ಬೆಂಗಳೂರು ನಗರಕ್ಕೂ ಬರಲಿದೆ suburban rail

ಹಾಗಂತ ಈಗಲಿಂದಲೇ ಈ ಉಪನಗರ ರೈಲುಗಳನ್ನು ನಿಮ್ಮ ಮನಃಪಟಲದಲ್ಲಿ ಓಡಾಡಿಸಬೇಡಿ. ಏಕೆಂದರೆ ಇದು ಸಾಕಾರಗೊಳ್ಳಲಿರುವುದು ಇನ್ನೂ 15 ವರ್ಷಕ್ಕೆ, ಅಂದರೆ 2027ಕ್ಕೆ! ಆದರೆ ಈ ವಾರದಲ್ಲೇ Rail Indian Technical and Economic Services (RITES) ಸಂಸ್ಥೆಯು ಈ ಯೋಜನೆಯ ಸಾಧ್ಯಾಸಾಧ್ಯತೆಯ ವರದಿಯನ್ನು (feasibility study) ಮಂಡಿಸಲಿದೆ.
RITES ಕಳೆದ ತಿಂಗಳು ಈ ವರದಿಯನ್ನು ಸಿದ್ಧಪಡಿಸಿದ್ದು Directorate of Urban Land Transport (DULT)ಗೆ ಸದ್ಯದಲ್ಲೇ ಹಸ್ತಾಂತರಿಸಲಿದೆ. ನಂತರ ಸಂಬಂಧಪಟ್ಟವರು ಈ ಬಗ್ಗೆ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು DULT ಕಮಿಷನರ್ ವಿ ಮಂಜುಳ ಹೇಳಿದ್ದಾರೆ. ನಗರದಿಂದ 40-50 ಕಿ.ಮೀ. ವ್ಯಾಪ್ತಿಯಲ್ಲಿ ಬೆಂಗಳೂರನ್ನು ಸೀಳಿಕೊಂಡು ಈ ಟ್ರೈನುಗಳು ಓಡಾಡಲಿವೆ.
ನಗರ ಭೂ ಸಾರಿಗೆ ಇಲಾಖೆಯು ಹೆಚ್ಚಿನ ಅಧ್ಯಯನ ಕೈಗೊಂಡು ರೈಲ್ವೆ ಇಲಾಖೆಯಲ್ಲಿ ಲಭ್ಯವಿರುವ ಸಂಪನ್ಮೂಲಗಳು, ಅಂದಾಜು ವೆಚ್ಚಗಳು, ರೈಲ್ವೆ ಮಾರ್ಗಗಳ ಬಗ್ಗೆ road map ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ವಾಸ್ತವವಾಗಿ 2006-07ರಿಂದಲೇ ಇಂತಹ ಅಧ್ಯಯನ ನಡೆದಿತ್ತು. South Western Railway ವ್ಯಾಪ್ತಿಗೆ ಈ ಯೋಜನೆ ಒಳಪಡಲಿದೆ.
ಇನ್ನೇನು ಬಹುತೇಕ ನಗರದ ನಾಲ್ಕೂ ದಿಕ್ಕುಗಳಲ್ಲಿ ನಮ್ಮ ಮೆಟ್ರೋ ಸರಿದಾಡಲಿದೆ. ಅದರ ಜತೆಗೆ suburban rail ಸೇವೆಯೂ ಸಾಕಾರಗೊಂಡರೆ ರಾಜಧಾನಿಗೆ ರಸ್ತೆ ಸಂಪರ್ಕ ಸಲೀಸಾಗಲಿದೆ.
ಉದ್ದೇಶಿತ ಮಾರ್ಗಗಳು:
ರಾಮನಗರ - ಕೆಂಗೇರಿ - 32 ಕಿ.ಮೀ.
ಬಯ್ಯಪ್ಪನಹಳ್ಳಿ - ಹೊಸೂರು - 41 ಕಿ.ಮೀ.
ತುಮಕೂರು - ಯಶವಂತಪುರ - 64 ಕಿ.ಮೀ.
ಯಲಹಂಕ - ದೊಡ್ಡಬಳ್ಳಾಪುರ - 24 ಕಿ.ಮೀ.












Click it and Unblock the Notifications