ನಾಗಪುರ: ನಿತಿನ್‌ ಗಡ್ಕರಿ ಪುತ್ರ ಸಾರಂಗ್‌ ಮದುವೆ ಜೂ24

bjp-president-gadkari-son-sarang-marriage-june24
ನಾಗಪುರ, ಜೂನ್ 8: ಎರಡನೆಯ ಬಾರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಗೊಂಡ ನಿತಿನ್‌ ಗಡ್ಕರಿ ಅವರ ಪುತ್ರ ಸಾರಂಗ್‌ ಇದೇ ಆಷಾಢ ಮಾಸ, ಜೂನ್‌ 24ರಂದು ನಾಗಪುರದಲ್ಲಿ ಮದುವೆಯಾಗಲಿದ್ದಾರೆ. ಅರ್ಧಕ್ಕರ್ಧ ಹೊಟ್ಟೆ ಕರಗಿಸಿಕೊಂಡು slim n' trim ಆಗಿರುವ ಗಡ್ಕರಿ ಇದೀಗ ಮಗನ ವಿವಾಹಕ್ಕಾಗಿ ಲವಲವಿಕೆಯಿಂದ ಓಡಾಡುತ್ತಿದ್ದಾರೆ.

ಅಂದಹಾಗೆ ಗಡ್ಕರಿಯವರ ಎರಡನೆಯ ಪುತ್ರ ಸಾರಂಗ್ ತನ್ನ classmate ಮಧುರಾ ರೋದಿ ಅವರನ್ನು ಇದೇ 24ರಂದು ಮದುವೆಯಾಗಲಿದ್ದಾರೆ. ಮದುವೆ ಸಂಬಂಧ ಜುಲೈ 2ರಂದು ನವದೆಹಲಿಯ ಅಶೋಕ ಹೋಟೆಲ್‌ನಲ್ಲಿ ಔತಣ ಕೂಟ ಏರ್ಪಡಿಸಲಾಗಿದೆ.

ಸಾರಂಗ್ ಮತ್ತು ಮಧುರಾ ಇಬ್ಬರೂ ಇಂಜಿನಿಯರಿಂಗ್ ಶಿಕ್ಷಣವನ್ನು ಒಟ್ಟಿಗೆ ಪೂರ್ತಿಗೊಳಿಸಿದ್ದಾರೆ. ಮಧುರಾ ಕೆಲ ಕಾಲ ಇಂಜಿನಿಯರಿಂಗ್ ಉಪನ್ಯಾಸಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಮಧುರಾ ಅವರ ತಂದೆ ದಿಲೀಪ್ ರೋದಿ ಅವರು chartered accountant. ಆದರೆ ಇದು love marriage ಅಲ್ಲ. ಬದಲಿಗೆ arranged marriage ಎಂದು ಕುಟುಂಬ ಮೂಲಗಳು ತಿಳಿಸಿವೆ.

ಈ ಬಾರಿ ಕಟ್ಟಾ ಸಾಂಪ್ರದಾಯಿಕವಾಗಿ ಮತ್ತು ಸರಳವಾಗಿ ಮದುವೆ ನಡೆಸಲು ಬಿಜೆಪಿಯ ಸಾರಥಿ ನಿರ್ಧರಿಸಿದ್ದಾರೆ. ಗಮನಾರ್ಹವೆಂದರೆ ಮೂರು ವರ್ಷಗಳ ಹಿಂದೆ ಗಡ್ಕರಿಯ ಹಿರಿಯ ಪುತ್ರ ನಿಖಿಲ್ ರ ಮದುವೆ ನ ಭೂತೋ ನ ಭವಿಷ್ಯತ್ ಎಂಬಂತೆ ದಾಂಧೂಮ್ ಆಗಿ ನಡೆದಿತ್ತು. ಆಗ ಗಣ್ಯಾತಿಗಣ್ಯ ಅತಿಥಿಗಳನ್ನು ಹೊತ್ತು ಬರೋಬ್ಬರಿ 43 ವಿಮಾನಗಳು ನಾಗಪುರದ ಮೇಲೆ ಹಾರಾಡಿದ್ದವು. ಸುಮಾರು 1 ಲಕ್ಷ ಮಂದಿ ಮದುವೆಗೆ ಆಗಮಿಸಿದ್ದಾರೆ. ಗಡ್ಕರಿಗೆ ಒಬ್ಬ ಪುತ್ರಿಯಿದ್ದು, ಅವರ ಹೆಸರು ಕೇತಕಿ.

ಬಿಜೆಪಿ ಅಧ್ಯಕ್ಷ ನಿತಿನ್‌ ಗಡ್ಕರಿ ಅವರು ತಮ್ಮ ಪುತ್ರನ ವಿವಾಹಕ್ಕೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಮಂತ್ರಿಸಿದ್ದಾರೆ. ಗಡ್ಕರಿ ಅವರು ಕಳೆದ ವಾರ ಸೋನಿಯಾ ಅವರ ನಿವಾಸಕ್ಕೆ ತೆರಳಿ ಪುತ್ರ ಸಾರಂಗ್‌ನ ಮದುವೆಗೆ ಆಮಂತ್ರಣ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+