸೀನಾಳಿಗೆ ಸಮಯಕ್ಕೆ ಸರಿಯಾಗಿ ಸಂಬಳ ಸಿಗುತ್ತಿರಲಿಲ್ಲ. ಹೀಗಾಗಿ ಕೈ ಖರ್ಚಿಗಾಗಿ ಆಗಾಗ ರೂಮ್ ಮೇಟ್ ಸೇರಿದಂತೆ ಕೆಲ ಗೆಳತಿಯರ ಬಳಿ ಸಾಲ ಮಾಡುತ್ತಿದ್ದಳು. ಆದರೆ, ಈ ಬಾರಿ ಸಂಸ್ಥೆಯಿಂದ ಸಂಬಳ ಸಿಗುವುದು ತೀರಾ ವಿಳಂಬವಾಗಿತ್ತು. ಜೊತೆಗೆ ರೂಮ್ ಮೇಟ್ ಕೂಡಾ ಆದಷ್ಟು ಬೇಗ ಹಣ ವಾಪಸ್ ಮಾಡುವಂತೆ ದುಂಬಾಲು ಬಿದ್ದಿದ್ದಳು.

ಸಂಜೆಯೊಳಗೆ ಹಣ ನೀಡದಿದ್ದರೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಕೌಸರ್ ಹೆದರಿಸಿದಾಗ, ಹಸೀನಾ ಬೆಚ್ಚಿಬಿದ್ದು ಹೊರ ನಡೆದಿದ್ದಳು.

ಹಸೀನಾಳ ಸುಳಿವು ಸಿಗದಿದ್ದಾಗ ಕೌಸರ್ ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಹಸೀನಾಳಿಗೆ ಸಾಲ ಕೊಟ್ಟ ಕತೆ ಹೇಳಿಕೊಂಡಿದ್ದಾಳೆ, ಹಸೀನಾಳನ್ನು ಠಾಣೆಗೆ ಕರೆದುಕೊಂಡು ಬರುವಂತೆ ಪೋಲೀಸರು ಸೂಚಿಸಿದ್ದಾರೆ.

ನಂತರ ಹಸೀನಾ ಹಾಗೂ ಕೌಸರ್ ಮುಂದೆ ಕೂಡಿಸಿಕೊಂಡು ಇಬ್ಬರಿಗೂ ಪೊಲೀಸರು ಬುದ್ಧಿವಾದ ಹೇಳಿದ್ದಾರೆ. ಹಸೀನಾಳ ತಂದೆಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಹಸೀನಾಳ ತಂದೆ ಕೌಸರ್ ಗೆ ಕರೆ ಮಾಡಿ 'ತಕ್ಷಣವೇ ಬೆಂಗಳೂರಿಗೆ ಹೊರಟು ಬರುತ್ತೇನೆ. ಹಸೀನಾಳಿಗೆ ಬುದ್ಧಿ ಹೇಳುತ್ತೇನೆ. ನಿಮ್ಮ ದುಡ್ಡು ನಿಮಗೆ ಸಿಗುತ್ತದೆ' ಎಂದು ಭರವಸೆ ನೀಡಿದ್ದಾರೆ.

ಠಾಣೆಯಿಂದ ಪಿಜಿಗೆ ಬಂದ ಇಬ್ಬರ ನಡುವೆ ಇದ್ದ ಬಿಕ್ಕಟ್ಟು ಪರಿಹಾರವಾಗದೆ ಮತ್ತಷ್ಟು ಉಲ್ಬಣವಾಗಿದೆ. ಹಸೀನಾಳನ್ನು ಹೀನಾಮಾನವಾಗಿ ತರಾಟೆಗೆ ತೆಗೆದುಕೊಂಡ ಕೌಸರ್, ರೂಮ್ ಗೆ ಹೋಗದೆ ಊಟಕ್ಕೆ ಹೋಗಿದ್ದಾಳೆ. ಸಾಮಾನ್ಯವಾಗಿ ಜೊತೆಯಲ್ಲಿ ಊಟಕ್ಕೆ ಹೋಗುತ್ತಿದ್ದ ಹಸೀನಾ ಒಬ್ಬಳೇ ರೂಮ್ ನಲ್ಲಿ ಉಳಿದಿದ್ದಾಳೆ.

ಉಟ ಮುಗಿಸಿ ಬಂದ ಕೌಸರ್, ರೂಮ್ ಬಾಗಿಲು ಬಡಿದಿದ್ದಾಳೆ. ಆದರೆ, ಹಸೀನಾಳಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಅನುಮಾನಗೊಂಡು ಪಿಜಿ ಮಾಲೀಕರಿಗೆ ಹೇಳಿದ್ದಾಳೆ. ಕೊನೆಗೆ ರೂಮಿನ ಕಿಟಕಿ ಬಾಗಿಲು ಸರಿಸಿ ನೋಡಿದಾಗ ಹಸೀನಾಳ ನೇಣು ಬಿಗಿದುಕೊಂಡಿರುವುದು ಕಾಣಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+