ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಶಾಲಾ ಶಿಕ್ಷಕ ಸೆರೆ

ದುರ್ಗಾಲಾಲ್ ಮೀನಾ ಎಂಬ 22 ವರ್ಷದ ಯುವಕ ಇಲ್ಲಿನ ಪಂಡಿತ್ ಸುಖಲಾಲ್ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ 2011ರ ಅಕ್ಟೋಬರ್ ನಿಂದ ಶಿಕ್ಷಕನಾಗಿ ಕೆಲಸದಲ್ಲಿದ್ದ. ಆದರೆ 16 ವರ್ಷದ ವಿದ್ಯಾರ್ಥಿನಿಯೊಬ್ಬಳಿಗೆ ಉತ್ತಮ ಅಂಕಗಳನ್ನು ನೀಡುವುದಾಗಿ ಪುಸಲಾಯಿಸಿ, ಆಕೆಯ ಮೇಲೆ ನಿರಂತರವಾಗಿ ರೇಪ್ ಮಾಡಿದ್ದಾನೆ ಎಂದು ಹೆಚ್ಚುವರಿ ಎಸ್ಪಿ ಎನ್ ಎಲ್ ಪವನ್ ಶನಿವಾರ ತಿಳಿಸಿದ್ದಾರೆ.
ಅತ್ಯಾಚಾರ ವಿಷಯ ಬಹಿರಂಗಪಡಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ಶಿಕ್ಷಕ ದುರ್ಗಾಲಾಲ್ ಮೀನಾ ಬಾಲಕಿಗೆ ಬೆದರಿಸಿದ್ದ ಎಂದು ಎಸ್ಪಿ ಎನ್ ಎಲ್ ಪವನ್ ಹೇಳಿದ್ದಾರೆ.
ಆದರೆ ಬಾಲಕಿಯ ಪೋಷಕರಿಗೆ ವಿಷಯ ತಿಳಿದುಬಂದಾಗ ತಕ್ಷಣ ಅವರು ಶಿಕ್ಷಕ ದುರ್ಗಾಲಾಲ್ ಮೀನಾ ವಿರುದ್ಧ ಶುಕ್ರವಾರ FIR ದಾಖಲಿಸಿದರು. ಪೊಲೀಸರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದರು. ಅದೇವೇಳೆ ಆಪಾದಿತ ಶಿಕ್ಷಕ ದುರ್ಗಾಲಾಲ್ ಮೀನಾನನ್ನು ವಶಕ್ಕೆ ತೆಗೆದುಕೊಂಡರು.
ಅತ್ಯಾಚಾರ ವಿಷಯವು ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ಬಂದಿರಲಿಲ್ಲ. ಆದರೆ ವಿಷಯ ತಿಳಿಯುತ್ತಿದ್ದಂತೆ ಆರೋಪಿ ಶಿಕ್ಷಕ ದುರ್ಗಾಲಾಲ್ ಮೀನಾನನ್ನು ಮೇ 30ರಂದು ಸೇವೆಯಿಂದ ವಜಾಗೊಳಿಸಿದ್ದೇವೆ ಎಂದು ಶಾಲಾ ನಿರ್ದೇಶಕ ಲೋಕೇಶ್ ಸುಖವಾಲ್ ಹೇಳಿದ್ದಾರೆ.












Click it and Unblock the Notifications