Get Updates
Get notified of breaking news, exclusive insights, and must-see stories!

ಹಸ್ತಮೈಥುನ, ಸಲಿಂಗಕಾಮಕ್ಕೆ ವ್ಯಾಟಿಕನ್ ಗರಂ

vatican-slams-nun-homosexuality-masturbation-book
ವ್ಯಾಟಿಕನ್ ನಗರ, ಜೂನ್ 5: ವ್ಯಾಟಿಕನ್ ಸಂತರು ಸಲಿಂಗಕಾಮ, ಹಸ್ತಮೈಥುನ ಕುರಿತಾದ ಪುಸ್ತಕದ ವಿರುದ್ಧ ಕಿಡಿಕಾರಿದ್ದು, ಕ್ಯಾಥೊಲಿಕ್ ಭೋದನೆಗಳು ಇದಕ್ಕೆ ವಿರುದ್ಧವಾಗಿವೆ ಎಂದು ಗುಡುಗಿದ್ದಾರೆ. ಅಮೆರಿಕದ ಕ್ಯಾಥೊಲಿಕ್ ಮಹಿಳಾ ಪಾದ್ರಿಯೊಬ್ಬರು ಬರೆದಿರುವ ಈ ಪುಸ್ತಕವು ಹಸ್ತಮೈಥುನ, ಸಲಿಂಗಕಾಮ ಮತ್ತು ವಿಚ್ಛೇಧನದಂತಹ ವಿಷಯಗಳನ್ನು ಯಾವುದೆ ಎಗ್ಗುಸಿಗ್ಗಿಲ್ಲದೆ ಯಥೇಚ್ಛವಾಗಿ ಬೋಧಿಸಿದೆ.

2006ರಲ್ಲಿಯೇ Margaret Farley ಬರೆದಿರುವ Just Love - A Framework for Christian Sexual Ethics ಎಂಬ ಪುಸ್ತಕವು ಲೈಂಗಿಕ ನೈತಿಕತೆ ವಿಷಯದಲ್ಲಿ ಕ್ಯಾಥೊಲಿಕ್ ಬೋಧನೆಗಳಿಗೆ ತದ್ವಿರುದ್ಧವಾಗಿದೆ ಎಂದು ವ್ಯಾಟಿಕನ್ ಹೇಳಿಕೆ ನೀಡಿದೆ.

ಈ ಪುಸ್ತಕದಲ್ಲಿರುವುದು ಚರ್ಚ್ ಬೋಧನೆಗಳಿಗೆ ಅನುಗುಣವಾಗಿಲ್ಲ. ಚರ್ಚ್ ದೃಷ್ಟಿಯಲ್ಲಿ ಮಹಾಪರಾಧಗಳು ಎಂದು ಪರಿಗಣಿಸಿರುವ ವಿಷಯಗಳ ಪಟ್ಟಿಗೆ ಇಲ್ಲಿನ ಧಾರ್ಮಿಕ ಶಾಲೆಗಳು ಒಪ್ಪಿಗೆ ಸೂಚಿಸುತ್ತಾ ವ್ಯಾಟಿಕನ್ ಹೇಳಿಕೆಗೆ ಅಖಂಡ ಬೆಂಬಲ ವ್ಯಕ್ತಪಡಿಸಿವೆ.

ಈ ವಿವಾದಾತ್ಮಕ ಪುಸ್ತಕದ ಬಗ್ಗೆ ಅಧ್ಯನ ನಡೆಸಿರುವ Congregation for the Doctrine of the Faith (CDF), ಅದರಲ್ಲಿರುವ ಪ್ರತಿಯೊಂದು ಆಕ್ಷೇಪಾರ್ಹ ವಿಷಯಗಳ ವಿರುದ್ಧ ಕಿಡಿಕಾರಿದೆ.

ಹಸ್ತಮೈಥುನ ಎಂಬುದು ಅತಿ ಸೂಕ್ಷ್ಮದ ಮತ್ತು ಅತಿರೇಕದ ರೋಗಿಷ್ಠ ಲಕ್ಷಣ. ಇನ್ನು ಸಲಿಂಗಕಾಮ ಸಹ ಅತಿರೇಕದ ಕ್ರಿಯೆ. ಅದು ಪಾಪಪ್ರಕೃತಿ. ಪತಿತಾವಸ್ಥೆಯದ್ದು. ಕಡೆಕುತನದ್ದು. ನಡತೆಗೆಟ್ಟಿದ್ದು. ಅದಕ್ಕೆಲ್ಲ ಮದುವೆಯೇ ಪರಿಪಾರ. ಅದನ್ನು ಯಾವುದೇ ವ್ಯಕ್ತಿಯಿಂದ ನಾಶಪಡಿಸಲು ಸಾಧ್ಯವಿಲ್ಲ. ಸಾವೊಂದೇ ಅದಕ್ಕೆ ಪರಿಹಾರ ಎಂದು ವ್ಯಾಟಿಕನ್ ಹೇಳಿದೆ.

ಹಸ್ತಮೈಥುನ ಹಿತಾನುಭವ, ಹೊರಹಾಕುವುದೇ ಶ್ರೇಯಸ್ಕರ: ಆದರೆ Sisters of Mercy ಸದಸ್ಯರು ಮತ್ತು Yale Divinity Schoolನ ಮಹಿಳಾ ಪ್ರೊಫೆಸರ್ ಚರ್ಚ್ ದೃಷ್ಟಿಯಲ್ಲಿ ಮಹಾಪಾಪಗಳು ಎಂದು ಪರಿಗಣಿತವಾಗಿರುವ ವಿಷಯಗಳಿಗೆ ವಿರುದ್ಧವಾಗಿ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.

ಈ ಹಸ್ತಮೈಥುನ ಎಂಬುದು ಯಾವುದೇ ನೈತಿಕ ಪ್ರಶ್ನೆಗಳನ್ನು ಎತ್ತುವುದಿಲ್ಲ. ಇದು ಅನೇಕ ಮಹಿಳೆಯರಿಗೆ ಹಿತಕರವಾಗಿದೆ. ಮಹಿಳೆಯರು ಇದರಿಂದ ಹಿತಾನುಭವ ಹೊಂದುತ್ತಾರೆ. ಅದನ್ನು ಮುಚ್ಚಿಡುವುದಕ್ಕಿಂತ ಹೀಗೆ ಹೊರಹಾಕುವುದೇ ಶ್ರೇಯಸ್ಕರ. ನಿಜವಾದ ಸಂಬಂಧಕ್ಕೆ ಇದು ಪೂರವಕವಾಗಿದೆ ಎಂದು ಪ್ರೊಫೆಸರ್ ಹೇಳಿದ್ದಾರೆ.

ಸಲಿಂಗಕಾಮದ ಬಗ್ಗೆ ಖ್ಯಾತ theologian ಒಬ್ಬರು 'ಒಂದೇ ಲಿಂಗದವರ ನಡುವಣ ಲೈಂಗಿಕ ಸಂಬಂಧಗಳು ಮತ್ತು ಆ ಚಟುವಟಿಕೆಗಳು ನಿಜಕ್ಕೂ ಸಮರ್ಥನೀಯ. ವಿರುದ್ಧ ಲಿಂಗದವರ ನಡುವಣ ಲೈಂಗಿಕ ಚುಟವಟಿಕೆಗಳಿಗೆ ಹೇಗೆ ಒಪ್ಪಿಗೆಯ ಮುದ್ರೆ ಒತ್ತುತ್ತೇವೋ ಅದೇ ರೀತಿ ಈ ಸಲಂಕಕಾಮವನ್ನೂ ಉತ್ತೇಜಿಸಬೇಕು, ಗೌರವಿಸಬೇಕು ಎಂದು ಆಕೆ ಹೇಳಿದ್ದಾರೆ.

ಎಲ್ಲ ಮದುವೆಗಳೂ ಕೊನೆಯವರೆಗೂ ಊರ್ಜಿತವಾಗಿರುತ್ತವೆ ಎನ್ನುವ ಹಾಗಿಲ್ಲ. ದಂಪತಿಯ ಪೈಕಿ ಇಬ್ಬರಿಗೂ ಮರು ಮದುವೆಗೆ ರಹದಾರಿಯಾಗುವ ವಿಚ್ಛೇಧನವನ್ನು ಉತ್ತೇಜಿದುವು ಸಹಜ ಧರ್ಮ. ಹೊಸ ಸಂಗಾತಿಯೊಂದಿಗೆ ಮದುವೆಯಾಗಿ ಸಂತೋಷದಿಂದ ಇರಲು ಯಾರದೇನು ಅಭ್ಯಂತರ ಎಂದು ಅವರು ಪ್ರಶ್ನಿಸುತ್ತಾ, ವಾಸ್ತವವನ್ನು ತೆರೆದಿಟ್ಟಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+